ನಿಂತಿದ್ದ ಲಾರಿಗೆ ಆಂಬ್ಯುಲೆನ್ಸ್ ಡಿಕ್ಕಿ: ಸಿಬ್ಬಂದಿ ಸ್ಥಳದಲ್ಲೇ ಸಾವು, ಚಾಲಕ ಗಂಭೀರ!

ರಾಯಚೂರು: ನಿಂತಿದ್ದ ಲಾರಿಗೆ ಆಂಬ್ಯುಲೆನ್ಸ್ ಹೊಡೆದ ಪರಿಣಾಮ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಡಿಸೆಂಬರ್ 4ರಂದು ನಡೆದಿದೆ . ಜಿಲ್ಲೆಯ ಲಿಂಗಸಗೂರು ತಾಲೂಕಿನ ಸರ್ಜಾಪುರ ಬಳಿ ಈ ಘಟನೆ ನಡೆದಿದ್ದು, ಆಂಬುಲೆನ್ಸ್ ನಲ್ಲಿದ್ದ ಸ್ಟಾಫ್ ನರ್ಸ್ ಸಂಗಮೇಶ (30) ಮೃತಪಟ್ಟ ದುರ್ದೈವಿ. ಆಂಬುಲೆನ್ಸ್ ಚಾಲಕ ಹನುಮಪ್ಪನಿಗೆ ಗಂಭೀರ ಗಾಯವಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗಸುಗೂರು ತಾಲೂಕಿನ ಪಾಮನಕಲ್ಲೂರಿನಿಂದ ರೋಗಿಯನ್ನು ಕರೆದುಕೊಂಡು ರಾಯಚೂರು ರಿಮ್ಸ್ ಆಸ್ಪತ್ರೆಗೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಬದಿ ನಿಲ್ಲಿಸಿದ್ದ ಡ್ರೈವರ್ ಇಂಡಿಕೇಟರ್ ಹಾಕದೇ ಇರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಲಿಂಗಸಗೂರು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


from India & World News in Kannada | VK Polls https://ift.tt/37usdI2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...