ಕೋವಿಡ್‌ ಸಂಕಷ್ಟ: ಒಂದಿಡೀ ವರ್ಷ ರಾಜ್ಯ ಸರ್ಕಾರ ಎಲ್ಲಿ ಗೆಣಸು ಕೀಳುತ್ತಿತ್ತು? ಕಾಂಗ್ರೆಸ್ ತರಾಟೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದ್ದು ಸರ್ಕಾರ ಕಳೆದ ವರ್ಷದ ಪಾಠವನ್ನು ಕಲಿಯಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, ಬೆಡ್, ಆಕ್ಸಿಜನ್, ಔಷಧ, ವೈದ್ಯರ ಕೊರತೆ. ಸಮಸ್ಯೆಗಳು ಕಳೆದ ವರ್ಷ ಎನಿತ್ತೋ ಅದೇ ಮರುಕಳಿಸಿದೆ ಎಂದಿದೆ. ಅಲ್ಲದೆ ಸರ್ಕಾರದ ಹೇಳಿಕೆಗಳೂ ಸಹ ಕಳೆದ ವರ್ಷ ಏನು ಹೇಳಿದ್ದರೋ ಅದನ್ನೇ ಪುನಃರುಚ್ಚರಿಸುತ್ತಿದ್ದಾರೆ ಎಂದು ಕಿಡಿಕಾರಿದೆ. ಒಂದಿಡೀ ವರ್ಷದಲ್ಲಿ ಪಾಠ ಕಲಿಯಲಿಲ್ಲ, ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ, ಎಲ್ಲಿ ಗೆಣಸು ಕೀಳುತ್ತಿತ್ತು ಬಿಜೆಪಿ ಸರ್ಕಾರ? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರ ಸ್ವರೂಪದಲ್ಲಿ ಏರಿಕೆ ಆಗುತ್ತಿದೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಐಸಿಯು ಬೆಡ್‌ಗಳ ಕೊರತೆ ಎದುರಾಗಿದೆ. ಜೊತೆಗೆ ವೈದ್ಯಕೀಯ ಆಮ್ಲಜನದ ಕೊರತೆಯೂ ಎದುರಾಗಿದೆ. ಆದರೆ ಆಮ್ಲಜನಕದ ಕೊರತೆ ಎದುರಾಗಿಲ್ಲ ಎಂದು ಸರ್ಕಾರ ಸಮರ್ಥನೆ ನೀಡುತ್ತಿದೆ. ಮತ್ತೊಂದು ಕಡೆಯಲ್ಲಿ ಆಮ್ಲಜನಕದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಕೈಗಾರಿಕಾ ಬಳಕೆಗೆ ನಿಷೇಧ ಹೇರಲಾಗಿದೆ. ಸದ್ಯ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 11,61,065 ಕ್ಕೆ ತಲುಪಿದೆ. ಭಾನುವಾರ ಒಂದೇ ದಿನ 19,067ಪ್ರಕರಣಗಳು ವರದಿಯಾಗಿವೆ. 81 ಮಂದಿ ಭಾನುವಾರ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಮೃತರ ಸಂಖ್ಯೆ 13,351 ಕ್ಕೆ ದಾಟಿದೆ.


from India & World News in Kannada | VK Polls https://ift.tt/3dqFndk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...