ಹಬ್ಬದ ಸಂಭ್ರಮದಲ್ಲಿ ಮೈಸೂರು ಮಾರ್ಕೆಟ್‌ನಲ್ಲಿ ಜನವೋ ಜನ; ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಖರೀದಿ ಬಲು ಜೋರು

ಮೈಸೂರು : ಒಂದೆಡೆ ಅರಮನೆಯೊಳಗೆ ಸರಳ ದಸರೆ ಆಚರಣೆ ಮನೆಮಾಡಿದರೆ, ಇತ್ತ ಮನೆ- ಮನೆಯಲ್ಲಿ ಆಯುಧ ಸಂಭ್ರಮ ಹಾಗೂ ವಿಜಯದಶಮಿಯ ಪೂರ್ವ ತಯಾರಿ ಕಳೆಯನ್ನು ಹೆಚ್ಚಿಸಿದೆ. ಆದರೆ ಮಾರುಕಟ್ಟೆಯಲ್ಲಿ ಜನರು ಮಾತ್ರ ಕೊರೊನಾ ಸೋಂಕು ಹರಡುವಿಕೆಯ ಯಾವುದೇ ಭಯವಿಲ್ಲದಂತೆ ವರ್ತಿಸುತ್ತಿದ್ದಾರೆ. ಖರೀದಿ ವೇಳೆ ಮಾಸ್ಕ್ ಸರಿಯಾಗಿ ಧರಿಸದೆ, ಸಾಮಾಜಿಕ ಅಂತರವನ್ನೂ ಮರೆತು ಗುಂಪು ಗುಂಪಾಗಿ ಸೇರಿರುವ ದೃಶ್ಯ ಕಂಡು ಬಂದಿದೆ. ಆಯುಧ ಪೂಜೆ ಮತ್ತು ವಿಜಯದಶಮಿಗಾಗಿ ಶನಿವಾರ ಖರೀದಿಯ ಭರಾಟೆ ನಡೆಯಿತು. ದಸರೆ ಎಂದರೆ ಮೈಸೂರಿಗರಿಗೆ ಸಂಭ್ರಮವಾಗಿದ್ದ ಹಬ್ಬ ಕೊರೊನಾ ಕಾರಣ ಕಳೆದ ವರ್ಷಕ್ಕಿಂತ ಖುಷಿಯಿಂದ ಆಚರಿಸಲು ಸಾಧ್ಯವಾಗಿಲ್ಲ. ಇತ್ತ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜೋರಾಗಿಯೇ ನಡೆಯುತ್ತಿದೆ. ಎಲ್ಲಾ ಪೂಜೆಗೆ ಅಗತ್ಯವಿರುವ ಹೂವು, ಹಣ್ಣು, ಬೂದುಗುಂಬಳ, ಬಾಳೆಕಂದು, ಮಾವಿನಸೊಪ್ಪು ಖರೀದಿ ಭರಾಟೆ ಜೋರಾಗಿದೆ. ಈ ನಡುವೆ ಆಯುಧ ಪೂಜೆ ದಿನ ಕಚೇರಿ, ಅಂಗಡಿಯವರು ತಮ್ಮ ಮಳಿಗೆಗಳನ್ನು ಸ್ವಚ್ಛಗೊಳಿಸಿ ಪೂಜೆ ಮಾಡುವುದು ಸಾಮಾನ್ಯವಾಗಿದೆ.. ಆ ಬಳಿಕ ಅಂಗಡಿ, ಕಚೇರಿಯಲ್ಲಿನ ಸಿಬ್ಬಂದಿಗೆ ಸಿಹಿತಿಂಡಿ ವಿತರಿಸುವರು. ಇದಕ್ಕಾಗಿ ನಗರದ ಬೇಕರಿಗಳಲ್ಲಿ ಸಿಹಿ ತಿಂಡಿಗಳಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ನಗರದ ವಿವಿಧ ಬೇಕರಿಗಳಲ್ಲಿ ಗ್ರಾಹಕರು ತುಂಬಿದ್ದರು. ಬಗೆಬಗೆಯ ಸಿಹಿತಿಂಡಿಗಳ ಖರೀದಿಯೂ ಜೋರಾಗಿಯೇ ನಡೆಯುತ್ತಿತ್ತು. ಅಗ್ರಹಾರ, ನಂಜುಮಳಿಗೆ, ದೇವರಾಜ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ವಾಣಿ ವಿಲಾಸ ಮಾರುಕಟ್ಟೆ ಸೇರಿದಂತೆ ಹಲವೆಡೆ ನಗರದ ವಿವಿಧೆಡೆ ಜನರು ಖರೀದಿಗೆ ಮುಗಿಬಿದ್ದರು. ರಸ್ತೆ ಬದಿಗಳಲ್ಲೂ ವ್ಯಾಪಾರ ಜೋರಾಗಿ ನಡೆಯಿತು. ಅಂಗಡಿಗಳ ಮುಂದೆ ಜನದಟ್ಟಣೆ ಹೆಚ್ಚಾಗಿತ್ತು. ಈ ನಡುವೆಯೇ ಖರೀದಿಯ ಭರಾಟೆಯಲ್ಲಿ ಹಲವರು ಅಂತರ ಮರೆತಂತೆ ಭಾಸವಾಗುತ್ತಿದೆ. ಈ ಬಾರಿ ಮಲ್ಲಿಗೆ ಕೆ.ಜಿಗೆ 800, ಕನಕಾಂಬರ ಕೆ.ಜಿಗೆ 700 ರಿಂದ 800, ಚೆಂಡು ಹೂವು 60ಕ್ಕೆ ಮಾರಾಟವಾಯಿತು. ಈ ವರ್ಷವೂ ಸಹ ಬೂದುಗುಂಬಳಕ್ಕೆ ಎಲ್ಲ ವರ್ಷಗಳಂತೆ ಈ ಬಾರಿಯೂ ಹೆಚ್ಚಿನ ಬೇಡಿಕೆ ಕಂಡುಬಂತು. ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ರಾಶಿ ಹಾಕಿ ಮಾರಾಟ ಮಾಡಿದರು.


from India & World News in Kannada | VK Polls https://ift.tt/2HxFqGX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...