ಆಟೋ ರಿಕ್ಷಾ ಅಡ್ಡಗಟ್ಟಿ ₹16.60 ಲಕ್ಷ ದರೋಡೆ; 150ರಷ್ಟು ಸಿಸಿ ಟಿವಿ ಪರಿಶೀಲಿಸಿ ನಾಲ್ವರ ಬಂಧನ

ಬೆಂಗಳೂರು: ಮಟನ್‌ ಸ್ಟಾಲ್‌ಗಳಿಂದ ಹಣ ಸಂಗ್ರಹ ಮಾಡಿಕೊಂಡು ಆಟೊದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಲಾಂಗ್‌ ತೋರಿಸಿ ಬೆದರಿಸಿ 16.60 ಲಕ್ಷ ರೂ. ದರೋಡೆ ಮಾಡಿದ್ದ ನಾಲ್ವರು ದರೋಡೆಕೋರರನ್ನು ಪೂರ್ವ ವಿಭಾಗದ ಭಾರತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಪ್ಸರ್‌ ಪಾಷಾ (34), ಸೈಯದ್‌ ತೌಸಿಫ್‌ (32), ಮಹಮ್ಮದ್‌ ಅಲಿ (30) ಮತ್ತು ಮಹಮ್ಮದ್‌ ಅಜರುಲ್ಲಾ(30), ಬಂಧಿತರು.ಆರೋಪಿಗಳಿಂದ 4 ಲಕ್ಷ ರೂ. ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಮುನೀರ್‌ ಎಂಬುವವರು ಜ.7ರಂದು ಡಿ.ಜೆ.ಹಳ್ಳಿ ಟ್ಯಾನರಿ ರಸ್ತೆ ಸೇರಿದಂತೆ ಹಲವು ಮಟನ್‌ ಸ್ಟಾಲ್‌ಗಳಿಂದ ಹಣ ಸಂಗ್ರಹಿಸಿಕೊಂಡು, ಸಹೋದರ ಲತೀಫ್‌ ಎಂಬುವವರ ಆಟೊದಲ್ಲಿ ಮಧ್ಯರಾತ್ರಿ 12.30ರ ಸುಮಾರಿಗೆ ಮೆಜೆಸ್ಟಿಕ್‌ ಕಡೆಗೆ ಹೋಗುತ್ತಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಕಾಕ್‌ಬರ್ನ್‌ ರಸ್ತೆಯಲ್ಲಿ ಆಟೋ ತಡೆದು ಲತೀಫ್‌ಗೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿ, ಲಾಂಗ್‌ ತೋರಿಸಿ ಬೆದರಿಸಿ ಹಣ ಸುಲಿಗೆ ಮಾಡಿದ್ದರು. ಮುನೀರ್‌ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಭಾರತಿ ನಗರ ಠಾಣೆ ಪೊಲೀಸರು, ತನಿಖೆ ಆರಂಭಿಸಿದ್ದರು. ಘಟನಾ ಸ್ಥಳದಿಂದ ಐದಾರು ಕಿ.ಮೀ. ಸುತ್ತಳತೆ ಮಾರ್ಗದ 150ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಆರೋಪಿಗಳ ಜಾಡನ್ನು ಹಿಡಿದಿದ್ದರು. ಆರೋಪಿ ಅಪ್ಸರ್‌ ಪಾಷ ಡಿ.ಜೆ.ಹಳ್ಳಿಯ ಮಟನ್‌ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಮುನೀರ್‌ ಹಣ ಸಂಗ್ರಹ ಮಾಡುವ ವಿಚಾರ ತಿಳಿದು ದರೋಡೆಗೆ ಸಂಚು ಹೂಡಿದ್ದ.


from India & World News in Kannada | VK Polls https://ift.tt/3x47xm2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...