ಎರಡನೇ ದಿನವೂ ಇಳಿದ ಪೆಟ್ರೋಲ್‌, ಡೀಸೆಲ್‌ ದರ: ಗ್ರಾಹಕರು ಖುಷ್‌, ಯಾವ ನಗರದಲ್ಲಿ ಎಷ್ಟಿದೆ ಬೆಲೆ?

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಭಾರೀ ಏರಿಕೆ ಕಂಡಿದ್ದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಂದು ಮತ್ತೆ ಕೊಂಚ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳು ಪೆಟ್ರೋಲ್‌ ಬೆಲೆ ಗುರುವಾರ ಇಳಿಸಿದೆ. ಈ ಮೂಲಕ ದರ ಭಾರೀ ಏರಿಕೆ ಕಾಣುತ್ತಿದ್ದರಿಂದ ಕಂಗಾಲಾಗಿದ್ದ ಗ್ರಾಹಕನಿಗೆ ಕೊಂಚ ನಿರಾಳತೆ ಸಿಕ್ಕಿದೆ. ನಿನ್ನೆ ಕೂಡ ಪೆಟ್ರೋಲ್‌ ಬೆಲೆಯಲ್ಲಿ 18 ಪೈಸೆ ಹಾಗೂ ಡೀಸೆಲ್‌ ಬೆಲೆಯಲ್ಲಿ 17 ಪೈಸೆ ಇಳಿಕೆಯಾಗಿತ್ತು. ಇದೀಗ ಇಂದು (25ನೇ ಗುರುವಾರ) ಕೂಡ ಪೆಟ್ರೋಲ್‌ ಪ್ರತೀ ಲೀಟರ್‌ ಬೆಲೆಯಲ್ಲಿ 21 ಪೈಸೆ ಇಳಿಕೆ ಕಂಡರೆ, ಡೀಸೆಲ್‌ ದರದಲ್ಲಿ 20 ಪೈಸೆ ಇಳಿಕೆಯಾಗಿದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಎಷ್ಟಿದೆ? ಇಲ್ಲಿದೆ ಮಾಹಿತಿ. ನಗರ ಡೀಸೆಲ್‌ ದರ ಪೆಟ್ರೋಲ್‌ ಡೀಸೆಲ್‌ ಬೆಂಗಳೂರು: 93.28 85.99ಚೆನ್ನೈ 92.77 86.10ದಿಲ್ಲಿ 90.78 81.10ಮುಂಬಯಿ 97.19 88.20


from India & World News in Kannada | VK Polls https://ift.tt/3sy3Sup

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...