ಮಂಗಳೂರು: ಹಿರಿಯ ಸಾಹಿತಿ, ಸಂಶೋಧಕ ಪ್ರೊ.ಬಿ.ಎಂ ಇಚ್ಲಂಗೋಡು ಇನ್ನಿಲ್ಲ

ಮಂಗಳೂರು: ಹಿರಿಯ ಸಾಹಿತಿ, ಬ್ಯಾರಿ ಸಂಶೋಧಕ, ಪತ್ರಕರ್ತ, ನಿವೃತ್ತ ಉಪನ್ಯಾಸಕ ಪ್ರೊ. ಬಿ.ಎಂ. ಇಚ್ಲಂಗೋಡು ( 84) ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ನಗರದ ಅತ್ತಾವರ ನಂದಿಗುಡ್ಡೆಯ ನಿವಾಸಿಯಾಗಿದ್ದ ಬಿ.ಎಂ.ಇಚ್ಲಂಗೋಡು ಅವರಿಗೆ ಪತ್ನಿ, ನಾಲ್ವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಮೂಡುಬಿದಿರೆಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು, ನಿವೃತ್ತಿ ಬಳಿಕ ಮಂಗಳೂರಿನಲ್ಲಿ ನೆಲೆಸಿದ್ದರು. ಹಲವಾರು ಕೃತಿಗಳನ್ನು, ಬ್ಯಾರಿ ಭಾಷೆ ಕುರಿತು ಸಂಶೋಧನಾ ಗ್ರಂಥವನ್ನೂ ರಚಿಸಿದ್ದರು. ಬ್ಯಾರಿ ಕ್ಷೇತ್ರ ಕಾರ್ಯದಲ್ಲಿ ಆಳವಾಗಿ ಅಧ್ಯಯನ ನಡೆಸಿದ್ದ ಇಚ್ಲಂಗೋಡು ಅವರು ತಮ್ಮ ಇಳಿವಯಸ್ಸಿನಲ್ಲೂ ಅಧ್ಯಯನದಲ್ಲಿ ತೊಡಗಿಸಿ ಅನೇಕ ಯುವ ಸಂಶೋಧಕರಿಗೆ ಮಾರ್ಗದರ್ಶನವನ್ನು ನೀಡಿದ್ದರು.


from India & World News in Kannada | VK Polls https://ift.tt/3oJlqlR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...