ತುಮಕೂರಿನಲ್ಲಿ ಪಾರಿವಾಳ ಸಂತತಿಗೆ ಕುತ್ತು: ಪಾರ್ಶ್ವವಾಯು ಪೀಡಿತರೇ ಗ್ರಾಹಕರು!

ಸಿರಾಜ್ ಅಹಮದ್ ಕೆ.ಎ ಕೊಡಿಗೇನಹಳ್ಳಿ ತುಮಕೂರು: ಜಿಲ್ಲೆಯಲ್ಲಿ ಸದ್ದಿಲ್ಲದೆ ಗುಂಪು ಗುಂಪಾಗಿ ಬರುವ ಕೆಲ ಪಡ್ಡೆ ಹುಡುಗರು ಪಾರಿವಾಳಗಳ ನೆಮ್ಮದಿ ಹಾಳು ಮಾಡುತ್ತಿದ್ದು, ಸಿಕ್ಕ ಸಿಕ್ಕ ಕಡೆ ಬಲೆ ಬೀಸಿ ಸಂತತಿ ನಾಶ ಮಾಡುತ್ತಿರುವುದರಿಂದ ಪಕ್ಷಿ ಪ್ರೇಮಿಗಳಲ್ಲಿ ಆಂತಕ ಮನೆ ಮಾಡಿದೆ. ಹೌದು,ತುಮಕೂರು ಜಿಲ್ಲೆಯ ಪಟ್ಟಣಗಳು ಸೇರಿದಂತೆ ಗ್ರಾಮೀಣಾಭಾಗದ ದೊಡ್ಡ ಕಟ್ಟಡಗಳು, ಶಾಲಾ ಕಾಲೇಜುಗಳ ಬಾಲ್ಕಾನಿಯಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದ ಪಾರಿವಾಳಗಳನ್ನು ನಿರ್ದಯವಾಗಿ ಕೊಲ್ಲುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿವೆ. ವಿಶ್ವದ ಅತ್ಯಂತ ಹಳೆಯ ಸಾಕು ಹಕ್ಕಿ ಪಾರಿವಾಳ, ಇದಕ್ಕೆ ಅದೆಷ್ಟೋ ಜನರು ಪ್ರೀತಿಯಿಂದ ಸಾಕಿ ಸಲಹುವವರಿದ್ದು ಅವುಗಳನ್ನು ಕೊಂದು ತಿನ್ನುವವರು ಇದ್ದಾರೆ. ಇತ್ತೀಚಿಗೆ ನಾಲೈದು ಹುಡುಗರ ಗುಂಪೊಂದು ದೊಡ್ಡ ಕಟ್ಟಗಳ ತಾರಸಿನಲ್ಲಿ ಆಹಾರ ಎಸೆದು ಪಾರಿವಾಳಕ್ಕೆ ಬಲೆ ಬೀಸಿ ಕೊಂದು ಪಾರಿವಾಳಗಳನ್ನು ಬೇಟೆಯಾಡುತ್ತಿದ್ದು ಪಾರಿವಾಳ ಸಾಕಾಣಿಕೆದಾರರ ನಿದ್ದೆಗೆಡಿಸಿದೆ. ರಾಜ್ಯದಲ್ಲಿ ಹವಾಮಾನ ಏರಿಳಿತದ ಪರಿಣಾಮ ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ವಿಪರೀತ ಚಳಿ ಆರಂಭವಾಗಿದ್ದು ಪ್ಯಾರಲಿಸಿಸ್ () ಅಗಾಧತೆ ಹೆಚ್ಚಾಗಿ ಕಾಡುತ್ತಿದೆ. ಶಕ್ತಿ ಹೀನರಿಗೆ ಚಳಿಗಾಲದಲ್ಲಿ ರಕ್ತದ ಚಲನೆ ಸಮರ್ಪಕವಾಗಿರದೇ ಆ ಭಾಗ ಸ್ವಾಧೀನತೆ ಕಳೆದುಕೊಳ್ಳುತ್ತದೆ ಇಂತಹ ರೋಗಿಗಳಿಗೆ ಪಾರಿವಾಳವೇ ಮದ್ದು ಎಂಬುದು ಹಲವರ ಮೂಢನಂಬಿಕೆ. ಚಳಿಗಾಲ ಆರಂಭದಿಂದಲೂ ನಿತ್ಯವು ಪಾರಿವಾಳ ದಂಧೆ ಶುರುವಾಗಿ ಉತ್ತಮ ಜಾತಿಯ ಪಾರಿವಾಳ ತಂದು ಕೊಟ್ಟವರಿಗೆ 600 ರಿಂದ 800 ರೂ ವರೆಗೂ ನೀಡುತ್ತಿದ್ದಾರೆ ಎನ್ನಲಾಗಿದ್ದು, ಹಣದ ಆಸೆಗಾಗಿ ಕೆಲ ಹುಡುಗರ ಗುಂಪು ಪಾರಿವಾಳ ಹಿಡಿದು ಮಾರಾಟ ಮಾಡುವ ಜಾಲಕ್ಕೆ ಬಿದ್ದು ನಿತ್ಯ ಕಾಯಕವಾಗಿಸಿಕೊಂಡಿದ್ದಾರೆ. ಈಗಾಗಲೇ ಗುಬ್ಬಚ್ಚಿ ಸಂತತಿ ಅವನತಿಯತ್ತ ಸಾಗಿದ್ದು ಹೀಗೆ ಮುಂದುವರೆದರೆ ಪಾರಿವಾಳ ಸಂತತಿಯು ನಶಿಸುತ್ತದೆ ಎಂಬುದು ಪಕ್ಷಿ ಪ್ರೇಮಿಗಳ ಆತಂಕವಾಗಿದ್ದು, ಜಿಲ್ಲೆಯಲ್ಲಿ ಪ್ರಾಣಿ ಪಕ್ಷಿಗಳು ಹಾಗೂ ಪರಿಸರ ಪ್ರೇಮಿಗಳು ಈ ಬಗ್ಗೆ ತಿಳುವಳಿಕೆ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಂತಹವ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ. ನಾಡಿನಲ್ಲಿ ಶಾಂತಿ ಮತ್ತು ರಕ್ಷಣೆ ನಮ್ಮ ಇಲಾಖೆಯ ಹೊಣೆ, ಜನತೆ ಮೌಢ್ಯತೆ ಬಿಡಬೇಕು, ಇಂತಹ ಯಾವುದೆ ಕೃತ್ಯಗಳು ನಡೆಯುತ್ತಿದ್ದರೂ ನಮಗೆ ಮಾಹಿತಿ ಕೊಡಿ ತಕ್ಷಣ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಎಂ.ಎಸ್ ಸರ್ದಾರ್ ಮಧುಗಿರಿ ಸಿಪಿಐ ಈ ಬಗ್ಗೆ ಯಾವುದೇ ಆರ್ಯುವೈದ್ಯ ಅಲೋಪತಿಯಲ್ಲಿ ಪಾರಿವಾಳದ ಮಾಂಸ ತಿಂದರೆ ಪ್ಯಾರಲಿಸಿಸ್ ಗುಣಮುಖವಾಗುತ್ತದೆ ಎಂಬುದು ಎಲ್ಲೂ ಇಲ್ಲ, ಇದು ಕೇವಲ ನಾಟಿ ಔಷಧಿಯ ಮೂಢನಂಬಿಕೆ ಅಷ್ಟೇ. ಪಾರಿವಾಳ ರಕ್ಷಣೆ ನಮ್ಮೆಲ್ಲರ ಹೊಣೆ, ಜನತೆ ಮೌಢ್ಯತೆ ಬಿಡಬೇಕು. ಡಾ ಸೋಮಶೇಖರ್ ಆರ್ಯುವೇದ ವೈದ್ಯ ಕೋಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಇದೊಂದು ಮೃಗೀಯ ವರ್ತನೆ ಇದು ಖಂಡನೀಯವಾದದ್ದು. ನಮಗೆ ಬದುಕುವ ಸ್ವಾತಂತ್ರ್ಯ ಎಷ್ಟಿದಿಯೋ ಅಷ್ಟೇ ಹಕ್ಕು ಪ್ರಾಣಿ ಪಕ್ಷಿಗಳಿಗಿದೆ. ಇದನ್ನು ತಡೆಯಲು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದಾಗ ಮಾತ್ರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯ, ಪಾರಿವಾಳ ರಕ್ಷಣೆ ನಮ್ಮೆಲ್ಲರ ಹೊಣೆ. ಆದಿ ಪಕ್ಷಿಪ್ರಿಯ ಕಡಗತ್ತೂರು


from India & World News in Kannada | VK Polls https://ift.tt/33GHUuK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...