ರಾಯಚೂರು: ನೀರು ಕುಡಿಯಲು ಕೃಷ್ಣ ನದಿಗೆ ಇಳಿದಿದ್ದ ಯುವಕನನ್ನು ಎಳೆದೊಯ್ದು ತಿಂದು ಹಾಕಿದ ಮೊಸಳೆ!

ರಾಯಚೂರು: ಕೃಷ್ಣ ನದಿಗೆ ನೀರು ಕುಡಿಯಲು ಹೋದ ಬಾಲಕನನ್ನು ಮೊಸಳೆ ತಿಂದು ಹಾಕಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನ ಡೊಂಗಾರಾಂಪುರ ಗ್ರಾಮದಲ್ಲಿ ನಡೆದಿದೆ. (12) ಮೊಸಳೆಗೆ ಬಲಿಯಾದ ಬಾಲಕ.ಬುಧವಾರದಂದು ಮಲ್ಲಿಕಾರ್ಜುನ ತನ್ನ ಸ್ನೇಹಿತರೊಂದಿಗೆ ದನ ಮೇಯಿಸಲು ಕೃಷ್ಣ ನದಿ ದಂಡೆಯತ್ತ ಹೋಗಿದ್ದ. ಮಧ್ಯಾಹ್ನದ ವೇಳೆ ಗೆಳೆಯರು ಎಲ್ಲ ಗೆಳೆಯರು ಸೇರಿಕೊಂಡು ಊಟ ಮಾಡಿದ್ದಾರೆ. ಊಟ ಮಾಡಿದ ಬಳಿಕ ಬಾಯಾರಿಕೆಯಾದ ಹಿನ್ನೆಲೆ ಕೃಷ್ಣ ನದಿಯಲ್ಲಿ ನೀರು‌ ಕುಡಿಯಲು ಮಲ್ಲಿಕಾರ್ಜುನ ನೀರಿಗೆ ಇಳಿದಿದ್ದಾನೆ. ಈ ವೇಳೆ ಬಕಾ ಪಕ್ಷಿಯಂತೆ ಕಾದು ಕುಳಿತ್ತಿದ್ದ ಮೊಸಳೆ ಅವನ ಮೇಲೆ ದಾಳಿ ನಡೆಸಿದೆ. ಇದನ್ನು ನೋಡುತ್ತಿದ್ದ ಮಲ್ಲಿಕಾರ್ಜುನನ ಸ್ನೇಹಿತರು ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಬಾಲಕನನ್ನು ಎಳೆದೊಯ್ದ ಮೊಸಳೆ ಬಾಲಕನ ದೇಹವನ್ನ ಸಂಪೂರ್ಣವಾಗಿ ತಿಂದು ತಲೆ ಬುರುಡೆ ಮಾತ್ರ ಬಾಕಿ ಬಿಟ್ಟಿದೆ. ನಿನ್ನೆ ರಾತ್ರಿ ಬಾಲಕನ ತಲೆ ಬುರುಡೆ ಪತ್ತೆಯಾಗಿದೆ. ಸದ್ಯ ಇಡೀ ಡೊಂಗಾರಾಂಪುರ ಗ್ರಾಮದಲ್ಲಿ ಶೋಕದ ವಾತಾರವಣ ನಿರ್ಮಾಣವಾಗಿದೆ. ಇಂತಹ ಹಲವು ಘಟನೆಗಳು ಕೃಷ್ಣ ನದಿಯಲ್ಲಿ ನಡೆದಿದೆ.


from India & World News in Kannada | VK Polls https://ift.tt/2L1uLpA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...