ಬೆಂಗಳೂರು: ರಾಜ್ಯ ಸರ್ಕಾರ ರಚನೆ ಮಾಡಿದ್ದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ (ಡಿಸೆಂಬರ್ 5)ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಕರ್ನಾಟಕ ಗಡಿ ಭಾಗದಲ್ಲಿ ಎಂಇಎಸ್ ಪುಂಡರು ಕನ್ನಡಿಗರನ್ನು ಪದೇ ಪದೇ ಕೆದಕುತ್ತಿರುವ ಬೆನ್ನಿನಲ್ಲೇ ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರೋದು ಕನ್ನಡಪರ ಸಂಘಟನೆಗಳಿಗೆ ಮತ್ತಷ್ಟು ಕೋಪ ನೆತ್ತಿಗೇರುವಂತೆ ಮಾಡಿದೆ. ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇಬೇಕು, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಅನೇಕ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆನೀಡಿವೆ. ಅಲ್ಲದೇ ರಾಜ್ಯದ ವಿವಿಧೆಡೆ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಸಿದೆ. ಕನ್ನಡ ಪರ ಸಂಘಟನೆಗಳು ಕರೆನೀಡಿರುವ ಕರ್ನಾಟಕ ಬಂದ್‌ಗೆ ರಾಜ್ಯದ ವಿವಿಧೆಡೆ ಪ್ರತಿಕ್ರಿಯೆ ಹೇಗಿದೆ? ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ. 6.45 am :ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ತಟ್ಟದ ಬಂದ್ ಬಿಸಿ, ಎಂದಿನಂತೆ ಸಿಟಿ ಮಾರ್ಕೆಟ್‌ನಲ್ಲಿ ಜನವೋ ಜನ 6.30 am: ರಾಮನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಬೆಳಗ್ಗೆ 5.30ರಿಂದ ಪ್ರತಿಭಟನೆ, ಐಜೂರು ವೃತ್ತದಲ್ಲಿ ಶಾಸಕ ಯತ್ನಾಳ್ ಪ್ರತಿಕೃತಿ ದಹಿಸಿ ನೂರಾರು ಕಾರ್ಯರ್ತರ ಆಕ್ರೋಶ. 6.20 am: ಕೊಪ್ಪಳದಲ್ಲಿ ವಾಹನಗಳನ್ನು ತಡೆದು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ. ಲಾರಿ, ಟ್ರಕ್‌ಗಳ ಮುಂದೆ ಮಲಗಿ ಸರ್ಕಾರದ ವಿರುದ್ಧ ಘೋಷಣೆ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ 6.15 am: ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳ ಓಡಾಟದಲ್ಲಿ ವ್ಯತ್ಯಯ, ಬೆರಳೆಣಿಕೆಯ ಆಟೋಗಳಷ್ಟೇ ಲಭ್ಯ. 6.10 am: ಬೆಂಗಳೂರಿನಲ್ಲಿ ರೈಲುಗಳ ಸಹಜ ಓಡಾಟ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಜನರ ಆಗಮನ 6.00 am: ಮಲ್ಲೇಶ್ವರಂ ಸುತ್ತಮುತ್ತ ತಟ್ಟದ ಬಂದ್‌ಬಿಸಿ, ಎಂದಿನಂತೆ ಜನಜೀವನ ಆರಂಭ 5.55 am: ಬೆಂಗಳೂರಿನ ವಿವಿಧೆಡೆ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಆರಂಭ 5.45 am: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಇಲ್ಲ ಅಡ್ಡಿ, ಬೆಳಗಿನ ಪಾಳಿಯ ಎಲ್ಲಾ ಬಸ್‌ಗಳು ಎಂದಿನಂತೆ ಓಡಾಟ
from India & World News in Kannada | VK Polls https://ift.tt/3mJXZHu