ಮಾಸ್ಕ್ ಹಾಕಲ್ಲ, ಟೆಸ್ಟ್ ಮಾಡಿಸಿಕೊಳ್ಳಲ್ಲ..! ಹುಬ್ಬಳ್ಳಿ ಜನರ ಪಟ್ಟಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸುಸ್ತು..!

ಹುಬ್ಬಳ್ಳಿ: 'ಮಾಸ್ಕ್‌ ಹಾಕಿಕೊಳ್ಳಿ ಅಂತ ಎಷ್ಟ ಹೇಳಿದ್ರೂ ನಮ್ಮ ಜನ ಕೇಳೋದಿಲ್ಲ. ಮಾಸ್ಕ್‌ ಹಾಕಿಲ್ಲ ಅಂದರೆ ಕೊರೊನಾ ಪರೀಕ್ಷಿಸಿಕೊಳ್ಳಿರಿ ಎಂದ ಬೇಡಿಕೊಂಡರೂ ಒಲ್ಲೆ ಅಂತ ರಗಳೆ ಮಾಡುತ್ತಾರೆ...' ಹೀಗೆ ಆರೋಗ್ಯ ಸಿಬ್ಬಂದಿ ಹಳಹಳಿಸಿದ ಪ್ರಸಂಗ, ನಗರದಲ್ಲಿ ನಡೆದಿದೆ. ಮಾಸ್ಕ್‌ ಹಾಕದಿರುವ ಜನರನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸುವ ಅಭಿಯಾನವನ್ನು ಆರೋಗ್ಯ ಇಲಾಖೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿ ಮಾರುಕಟ್ಟೆ ಪ್ರದೇಶಗಳಲ್ಲಿ ಠಿಕಾಣಿ ಹೂಡಿ ಮಾಸ್ಕ್‌ ಹಾಕದ ಜನರನ್ನು ಸಂಪರ್ಕಿಸಿ ಅವರ ಕೊರೊನಾ ಮಾಡುತ್ತಿದ್ದಾರೆ. ಗುರುವಾರ ಮಾಸ್ಕ್‌ ಧರಿಸದ ವ್ಯಕ್ತಿಯೊಬ್ಬ ಕೊರೊನಾ ಮಾಡಿಸಿಕೊಳ್ಳಲು ತಕರಾರು ತೆಗೆದರು. ಆ ವ್ಯಕ್ತಿಯನ್ನು ಮನವೊಲಿಸಲು ಹರಸಾಹಸ ಮಾಡಿದ ಮಹಿಳಾ ಸಿಬ್ಬಂದಿ, ಕೊನೆಗೂ ಯಶಸ್ವಿಯಾಗಿ ಪರೀಕ್ಷೆ ಮಾಡಿದರು. ಜನರು ತಮ್ಮ ಆರೋಗ್ಯ ತಾವು ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸವೇ ಎನ್ನಬಹುದು.


from India & World News in Kannada | VK Polls https://ift.tt/3qrfCxP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...