ಕೋವಿಡ್‌ ನಿಯಂತ್ರಣಕ್ಕೆ ಅಘೋಷಿತ ಲಾಕ್‌ಡೌನ್: ರಾಜ್ಯಾದ್ಯಂತ ಸ್ಥಿತಿಗತಿ ಹೇಗಿದೆ?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಗುರುವಾರ ಒಂದೇ ದಿನ 25,798 ಪ್ರಕರಣಗಳ ರಾಜ್ಯದಲ್ಲಿ ವರದಿ ಆಗಿದೆ. ಈ ನಡುವೆ ರಾಜ್ಯಾದ್ಯಂತ ಭಾಗಶಃ ಲಾಕ್‌ಡೌನ್ ಜಾರಿಯಲ್ಲಿದೆ. ಆದರೆ ಅಘೋಷಿತ ಲಾಕ್‌ಡೌನ್ ಜನರಿಗೆ ಸಾಕಷ್ಟು ತೊಂದರೆಯನ್ನೂ ನೀಡುತ್ತಿದೆ. ಬೆಂಗಳೂರು ನಗರದದಲ್ಲಿ ಜನ ಸಂಚಾರ ಸಾಕಷ್ಟು ವಿರಳವಾಗಿದೆ. ಅಗತ್ಯ ಸಾಮಾಗ್ರಿಗಳನ್ನು ಹೊರತುಪಡಿಸಿ ಇತರ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಪಡೆದುಕೊಳ್ಳಲು ಮಾತ್ರ ಅವಕಾಶವಿದೆ. ಜನರ ಓಡಾಟಕ್ಕೆ ಅವಕಾಶ ಇದ್ದರೂ ಆತಂಕದಿಂದ ಮನೆಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿಲ್ಲ. ಇನ್ನು ಬಿಎಂಟಿಸಿ ಬಸ್‌ಗಳ ಸಂಚಾರ ಎಂದಿನಂತೆ ಇದೆ. ಆದರೆ ಬಸ್‌ಗಳಲ್ಲಿ ಜನರ ಸಂಖ್ಯೆ ತೀರಾ ಕಡಿಮೆ ಇದೆ. ಆಟೋ ರಿಕ್ಷಾಗಳಿಗೂ ಬಾಡಿಗೆ ಇಲ್ಲ. ಹಣ್ಣು ತರಕಾರಿ ಅಂಗಡಿಗಳ ಮುಂದೆ ಜನಸಂದಣಿ ಎಲ್ಲೂ ಕಾಣಸಿಗುತ್ತಿಲ್ಲ. ಮತ್ತೊಂದು ಕಡೆಯಲ್ಲಿ ಬಿಬಿಎಂಪಿಯಿಂದ ಕೋವಿಡ್ ಜಾಗೃತಿ ಮೂಡಿಸಲಾಗುತ್ತಿದೆ. ಮನೆಯಿಂದ ಅನಗತ್ಯವಾಗಿ ಹೊರಗಡೆ ಬಾರದಂತೆ ಅನೌನ್ಸ್ ಮಾಡಲಾಗುತ್ತಿದೆ. ಪೊಲೀಸರು ರೌಂಡ್ಸ್‌ನಲ್ಲಿ ಇದ್ದು ಜನ ಸೇರದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ರಾಜ್ಯದ ಇತರ ಜಿಲ್ಲೆಗಳ ಸ್ಥಿತಿಗತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೋವಿಡ್ ತೀವ್ರ ಸ್ವರೂಪದಲ್ಲಿ ಹರಡುತ್ತಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಂಗಳೂರು, ಮೈಸೂರು, ಕಲಬುರಗಿ, ಹಾಸನ, ಬಳ್ಳಾರಿ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಭಾಗಶಃ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ವ್ಯಾಪಾರಿಗಳಿಗೆ ಸಂಕಷ್ಟ ಕೋವಿಡ್‌ ಭಾಗಶಃ ಲಾಕ್‌ಡೌನ್‌ನಿಂದಾಗಿ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಸರ್ಕಾರದ ವಿರುದ್ಧ ಅವರು ಕೆಂಡಾಮಂಡಲರಾಗಿದ್ದಾರೆ. ಕಳೆದ ಬಾರಿಯ ಲಾಕ್‌ಡೌನ್‌ ನಿಂದ ಸಮಸ್ಯೆ ಅನುಭವಿಸುತ್ತಿದ್ದೇವೆ. ಇದೀಗ ಮತ್ತೆ 90% ಲಾಕ್‌ಡೌನ್ ಮಾಡಿರುವುದರಿಂದ ವ್ಯಾಪಾರ ಇಲ್ಲದೆ ಸಂಕಷ್ಟವನ್ನು ಅನುಭವಿಸುವಂತ್ತಾಗಿದೆ ಎಂಬುವುದು ವ್ಯಾಪಾರಿಗಳ ಅಳಲು. ಕೆಲವು ಕಡೆಯಲ್ಲಿ ಜನರ ನಿರ್ಲಕ್ಷ್ಯ ಭಾಗಶಃ ಲಾಕ್‌ಡೌನ್ ಜಾರಿಗೆ ತರಲಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಜನರ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ. ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿದೆ. ದೈಹಿಕ ಅಂತರ ಮರೆತು ಜನರು ಮಾರುಕಟ್ಟೆಯಲ್ಲಿ ಸೇರಿದ್ದಾರೆ. ಹಣ್ಣು, ತರಕಾರಿ ಖರೀದಿ ಮಾಡಲು ಮುಗಿಬಿದ್ದಿದ್ದಾರೆ.


from India & World News in Kannada | VK Polls https://ift.tt/3gytIuX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...