ಬೆಂಗಳೂರು: ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿದ್ದು, ಮುಂದಿನ ಐದು ದಿನಗಳ ಕಾಲ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ ಐದು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅ.8ರಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ. ಉತ್ತರ ಒಳನಾಡಿನ ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ರಾಯಚೂರು, ಹಾವೇರಿ ಜಿಲ್ಲೆಗಳ ಕೆಲವು ಭಾಗದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ ಚಿತ್ರದುರ್ಗದಲ್ಲಿ 13 ಸೆಂ.ಮೀ., ಶಿವಮೊಗ್ಗ ಜಿಲ್ಲೆ ಆನವಟ್ಟಿಯಲ್ಲಿ 10 ಸೆಂ.ಮೀ., ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ 9 ಸೆಂ.ಮೀ., ಉತ್ತರ ಕನ್ನಡ ಜಿಲ್ಲೆ ಬನವಾಸಿಯಲ್ಲಿ 8 ಸೆಂ.ಮೀ., ಕಾರವಾರದಲ್ಲಿ 7 ಸೆಂ.ಮೀ., ತುಮಕೂರು ಜಿಲ್ಲೆಯ ಪಾವಗಡದಲ್ಲಿ 7 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅ.8ರಂದು ಕರ್ನಾಟಕದ ಕರಾವಳಿಯಲ್ಲಿ ಗಾಳಿವೇಗ ಅಧಿಕವಾಗಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ..
| ಜಲಾಶಯ |
ಗರಿಷ್ಠ ಮಟ್ಟ |
ಗರಿಷ್ಠ ಸಾಮರ್ಥ್ಯ |
ಇಂದಿನ ನೀರು |
ಇಂದಿನ ಒಳಹರಿವು |
ಇಂದಿನ ಹೊರ ಹರಿವು |
| ಲಿಂಗನಮಕ್ಕಿ ಜಲಾಶಯ |
1819ಅಡಿ |
156.62ಟಿಎಂಸಿ |
142.25ಟಿಎಂಸಿ |
8854ಕ್ಯೂಸೆಕ್ಸ್ |
4634ಕ್ಯೂಸೆಕ್ಸ್ |
| ಹಾರಂಗಿ ಜಲಾಶಯ |
2859 ಅಡಿ |
8.50ಟಿಎಂಸಿ |
8.24ಟಿಎಂಸಿ |
1814ಕ್ಯೂಸೆಕ್ಸ್ |
1037ಕ್ಯೂಸೆಕ್ಸ್ |
| ವರಾಹಿ ಜಲಾಶಯ |
594.36ಮೀಟರ್ |
31.10ಟಿಎಂಸಿ |
19.45ಟಿಎಂಸಿ |
456ಕ್ಯೂಸೆಕ್ಸ್ |
801ಕ್ಯೂಸೆಕ್ಸ್ |
| ತುಂಗಾ ಜಲಾಶಯ |
588.24ಮೀಟರ್ |
3.24 ಟಿಎಂಸಿ |
100.86ಟಿಎಂಸಿ |
30495ಕ್ಯೂಸೆಕ್ಸ್ |
30495ಕ್ಯೂಸೆಕ್ಸ್ |
| ಕಬಿನಿ ಜಲಾಶಯ |
2284 ಅಡಿ |
19.52ಟಿಎಂಸಿ |
16.93ಟಿಎಂಸಿ |
3382ಕ್ಯೂಸೆಕ್ಸ್ |
4816ಕ್ಯೂಸೆಕ್ಸ್ |
| ಕೆಆರ್ ಎಸ್ ಜಲಾಶಯ |
124.80ಅಡಿ |
49.45ಟಿಎಂಸಿ |
37.05ಟಿಎಂಸಿ |
13795ಕ್ಯೂಸೆಕ್ಸ್ |
6345ಕ್ಯೂಸೆಕ್ಸ್ |
| ಭದ್ರಾ ಜಲಾಶಯ |
186 ಅಡಿ |
71.535ಟಿಎಂಸಿ |
71.12ಟಿಎಂಸಿ |
14869ಕ್ಯೂಸೆಕ್ಸ್ |
11235ಕ್ಯೂಸೆಕ್ಸ್ |
| ಘಟಪ್ರಭಾ ಜಲಾಶಯ |
662.94ಮೀಟರ್ |
51ಟಿಎಂಸಿ |
51.00ಟಿಎಂಸಿ |
2207ಕ್ಯೂಸೆಕ್ಸ್ |
2207ಕ್ಯೂಸೆಕ್ಸ್ |
| ಮಲಪ್ರಭಾ ಜಲಾಶಯ |
633.83 ಅಡಿ |
37.73ಟಿಎಂಸಿ |
37.03ಟಿಎಂಸಿ |
5398ಕ್ಯೂಸೆಕ್ಸ್ |
2215ಕ್ಯೂಸೆಕ್ಸ್ |
| ಆಲಮಟ್ಟಿ ಜಲಾಶಯ |
519.60ಮೀಟರ್ |
123.081ಟಿಎಂಸಿ |
123.08ಟಿಎಂಸಿ |
16260ಕ್ಯೂಸೆಕ್ಸ್ |
16260ಕ್ಯೂಸೆಕ್ಸ್ |
from India & World News in Kannada | VK Polls https://ift.tt/3FoDda2