ಭಾರತದ ಗಲ್ವಾನ್‌ ಗಡಿಯಲ್ಲಿ ಸಂಘರ್ಷ ನಡೆಸಲು ಪಿಎಲ್‌ಗೆ ಕರೆ ಕೊಟ್ಟಿದ್ದರು ಚೀನಾ ರಕ್ಷಣಾ ಸಚಿವ: ಅಮೆರಿಕ ವರದಿ

ವಾಷಿಂಗ್ಟನ್‌: ಕಳೆದ ಜೂನ್‌ನಲ್ಲಿ ಪೂರ್ವ ಲಡಾಕ್‌ನ ಎಲ್‌ಎಸಿ ಬಳಿಯ ಗಲ್ವಾನ್‌ ಕಣಿವೆಯಲ್ಲಿ ಅತಿಕ್ರಮಣ ಯತ್ನದ ಮೂಲಕ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಸೈನಿಕರು ಸೃಷ್ಟಿಸಿದ ಗಡಿ ಘರ್ಷಣೆ ಪೂರ್ವ ನಿಯೋಜಿತ ಕೃತ್ಯ ಎಂದು ಅಮೆರಿಕದ ಸಮಿತಿಯೊಂದು ಹೇಳಿದೆ. ತನ್ನ ನೆರೆ ರಾಷ್ಟ್ರಗಳ ವಿರುದ್ಧ ವರ್ಷವಿಡೀ ನಡೆಸಬೇಕಿರುವ ಘರ್ಷಣಾ ಕಾರ್ಯತಂತ್ರ, ಪ್ರಚೋದನಕಾರಿ ಅತಿಕ್ರಮಣ ಸಂಚಿನ ಬಗ್ಗೆ ಚೀನಾ ಸೇನೆ ವರ್ಷದ ಆರಂಭದಲ್ಲಿಯೇ ನೀಲನಕ್ಷೆ ಸಿದ್ಧಪಡಿಸಿತ್ತು. ಅದರಂತೆ ಜಪಾನ್‌ನಿಂದ ಭಾರತದವರೆಗೆ ಎಲ್ಲ ರಾಷ್ಟ್ರಗಳೊಂದಿಗೆ ಘರ್ಷಣೆಗೆ ಇಳಿಯುವುದಕ್ಕೆ ಚೀನಾ ಸಿದ್ಧತೆ ಮಾಡಿಕೊಂಡಿತ್ತು. ಚೀನಾ ರಕ್ಷಣಾ ಸಚಿವರು ಗಡಿಯಲ್ಲಿ ಪಾರುಪತ್ಯ ಸ್ಥಾಪಿಸುವಂತೆ ಪಿಎಲ್‌ಎಗೆ ಸುಳಿವು ನೀಡಿದ ಕೂಡಲೇ ಎಲ್‌ಎಸಿಯಲ್ಲಿ ಮಾರಾಮಾರಿ ನಡೆಸಿ 20 ಭಾರತೀಯ ಯೋಧರನ್ನು ಹತ್ಯೆಗೈಯಲಾಯಿತು ಎಂದು ಅಮೆರಿಕ-ಚೀನಾ ಆರ್ಥಿಕ ಹಾಗೂ ಸುರಕ್ಷತಾ ಪರಿಶೀಲನಾ ಸಮಿತಿಯ(ಯುಎಸ್‌ಸಿಸಿ) ವರದಿ ಹೇಳಿದೆ. 2012ರಲ್ಲಿ ಜಿನ್‌ಪಿಂಗ್‌ ಅಧಿಕಾರಕ್ಕೆ ಏರಿದಾಗಿನಿಂದ ಒಟ್ಟು 5 ಬಾರಿ ಕುತಂತ್ರದಿಂದ ಭಾರತದ ಜತೆಗೆ ಕ್ಯಾತೆ ತೆಗೆದಿದೆ ಎಂದು ಅಮೆರಿಕ ದೋಷಾರೋಪ ಹೊರಿಸಿದೆ. ಕರೆಯೇ ಸಾಕ್ಷಿ! ದಕ್ಷಿಣ ಏಷ್ಯಾದಲ್ಲಿ ಚೀನಾ ತನ್ನ ಗಡಿಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಬಲಪ್ರಯೋಗಕ್ಕೆ ಮುಂದಾಗಬೇಕು ಎಂದು ರಕ್ಷಣಾ ಸಚಿವ ವೀ ಅವರು ಗಲ್ವಾನ್‌ ಘರ್ಷಣೆಗೂ ಕೆಲ ವಾರಗಳ ಮುನ್ನ ಕರೆ ನೀಡಿದ್ದರು. ಇದು ಚೀನಾ ಸೈನಿಕರಿಗೆ ನೀಡಿದ ಸುಳಿವಾಗಿತ್ತು. ಆಡಳಿತಾರೂಢ ಕ್ಸಿ ಜಿನ್‌ಪಿಂಗ್‌ ಸರಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ನಲ್ಲಿ, ಅಮೆರಿಕ-ಚೀನಾ ನಡುವಿನ ತಿಕ್ಕಾಟದಲ್ಲಿ ಭಾರತ ಶಾಮೀಲಾದಲ್ಲಿ ದೊಡ್ಡ ಪೆಟ್ಟು ತಿನ್ನಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸುವ ಅಂಕಣವನ್ನು ಬರೆಯಲಾಗಿತ್ತು. ಇವೆಲ್ಲದರೊಂದಿಗೆ , ಘರ್ಷಣೆಗೆ ಒಂದು ವಾರದ ಮುನ್ನವೇ ಗಲ್ವಾನ್‌ ಕಣಿವೆಯಲ್ಲಿ ಚೀನಾ ಸೇನೆ ತನ್ನ ಸೈನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಮಾಡಿದ್ದನ್ನು ಉಪಗ್ರಹದಿಂದ ಸೆರೆಯಾದ ಫೋಟೊಗಳು ಖಾತ್ರಿಪಡಿಸಿವೆ. ಇವೆಲ್ಲವೂ ಘರ್ಷಣೆಯು ಪೂರ್ವ ನಿಯೋಜಿತ ಎನ್ನುವುದಕ್ಕೆ ಸಾಕ್ಷಿ ಎಂದು ಯುಎಸ್‌ಸಿಸಿ ವರದಿಯಲ್ಲಿ ಆರೋಪಿಸಿದೆ.


from India & World News in Kannada | VK Polls https://ift.tt/39C01Ws

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...