ಕೊರೊನಾ ಕಾಲದಲ್ಲಿ ವಿಮಾ ಕಂಪನಿಗಳಿಗೆ ಲಾಸ್: ಇನ್ಶೂರೆನ್ಸ್ ಎಂದರೆ ಮಾರುದ್ದ ಓಡುವ ಜನ..!

ಪ್ರಮೋದ ಹರಿಕಾಂತ : ಕೊರೊನಾದಿಂದಾಗಿ ಹೆಚ್ಚಾಗುತ್ತಿರುವ ಸಾವು, ನೋವುಗಳಿಗೆ ಉಪಯೋಗಕ್ಕೆ ಬಾರದೆ ಇರುವುದರಿಂದ ಜನರು ವಿಮೆ ಎಂದರೆ ಮಾರುದ್ದ ಓಡುವ ಸ್ಥಿತಿ ಸೃಷ್ಟಿಯಾಗಿದೆ. ಎರಡನೇ ವರ್ಷವೂ ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾದಿಂದ ಸಾವಿನ ಸರಣಿ ಮುಂದುವರಿದಿದೆ. ಈಗಾಗಲೇ ಇರುವ ಜೀವ ವಿಮಾ ಪಾಲಿಸಿಗಳು ಕೊರೊನಾ ಸೋಂಕಿನಿಂದ ಆಗುವ ಹಾನಿ, ಸಾವನ್ನು ಅಪಘಾತ ಎಂದು ಪರಿಗಣಿಸದೇ ಇರುವುದರಿಂದ ಜೀವ ವಿಮೆ ಉಪಯೋಗಕ್ಕೆ ಬರುತ್ತಿಲ್ಲ. ಅಪಘಾತಕ್ಕಿಂತ ಕೊರೊನಾ ಭಯವೇ ಜನರಲ್ಲಿ ಹೆಚ್ಚಾಗಿದ್ದರಿಂದ ಹೊಸದಾಗಿ ವಿಮೆ ಮಾಡಿಸಲು ಯಾರೂ ಮುಂದಾಗುತ್ತಿಲ್ಲ. ಇದರಿಂದ ವಿಮೆ ಏಜೆಂಟರ ಆದಾಯವೂ ಕುಸಿದಿದೆ. ಕೊರೊನಾ ಮೊದಲ ಅಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದರು. ಸಣ್ಣ ವ್ಯಾಪಾರಿಗಳು, ದಿನಗೂಲಿ ನೌಕರರು ಸೇರಿ ಮಧ್ಯಮ ವರ್ಗ ಭಾರಿ ಆರ್ಥಿಕ ಹೊಡೆತಕ್ಕೆ ಒಳಗಾಗಿದ್ದರಿಂದ ಜೀವ ವಿಮೆ ಕಂತು ತುಂಬುವವರ ಸಂಖ್ಯೆಯೂ ಕಡಿಮೆಯಾಗಿದೆ. ಜೀವಮಾನದ ಉಳಿಕೆ ಸಲುವಾಗಿ ವಿಮೆ ಮಾಡಿಸುತ್ತಿದ್ದವರೂ ಈಗ ವಿಮೆ ಎಂದರೆ ಮಾರುದ್ದ ಓಡುತ್ತಿದ್ದಾರೆ. ಖಾಸಗಿ ವಿಮಾ ಕಂಪನಿಗಳ ಕಡೆಯಂತೂ ಜನ ತಿರುಗಿಯೂ ನೋಡುತ್ತಿಲ್ಲ ಎಂದು ಏಜೆಂಟರೊಬ್ಬರು ನೋವು ಹೇಳಿಕೊಂಡರು. ಕೆಲವೇ ಕೆಲವು ವಿಮಾ ಕಂಪನಿಗಳು ಕೋವಿಡ್‌ಗೋಸ್ಕರ ಪ್ರತ್ಯೇಕ ವಿಮಾ ಯೋಜನೆ ಜಾರಿಗೆ ತಂದಿವೆ. ಅದೆಲ್ಲವೂ ಅಲ್ಪಾವಧಿ ವಿಮೆಗಳು. ಈ ಹಿಂದಿನ ವಿಮಾ ಪಾಲಿಸಿಗಳು ಅಪಘಾತದಿಂದಾಗುವ ಅಂಗಾಂಗ ವೈಕಲ್ಯ ಅಥವಾ ಸಾವು ಇಂಥ ಪ್ರಕರಣಗಳನ್ನೇ ಕೇಂದ್ರಿತವಾಗಿ ಪರಿಹಾರ ಕೊಡುವ ಯೋಜನೆ ಹೊಂದಿವೆ. ಈಗ ಕೊರೊನಾವೇ ಜನರನ್ನು ಬಲಿ ಪಡೆಯುತ್ತಿರುವುದರಿಂದ ಅಂಥ ಸಾಮಾನ್ಯ ಪಾಲಿಸಿ ಮಾಡಿ ಏನು ಪ್ರಯೋಜನ? ಸದ್ಯ ಹೊಟ್ಟೆ ತುಂಬಿಸಿಕೊಳ್ಳಲು ಹಣ ಉಳಿಸಿಕೊಂಡರೆ ಸಾಕಲ್ಲವೆ ಎನ್ನುವುದು ಜನರ ಪ್ರಶ್ನೆ.


from India & World News in Kannada | VK Polls https://ift.tt/3ywvhQG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...