15 ದಿನದಲ್ಲಿ ಬೆಂಗಳೂರಿನಲ್ಲಿ 2 ಸಾವಿರ ಹಾಸಿಗೆಗಳ ಮೇಕ್‌ಶಿಫ್ಟ್‌ ಆಸ್ಪತ್ರೆ ನಿರ್ಮಾಣ; ಡಾ. ಸುಧಾಕರ್

ಬೆಂಗಳೂರು: ನಿಯಂತ್ರಣಕ್ಕಾಗಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಐಸಿಯು ಹೊಂದಿರುವ ಮೇಕ್‌ಶಿಫ್ಟ್‌ ಹಾಸ್ಪಿಟಲ್‌ಗಳನ್ನು (ತಾತ್ಕಾಲಿಕ ಆಸ್ಪತ್ರೆ) ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ 2 ಸಾವಿರ ಹಾಸಿಗೆಗಳ ಮೇಕ್‌ಶಿಫ್ಟ್‌ ಆಸ್ಪತ್ರೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಮೈಸೂರು, ಬೀದರ್‌, ಹುಬ್ಬಳ್ಳಿ, ಬೆಳಗಾವಿ ಹಾಗೂ ಶಿವಮೊಗ್ಗದಲ್ಲಿ ಮಾಡ್ಯೂಲರ್‌ ಐಸಿಯು ಹೊಂದಿರುವ 200-250 ಮೇಕ್‌ಶಿಫ್ಟ್‌ ಆಸ್ಪತ್ರೆಗಳನ್ನು 15 ದಿನಗಳೊಳಗೆ ನಿರ್ಮಿಸಲಾಗುವುದು ಎಂದು ಹೇಳಿದರು. ಮೊದಲ ಅಲೆಯಲ್ಲಿ ಯಾರಿಗೂ ಇಷ್ಟು ಆಕ್ಸಿಜನ್‌ ಅಗತ್ಯವಿರಲಿಲ್ಲ. ಆದರೆ ಈಗ ಅನೇಕರು ಆಕ್ಸಿಜನ್‌ ಬೇಕೆಂದು ಹೇಳುತ್ತಿದ್ದಾರೆ. ಕಳೆದ ವರ್ಷ ಪೀಕ್‌ ಇದ್ದಾಗಲೂ 300-350 ಟನ್‌ ಆಕ್ಸಿಜನ್‌ ಪೂರೈಸಲಾಗಿತ್ತು. ಈ ಹಂತದಲ್ಲಿ500 ಟನ್‌ ಬಳಕೆ ಯಾಗುತ್ತಿದೆ. ಇದು ತೀವ್ರವಾದರೆ ಆಕ್ಸಿಜನ್‌ ಬೇಡಿಕೆ ಹೆಚ್ಚಾಗಬಹುದು ಎಂದು ವಿವರಿಸಿದರು. ಟಾಸ್ಕ್‌ ಫೋರ್ಸ್‌ ರಚನೆ: ಕೋವಿಡ್‌ ನಿಯಂತ್ರಣಕ್ಕಾಗಿ ಕಾನ್ಫಡರೇಶನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ (ಸಿಐಐ) ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಮಿತಿಯು ವೈದ್ಯಕೀಯ ಹಾಗೂ ಇತರೆ ಮೂಲಸೌಕರ್ಯಗಳನ್ನು ಬಲಪಡಿಸುವ ಕಾರ್ಯ ಮಾಡಲಿದೆ. ಕೊರೊನಾ ಕುರಿತ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕಾಲ್‌ ಸೆಂಟರ್‌, ಮಾಡ್ಯೂಲರ್‌ ಐಸಿಯುಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಲ್ಲಿ ಟಾಸ್ಕ್‌ ಫೋರ್ಸ್‌ ಮುಂದಾಳತ್ವ ವಹಿಸಲಿದೆ. ಕಾಲ್‌ ಸೆಂಟರ್‌: ಕೋವಿಡ್‌ ಸಂಬಂಧ ಏಕೀಕೃತ ಬೃಹತ್‌ ಕಾಲ್‌ ಸೆಂಟರ್‌ ಆರಂಭಿಸುವ ಕಾರ್ಯವನ್ನು ಟಾಸ್ಕ್‌ ಫೋರ್ಸ್‌ ಗೆ ವಹಿಸಲಾಗಿದೆ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ತಜ್ಞರು ಸಹಾಯವಾಣಿ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ.


from India & World News in Kannada | VK Polls https://ift.tt/3gzs8c7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...