ಸುಲಭವಾಗಿ ಗೆಲ್ಲಬೇಕಾದ ಪಂದ್ಯದ ಸೋಲಿನ ಬಗ್ಗೆ ಡೇವಿಡ್ ವಾರ್ನರ್‌ ನಿರಾಸೆಯ ಮಾತು!

ದುಬೈ: ತಂಡದ ವಿರುದ್ಧ ಸುಲಭವಾಗಿ ಗೆಲ್ಲಬೇಕಾಗಿದ್ದ ಪಂದ್ಯದಲ್ಲಿ 12 ರನ್‌ಗಳ ಸೋಲು ಅನುಭವಿಸಿದ್ದರಿಂದ ತುಂಬಾ ನಿರಾಸೆಯಾಗಿದೆ ಎಂದು ತಂಡದ ನಾಯಕ ತಿಳಿಸಿದ್ದಾರೆ. ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್ ಇಲೆವೆನ್‌ ಪಂಜಾಬ್‌, ನಿಗದಿತ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 126 ರನ್‌ಗಳನ್ನು ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡ 19.5 ಓವರ್‌ಗಳಿಗೆ 114 ರನ್‌ಗಳಿಗೆ ಆಲೌಟ್‌ ಆಯಿತು. ಆ ಮೂಲಕ 12 ರನ್‌ಗಳಿಂದ ಸೋಲು ಅನುಭವಿಸಿತು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೇವಿಡ್‌ ವಾರ್ನರ್, ಸೋಲಿನೊಂದಿಗೆ ತುಂಬಾ ನಿರಾಸೆಯಾಗಿದೆ ಎಂದು ಹೇಳಿದರು. "ನಮ್ಮ ಬೌಲರ್‌ಗಳು ನಂಬಲಾಗದ ಕಾರ್ಯ ನಿರ್ವಹಿಸಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಇಲ್ಲಿನ ವಿಕೆಟ್‌ ಲಾಭ ಪಡೆದ ಅವರು, ಅದ್ಭುತವಾಗಿ ಬೌಲಿಂಗ್‌ ಮಾಡಿ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶನಿವಾರ ನಮ್ಮ ಬೌಲರ್‌ಗಳಿಗೆ ವಿಶೇಷ ದಿನ ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದರು. ಸುಲಭ ಗುರಿ ಬೆನ್ನತ್ತಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೈರ್‌ಸ್ಟೋವ್‌ ಜೋಡಿ ಮೊದಲನೇ ವಿಕೆಟ್‌ಗೆ 56 ರನ್‌ಗಳನ್ನು ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿತು. ಆ ಮೂಲಕ ಹೈದರಾಬಾದ್‌ ಫ್ರಾಂಚೈಸಿ ಗೆಲುವು ಸಾಧಿಸುವುದು ಬಹುತೇಕ ಖಚಿತ ಎಂದು ಭಾವಿಸಲಾಗಿತ್ತು ಆದರೆ, ರವಿ ಬಿಷ್ಣೋಯ್‌ ಅವರು ಡೇವಿಡ್‌ ವಾರ್ನರ್‌ ವಿಕೆಟ್‌ ಪಡೆದರೆ, ಮುರುಗನ್‌ ಅಶ್ವಿನ್‌ ಜಾನಿ ಬೈರ್‌ಸ್ಟೋವ್‌ ಅವರನ್ನು ಕ್ಲೀನ್‌ ಬೌಲ್ಡ್ ಮಾಡಿದರು. ಆ ಮೂಲಕ ಪಂದ್ಯದ ದಿಕ್ಕು ಬದಲಾಯಿತು. ಕಳೆದ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿದ್ದ ಮನೀಶ್‌ ಪಾಂಡೆ(15) ಹಾಗೂ ವಿಜಯ್‌ ಶಂಕರ್‌(26) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಕ್ರಿಸ್‌ ಜೋರ್ಡನ್‌ ಹಾಗೂ ಅರ್ಷ್‌ದೀಪ್‌ ಸಿಂಗ್‌ ಅತ್ಯುತ್ತಮ ಬೌಲಿಂಗ್‌ ಮಾಡಿ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಸನ್‌ರೈಸರ್ಸ್ ಹೈದರಾಬಾದ್‌ 114 ರನ್‌ಗಳಿಗೆ ಆಲೌಟ್‌ ಆಯಿತು. "ನಾವು ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಪಡೆದಿದ್ದೆವು, ಆದರೆ ಸಂಪೂರ್ಣ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿಲ್ಲ ಎಂಬ ಬಗ್ಗೆ ತುಂಬಾ ನಿರಾಸೆಯಾಗಿದೆ. ಈ ಹಿಂದೆ ಆಡಿದ ರೀತಿ ನಾವು ಇಂದಿನ ಪಂದ್ಯದಲ್ಲಿ ಆಡಲಿಲ್ಲ. ಹಾಗಾಗಿ, ಸೋಲು ಅನುಭವಿಸಬೇಕಾಯಿತು," ಎಂದು ವಾರ್ನರ್‌ ಬೇಸರ ವ್ಯಕ್ತಪಡಿಸಿದರು. ಈ ಗೆಲುವಿನೊಂದಿಗೆ ಕಿಂಗ್ಸ್ ಇಲೆವೆನ್‌ ಪಂಜಾಬ್‌ 10 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೇರಿತು. ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಎಂಟು ಅಂಕಗಳೊಂದಿಗೆ ಆರನೇ ಸ್ಥಾನ ಪಡೆಯಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3kvWbkb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...