ಹೊಸದಿಲ್ಲಿ: ದೇಹಕ್ಕೆ ಅಗತ್ಯವಿರುವ ಹಲವು ವಿಟಾಮಿನ್ ಹಾಗೂ ಒಮೆಗಾ-3 ಪೋಷಕಾಂಶ ತೆಗೆದುಕೊಳ್ಳುವುದರಿಂದ ಕೊರೊನಾ ತಗುಲುವಿಕೆ ಅಪಾಯ ತಗ್ಗಿಸಬಹುದೆಂದು ಅಧ್ಯಯನ ವರದಿಯೊಂದು ತಿಳಿಸಿದೆ. ವಿಟಾಮಿನ್‌ಗಳ ಕೊರತೆಯಿಂದ ನಮ್ಮ ರೋಗ ನಿರೋಧಕ ಶಕ್ತಿ ಕುಂದುತ್ತದೆ. ನಮ್ಮ ಇಂದಿನ ಆಹಾರ ಪದ್ಧತಿಯಲ್ಲಿ ದೇಹಕ್ಕೆ ಬೇಕಿರುವ ಅಗತ್ಯ ವಿಟಾಮಿನ್‌ಗಳು ಸಿಗದೇ ರೋಗ ನಿರೋಧಕ ಶಕ್ತಿ ಕುಂದುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ವಿಟಾಮಿನ್ ಸಿ, ಡಿ ಸೇರಿ ಹಲವು ವಿಟಾಮಿನ್ ಮಾತ್ರೆಗಳು, ಒಮೆಗಾ-3, ಸತು ಮೊದಲಾದ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಇಂತಹ ಸಪ್ಲಿಮೆಂಟ್‌ಗಳ ಸಮತೋಲಿತ ಸೇವನೆಯಿಂದ ಕೊರೊನಾ ಸೋಂಕು ತಗುಲಿವಿಕೆ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು 'ಬಿಎಂಜೆ ನ್ಯೂಟ್ರಿಷನ್ ಪ್ರಿವೆನ್ಷನ್ ಅಂಡ್ ಹೆಲ್ತ್,' ನಿಯತಕಾಲಿಕದಲ್ಲಿ ಪ್ರಕಟಗೊಂಡ ವರದಿ ತಿಳಿಸಿದೆ. ಕೋವಿಡ್-19 ರೋಗಲಕ್ಷಣ ಅಧ್ಯಯನ ಆ್ಯಪ್‌ನಲ್ಲಿ ಬ್ರಿಟನ್, ಅಮೆರಿಕ ಮತ್ತು ಸ್ವೀಡನ್‌ನಿಂದ 4 ಲಕ್ಷಕ್ಕೂ ಅಧಿಕ ಬಳಕೆದಾರರು ಕಳೆದ ವರ್ಷದ ಮಾರ್ಚ್‌ನಿಂದ ಹಲವು ತಿಂಗಳ ಕಾಲ ನೀಡಿದ ಮಾಹಿತಿಗಳನ್ನು ಕ್ರೋಢೀಕರಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಲಾಗಿದೆ.
from India & World News in Kannada | VK Polls https://ift.tt/3v5ymo5