ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯ ನಿಶ್ಚಿತ: ಪ್ರಧಾನಿ ಮೋದಿ ವಿಜಯದಶಮಿ ಸಂದೇಶ!

ಹೊಸದಿಲ್ಲಿ: ಮಾರಕ ವಿರುದ್ಧದ ಹೋರಾಟದಲ್ಲಿ ಭಾರತದ ಜಯ ನಿಶ್ಚಿತವಾಗಿದ್ದು, ಈ ಬಾರಿಯ ವಿಜಯದಶಮಿ ಈ ಜಯದ ಮುನ್ಸೂಚನೆ ಹೊತ್ತು ಬಂದಿದೆ ಎಂದು ಹೇಳಿದರು. ತಮ್ಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ಕಾಲದಲ್ಲಿ ದೇಶ ಅತ್ಯಂತ ಹೆಚ್ಚು ಜವಾಬ್ದಾರಿಯುತವಾಗಿ ಹಬ್ಬ ಆಚರಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು:
  • ವಿಜಯದಶಮಿ ಪ್ರಯುಕ್ತ ದೇಶದ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ.
  • ಕೊರೊನಾ ಕಾಲದಲ್ಲಿ ದೇಶ ಅತ್ಯಂತ ಹೆಚ್ಚು ಜವಾಬ್ದಾರಿಯುತವಾಗಿ ಹಬ್ಬಗಳನ್ನು ಆಚರಿಸುತ್ತಿದೆ.
  • ಈ ಸರಣಿ ಹಬ್ಬಗಳಲ್ಲಿ ನಿಮ್ಮ ಮನೆಗೆಲಸದವರು, ನಿಮ್ಮ ಪ್ರದೇಶಗಳಲ್ಲಿ ಹಣ್ಣು ಹಾಗೂ ತರಕಾರಿ ಮಾರುವವರನ್ನೂ ಶಾಮೀಲು ಮಾಡಿಕೊಳ್ಳಿ.
  • ದೇಶದ ಗಡಿಗಳನ್ನು ಕಾಯುತ್ತಿರುವ ನಮ್ಮ ವೀರ ಸೈನಿಕರ ಗೌರವಾರ್ಥ ಒಂದು ದೀಪ ಬೆಳಗಿ ಹಬ್ಬ ಆಚರಿಸಲು ಪ್ರಧಾನಿ ಮೋದಿ ಮನವಿ.
  • ಹಬ್ಬಗಳ ಕಾಲದಲ್ಲಿ ವೋಕಲ್ ಫಾರ್ ಲೋಕಲ್ ನೀತಿಯನ್ನು ಬೆಎಂಬಲಿಸುವಂತೆ ಪ್ರಧಾನಿ ಮೋದಿ ಮನವಿ.
  • ಖಾದಿ ಮಾಸ್ಕ್ ಕೊಳ್ಳುವುದರ ಮೂಲಕ ದೇಶೀಯ ವಸ್ತುಗಳನ್ನು ಕೊಳ್ಳುಲು ಜನ ಮುಂದಾಗಬೇಕು.
  • ದೇಶೀಯ ವಸ್ತುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಜನಪ್ರಿಯತೆ ಪಡೆದುಕೊಳ್ಳುತ್ತಿವೆ.
  • ಸರ್ದಾರ್ ವಲ್ಲಭಾಯಿ ಪಟೇಲ್ ಜನ್ಮ ಜಯಂತಿ ಸನೀಹದಲ್ಲಿದ್ದು, ದೇಶದ ಏಕತೆಯನ್ನು ನಾವು ಮತ್ತಷ್ಟು ಗಟ್ಟಿಗೊಳಿಸುವ ಸಂಕಲ್ಪ ಮಾಡುವ ಅವಕಾಶ ಬಂದಿದೆ.
ಹೀಗೆ ವಿಜಯದಶಮಿ ಅಂಗವಾಗಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಬ್ಬಗಳ ಸಂದರ್ಭದಲ್ಲಿ ಕೊರೊನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇಶದ ಜನರಲ್ಲಿ ಮನವಿ ಮಾಡಿದರು.


from India & World News in Kannada | VK Polls https://ift.tt/3dZ8SS3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...