ರಾಜ್ಯದಲ್ಲಿ ಕೋವಿಡ್‌ ಕರ್ಫ್ಯೂ ಮುಂದುವರಿಯುತ್ತಾ? ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಏನಂದ್ರು?

ಬೆಂಗಳೂರು: ಕೋವಿಡ್‌ ನಿಯಂತ್ರಣದ ನಿಟ್ಟಿನಲ್ಲಿ ರಾಜ್ಯದಲ್ಲಿ ಶನಿವಾರ ಹಾಗೂ ರವಿವಾರ ವೀಕೆಂಡ್‌ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಇದೀಗ ವೀಕೆಂಡ್‌ ಕರ್ಫ್ಯೂ ಮಾದರಿಯಲ್ಲಿ ಇತರ ದಿನಗಳಲ್ಲೂ ಜಾರಿಗೆ ಬರುತ್ತಾ ಎಂಬ ಗೊಂದಲ ಸೃಷ್ಟಿಯಾಗಿದೆ. ಈ ಕುರಿತಾಗಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಮಾತನಾಡಿದ್ದು ವೀಕೆಂಡ್ ಮಾದರಿಯ ಕರ್ಫ್ಯೂ ಸೋಮವಾರದಿಂದಲೂ ಮುಂದುವರೆಸಿದರೆ ಒಳ್ಳೆಯದು ಎಂಬ ಅಭಿಪ್ರಾಯ ಇದೆ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ. ವೀಕೆಂಡ್ ಮಾದರಿ ಕರ್ಫ್ಯೂವನ್ನು ಎಲ್ಲರೂ ಬೆಸ್ಟ್ ಅನ್ನುತ್ತಾರೆ, ಸರ್ಕಾರವೂ ಹಾಗೇ ಮಾಡಬೇಕು ಅಂತ ಇದೆ,ಆದರೆ ಜನ ಬೇಡ ಅಂತಿದ್ದಾರಲ್ಲ. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನಬಾರದು.ಜನರ ಜವಾಬ್ದಾರಿಯೂ ಇದೆ. ಸುಖಾಸುಮ್ಮನೆ ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡರು. ಚೈನ್ ಲಿಂಕ್ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರವೂ ಇದೇ ರೀತಿ ಮುಂದುವರೆಸಲು ಸಿದ್ಧ ಇದೆ. ಆದರೆ ಜನರು ಜವಾಬ್ದಾರಿಯಿಂದ ನಡೆಯಬೇಕು ಕರ್ಫ್ಯೂ ಇಲ್ಲದೆ ಇದ್ದರೂ , ಕೆಲಸ ಇದ್ದರೆ ಮಾತ್ರ ಓಡಾಡಬೇಕು ಎಂದು ಅವರು ಮನವಿ ಮಾಡಿಕೊಂಡರು. ಕೋವಿಡ್‌ ನಿಯಂತ್ರಣ ನಿಟ್ಟಿನಲ್ಲಿ ರಾತ್ರೋ ರಾತ್ರಿ ಬೆಡ್ ಹಾಕಬಹುದು. ಕನಿಷ್ಟ 15 ದಿನ ಸೌಲಭ್ಯ ಒದಗಿಸಲು ಸಮಯಾವಕಾಶ ಬೇಕಿದೆ. ಐಸಿಯು , ವೆಂಟಿಲೇಟರ್‌ ಹಾಗೂ ವೈದ್ಯರನ್ನು ತಯಾರು ಮಾಡಲು ಆಗುತ್ತಿಲ್ಲ ಎಂದ ಅವರು ಸದ್ಯ ಕೋವಿಡ್‌ ಪಿಕ್ ಸ್ಥಿತಿಗೆ ಬಂದು ತಲುಪಿದೆ. ಕಡಿಮೆ ಆಗಬಹುದು ಎಂಬ ನಂಬಿಕೆ ಇದೆ ಎಂದರು. ಇನ್ನು ರಾಜ್ಯದಲ್ಲಿ ಲಾಕ್ ಡೌನ್ ಪರಿಸ್ಥಿತಿ ನಿರ್ಮಾಣ ಆಗಬಾರದು ವಾಣಿಜ್ಯ ಚಟುವಟಿಕೆ ನಡೆಯಬೇಕಿದೆ ಎಂಬ ಅಭಿಪ್ರಾಯವನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಸರ್ಕಾರದ ಮುಖ್ಯಕಾರ್ಯದರ್ಶಿ ರವಿ ಕುಮಾರ್ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.


from India & World News in Kannada | VK Polls https://ift.tt/2S0bTL7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...