ಕೊಡಗು: ಗುಂಡು ಹೊಡೆದು, ಕತ್ತು ಕೊಯ್ದು ಮೂರು ದನಗಳ ಹತ್ಯೆಗೈದ ರಾಕ್ಷಸರು, ಮಾಂಸಕ್ಕಾಗಿ ಕೊಲೆ ಶಂಕೆ!

ಗೋಣಿಕೊಪ್ಪ : ಮೂರು ಹಸುಗಳನ್ನು ಗುಂಡು ಹೊಡೆದು ಹಾಗೂ ಕತ್ತು ಕೊಯ್ದು ಹತ್ಯೆ ಮಾಡಿದ ಘಟನೆ ತಿತಿಮತಿ ಸಮೀಪದ ದೇವರಪುರ ಗ್ರಾಮದಲ್ಲಿ ನಡೆದಿದೆ. ಗೋಣಿಕೊಪ್ಪ ವ್ಯಾಪ್ತಿಯ ದೇವರಪುರ ಗ್ರಾಪಂಗೆ ಒಳಪಡುವ ಹೆಬ್ಬಾಲೆ ಕಾಯಂಬೆಟ್ಟ ಎಸ್ಟೇಟ್‌ವೊಂದರಲ್ಲಿ ಈ ಕೃತ್ಯ ಕಂಡು ಬಂದಿದೆ. ಮೂರು ಹಸುಗಳ ಮೃತದೇಹ ಈ ರೀತಿ ಪತ್ತೆಯಾಗಿದ್ದು, ಮಾಂಸಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಕಟುಕರು ಹಸುವಿನ ಕಳೇಬರಹವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಸ್ಥಳೀಯರ ಪ್ರಕಾರ ಭಾನುವಾರ ಸಂಜೆ ಆರು ಗಂಟೆಗೆ ಎಸ್ಟೇಟ್‌ನ ಒಳಗೆ ಗುಂಡಿನ ಮೊರೆತ ಕೇಳಿಬಂದಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಶನಿವಾರದಂದು ಅಂಬುಕೋಟೆ ಬಳಿ ವಿದ್ಯುತ್‌ ತಂತಿ ತಗುಲಿ ಒಂದು ಗಬ್ಬದ ಮೃತಪಟ್ಟಿದೆ. ಕೆಲದಿನಗಳಿಂದ ದೇವರಪುರ ತಿತಿಮತಿ ಭಾಗದಲ್ಲಿ ಹಸುಗಳ ಕಳವು ಹೆಚ್ಚಾಗಿದೆ. ಎರಡು ದಿನದ ಹಿಂದೆ ಕೈಕೇರಿ ಗ್ರಾಮದ ಗುಡ್ಡೆಮನೆ ಪ್ರಾಣೇಶ್‌ ಅವರ ಹಸು ಕಾಣೆಯಾಗಿದೆ ಎಂದು ದೂರು ನೀಡಿದ್ದಾರೆ. ಘಟನೆ ಸ್ಥಳಕ್ಕೆ ವೃತ್ತ ನಿರೀಕ್ಷಕರು ಜಯರಾಮ್‌ ಹಾಗೂ ಉಪ ನಿರೀಕ್ಷಕರು ಸುಬ್ಬಯ್ಯ ಅವರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.


from India & World News in Kannada | VK Polls https://ift.tt/3n0wJpb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...