ಹೊಸದಿಲ್ಲಿ: ಮಾರಕ ಎರಡನೇ ಅಲೆಯಿಂದ ತತ್ತರಿಸಿರುವ , ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಇನ್ನಿಲ್ಲದ ಕಸರತ್ತು ನಡೆಸಿದೆ. ಆದರೆ 2021ರಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತಷ್ಟು ಭೀಕರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಕುರಿತು ತಜ್ಞರ ಎಚ್ಚರಿಕೆ ನಿಜಕ್ಕೂ ದಂಗು ಬಡಿಸುವಂತಿದೆ. ಭಾರತದಲ್ಲಿ ಒಂದೆ ದಿನ ಸುಮಾರು 261,500 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು, ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಭಾರತದ ಪರಿಸ್ಥಿತಿ ಅಮೆರಿಕದ ಪರಿಸ್ಥಿತಿಗಿಂತ ಕೆಟ್ಟದಾಗುವತ್ತ ಹೆಜ್ಜೆ ಇಟ್ಟಿದ್ದು, 2021 ಕೂಡ ಭಾರತೀಯರ ಪಾಲಿಗೆ ಕೆಟ್ಟ ದಿನಗಳನ್ನು ಹೊತ್ತು ತರಲಿದೆ ಎಂಬ ಆತಂಕ ಎದುರಾಗಿದೆ. ಭಾರತದಲ್ಲಿ ಕೊರೊನಾ ಸಂಬಂಧಿ ಸಾವುಗಳ ಸಂಖ್ಯೆಯೂ ಅಧಿಕವಾಗಲಿದೆ ಎಂಬ ಎಚ್ಚರಿಕೆ ನೀಡಲಾಗಿದ್ದು, ಕಳೆದ ವರ್ಷಕ್ಕಿಂತಲೂ ಅಧಿಕ ಜನರು ಸಾವಿಗೀಡಾಗಲಿದ್ದಾರೆ ಎಂಬ ಆತಂಕವಿದೆ. B.1.617 ಹೆಸರಿನ ಕೊರೊನಾ ರೂಪಾಂತರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಇದು ಈ ಮೊದಲಿನ ಎಲ್ಲಾ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತಿರುವುದು ಸ್ಪಷ್ಟ ಎಂದು ತಜ್ಞರು ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಮಿಶಗನ್ ವಿಶ್ವವಿದ್ಯಾಲಯದ ವೈದ್ಯ ವಿಜ್ಞಾನಿ ಭ್ರಾಮರ್ ಮುಖರ್ಜಿ, ಭಾರತದಲ್ಲಿ ಕೊರೊನಾ ಸಾವುಗಳ ಸಂಖ್ಯೆ 3,000 ದಾಟಿದರೂ ಅಚ್ಚರಿಯಿಲ್ಲ ಎಂದು ಎಚ್ಚರಿಸಿದ್ದಾರೆ. ಭಾರತದಲ್ಲಿ ಆದಷ್ಟು ಬೇಗ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅಂತ್ಯ ಹಾಡಬೇಕಿದೆ. ಚುನಾವಣೆಗಳು, ಧಾರ್ಮಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
from India & World News in Kannada | VK Polls https://ift.tt/3gosp1r