ಮ್ಯಾಕ್ಸ್‌ವೆಲ್‌ ಸ್ಟಾರ್‌ ಆಟಗಾರ ಅಲ್ಲ, 'ವಿನಾಶಕಾರಿ' ಬ್ಯಾಟ್ಸ್‌ಮನ್‌ ಎಂದ ಮಾರ್ಗನ್‌!

ಚೆನ್ನೈ: ವಿರುದ್ಧ 38 ರನ್‌ಗಳ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ನಾಯಕ , ಇಲ್ಲಿನ ಚೆಪಾಕ್ ಅಂಗಣದ ಪಿಚ್‌ ನೀಡುತ್ತಿದ್ದ ಅವಕಾಶಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲನಾಗಿದ್ದೇನೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಭಾನುವಾರ ನಡೆದಿದ್ದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌(78) ಹಾಗೂ ಎಬಿ ಡಿವಿಲಿಯರ್ಸ್ (76*) ಅದ್ಭುತ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ನೆರವಿನಿಂದ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 38 ರನ್‌ಗಳಿಂದ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಗೆದ್ದು ಬೀಗಿತು. ಕೆಕೆಆರ್‌ ಪರ ಕೊನೆಯಲ್ಲಿ ಆಂಡ್ರೆ ರಸೆಲ್‌ 31 ರನ್‌ಗಳ ಬಿರುಸಿನ ಆಟ ಪ್ರದರ್ಶನ ತೋರಿದರು. ಆದರೆ, ಆರ್‌ಸಿಬಿ ತಂಡದ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕೊಹ್ಲಿ ಪಡೆ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಜಯ ದಾಖಲಿಸಿತು. ಐಪಿಎಲ್‌ ಆವೃತ್ತಿಯಲ್ಲಿ ಆರಂಭಿಕ ಮೂರು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿರುವುದು ಆರ್‌ಸಿಬಿ ಇದೇ ಮೊದಲು. ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಐಯಾನ್‌ ಮಾರ್ಗನ್‌, "ಇಂದು ಆರ್‌ಸಿಬಿ ತಂಡದ ಬ್ಯಾಟಿಂಗ್‌ ದಿನವಾಗಿತ್ತು. ಇಲ್ಲಿನ ಎಂಎ ಚಿದಂಬರಂ ವಿಕೆಟ್‌ ನನ್ನನ್ನು ಸ್ಟಂಪ್ ಔಟ್‌ ಮಾಡಿದ್ದು, ಪಿಚ್‌ ನೀಡುತ್ತಿದ್ದ ಅವಕಾಶಗಳನ್ನು ನನ್ನಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.ಈ ವಿಕೆಟ್‌ನಲ್ಲಿ ಆರ್‌ಸಿಬಿ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದೆ," ಎಂದು ಹೇಳಿದರು. ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಪರ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ಐಯಾನ್‌ ಮಾರ್ಗನ್‌ ಮುಕ್ತಕಂಠದಿಂದ ಗುಣಗಾನ ಮಾಡಿದರು. "ಗ್ಲೆನ್‌ ಮ್ಯಾಕ್ಸ್‌ವೆಲ್ ಒಬ್ಬ ಸ್ಟಾರ್‌ ಆಟಗಾರ ಮಾತ್ರ ಅಲ್ಲ, ಅವರು ವಿನಾಶಕಾರಿ ಬ್ಯಾಟ್ಸ್‌ಮನ್‌. ಆಸೀಸ್‌ ಆಟಗಾರನಿಗೆ ಬೌಲಿಂಗ್‌ ಮಾಡಬಹುದು. ಆದರೆ, ಎಬಿ ಡಿವಿಲಿಯರ್ಸ್‌ಗೆ ಬೌಲಿಂಗ್‌ ಮಾಡುವುದು ಕಷ್ಟ. ಅವರಿಗೆ ನಮ್ಮ ಬಳಿ ಹೆಚ್ಚಿನ ಆಯ್ಕೆಗಳು ಇರಬೇಕಾಗುತ್ತದೆ. ನಾವು ಪಂದ್ಯದಲ್ಲಿ ಪ್ರತ್ಯೇಕವಾಗಿ ಒಬ್ಬರು ಅಥವಾ ಇಬ್ಬರಿಗೆ ಯೋಜನೆ ರೂಪಿಸಲು ಸಾಧ್ಯವಿಲ್ಲ. ಆದರೆ, ಆರ್‌ಸಿಬಿ ತಂಡದಲ್ಲಿ ಎಲ್ಲಾ ವಿಭಾಗಗಳಲ್ಲಿಯೂ ಡೆಪ್ತ್‌ ಹೊಂದಿದೆ. ನಾವು ಚೇಸಿಂಗ್‌ ಮಾಡುವಲ್ಲಿ ಹೆಣಗಾಡಿದ್ದೇವೆ. ಆದರೆ, ನಮ್ಮ ಪರ ಆಂಡ್ರೆ ರಸೆಲ್‌ ಕೊನೆಯಲ್ಲಿ ಉತ್ತಮ ಪ್ರಯತ್ನ ನಡೆಸಿದ್ದರು," ಎಂದು ಮಾರ್ಗನ್‌ ಹೇಳಿದರು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ ಕೇವಲ 9 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ಅದ್ಭುತ ಬ್ಯಾಟಿಂಗ್‌ ಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್ 49 ಎಸೆತಗಳಲ್ಲಿ 78 ರನ್‌ ಗಳಿಸಿದರೆ, ಎಬಿ ಡಿವಿಲಿಯರ್ಸ್ 34 ಎಸೆತಗಳಲ್ಲಿ ಅಜೇಯ 76 ರನ್‌ ಗಳಿಸಿದ್ದರು. ಆ ಮೂಲಕ ಬೆಂಗಳೂರು ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು 204 ರನ್‌ ಗಳಿಸಿತ್ತು. ಕೋಲ್ಕತಾ ನೈಟ್‌ ರೈಡರ್ಸ್ ಪರ ವರುಣ್‌ ಚಕ್ರವರ್ತಿ ಎರಡು ವಿಕೆಟ್‌ಗಳನ್ನು ಪಡೆದು ಯಶಸ್ವಿ ಬೌಲರ್‌ ಎನಿಸಿಕೊಂಡರು. ಕೋಲ್ಕತಾ ನೈಟ್‌ ರೈಡರ್ಸ್ ತಂಡ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಕೇವಲ ಎರಡು ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಐಯಾನ್‌ ಮಾರ್ಗನ್‌ ನಾಯಕತ್ವದ ಕೋಲ್ಕತಾ ನೈಟ್‌ ರೈಡರ್ಸ್ ಬುಧವಾರ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tvfdMf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...