ಬನ್ನೇರುಘಟ್ಟ: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಭೇಟಿಕೊಡುವ ಪ್ರವಾಸಿಗರಿಗೆ ಸಂತಸದ ಸುದ್ದಿಯೊಂದು ಲಭಿಸಿದೆ. ಇಲ್ಲಿನ ಪ್ರಾಣಿಗಳ ಬದುಕಿನಲ್ಲಿ ಸಂತಾನ ಸಂಭ್ರಮ ಮನೆ ಮಾಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದ ಹುಲಿ, ಸಿಂಹ, ಸೇರಿದಂತೆ ಹಲವು ಪ್ರಾಣಿಗಳು ಮರಿ ಇಟ್ಟಿರುವುದು ಉದ್ಯಾನವನದೊಳಗಿನ ಸಂತಸ ಇಮ್ಮಡಿಸುವಂತೆ ಮಾಡಿದೆ. ಉದ್ಯಾನವನದ ಸಫಾರಿ ಆವರಣದಲ್ಲಿರುವ ಹುಲಿ ಅನುಷ್ಕಾ ಮತ್ತು ಸಿಂಹಿಣಿ ಸನಾ ತಲಾ ಎರಡು ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿದ್ದು, ಮರಿಗಳನ್ನು ದತ್ತು ಪಡೆಯಲು ಅವಕಾಶವಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ 230 ದತ್ತುದಾರರು, 299 ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಒಟ್ಟು 56,82,00 ರೂ. ನೀಡಿದ್ದು, ಸಾರ್ವಜನಿಕರ ಸಹಕಾರ ಮುಂದುವರಿಯಲಿ ಎಂದು ಅವರು ಮನವಿ ಮಾಡಿದರು. ದತ್ತುಗೆ ಲಭ್ಯವಿರುವ ಪ್ರಾಣಿಗಳು ಹೆಣ್ಣು ಹುಲಿ ಅನುಷ್ಕಾ ಮತ್ತು ಎರಡು ಹೆಣ್ಣು ಮರಿಗಳು, ಸಿಂಹಿಣಿ ಸನಾ ಮತ್ತು ಎರಡು ಹೆಣ್ಣು ಮರಿಗಳು. ಆನೆ ವೇದಾಳ ಹೆಣ್ಣು ಮರಿ, ಜೀಬ್ರಾ ಕಾವೇರಿಯ ಹೆಣ್ಣು ಮರಿ, ಹಿಪೊಟೊಮಸ್ ದೃಶ್ಯಾಳ ಗಂಡುಮರಿ, ಸಿಂಹಿಣಿ ಸಾನಿಯಾ ಮತ್ತು ಎರಡು ಹೆಣ್ಣು ಮರಿಗಳು, ಲಂಗೂರ್ ರೇಶ್ಮಿಯ ಹೆಣ್ಣು ಮರಿ ಸೇರಿದಂತೆ ಹಲವು ಪ್ರಾಣಿಗಳಿವೆ.
from India & World News in Kannada | VK Polls https://ift.tt/3al2MLp