ಹತ್ರಾಸ್‌ನಲ್ಲಿ ಗ್ಯಾಂಗ್‌ರೇಪ್‌ಗೆ ಒಳಗಾದ ಯುವತಿಯ ಮನೆಗೆ ಇಂದು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಭೇಟಿ

ಹೊಸದಿಲ್ಲಿ: ಹತ್ರಾಸ್‌ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಬೆನ್ನಲ್ಲೇ ಅತ್ಯಾಚಾರಕ್ಕೊಳಗಾದ ಯುವತಿಯ ಮನೆಗೆ ಭೇಟಿ ನೀಡಲು ಹೋಗಿದ್ದ ಜನಪ್ರತಿನಿಧಿಗಳ ಜೊತೆ ಉತ್ತರಪ್ರದೇಶ ಪೊಲೀಸರು ಅಮಾನವೀಯವಾಗಿ ವರ್ತಿಸಿದ ನಡೆಗೆ ದೇಶದೆಲ್ಲೆಡೆ ಖಂಡನೆ ವ್ಯಕ್ತವಾಗಿತ್ತು. ಇದೀಗ ಇಂದು ಮತ್ತೊಮ್ಮೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಗಾಂಧಿ ಹತ್ರಾಸ್‌ಗೆ ತೆರಳಿ ಯುವತಿಯ ಮನೆಯವರಿಗೆ ಸಾಂತ್ವಾನ ಹೇಳಲಿದ್ದಾರೆ. ಮೊನ್ನೆ ಹತ್ರಾಸ್‌ಗೆ ತೆರಳಿದ್ದ ರಾಹುಲ್ ಗಾಂಧಿಯನ್ನು ಅರ್ಧದಲ್ಲೇ ತಡೆದ ಪೊಲೀಸರು ಜನಪ್ರತಿನಿಧಿ ಅನ್ನೋದನ್ನು ಚಿಂತಿಸದೆ ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಇದೀಗ ಶನಿವಾರ ಮತ್ತು ಮತ್ತೆ ಹತ್ರಾಸ್‌ಗೆ ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್‌ ತಿಳಿಸಿದೆ. ಈ ಸಂಬಂಧ ಕಾಂಗ್ರೆಸ್‌ ಪಕ್ಷ ಪ್ರಕಟಣೆ ಹೊರಡಿಸಿದ್ದು, ಕಾಂಗ್ರೆಸ್‌ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸದರಾಗಿರುವ ರಾಹುಲ್‌ ಗಾಂಧಿಯವರು ಇತ್ತೀಚೆಗೆ ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮಾರಣಾಂತಿಕ ಹಲ್ಲೆಯಿಂದ ಮರಣವನ್ನಪ್ಪಿದ ಮತ್ತು ರಹಸ್ಯವಾಗಿ ಶವಸಂಸ್ಕಾರ ಮಾಡಿದ 19 ವರ್ಷದ ಯುವತಿಯ ಮನೆಗೆ ಭೇಟಿ ನೀಡಿ ದುಃಖದಲ್ಲಿರುವ ಮನೆಯವರಿಗೆ ಸಾಂತ್ವನ ಹೇಳಲಿದ್ದಾರೆ ಎಂದು ತಿಳಿಸಿದೆ. ಯುವತಿ ಮೃತಪಟ್ಟ ಮರುದಿನ ಮಧ್ಯರಾತ್ರಿ ಆಕೆಯ ಶವವನ್ನು ಕುಟುಂಬಿಕರಿಗೆ ನೋಡಲೂ ಬಿಡದೇ ಶವಸಂಸ್ಕಾರ ಮಾಡಿದ್ದಕ್ಕೆ ಜನಸಮುದಾಯದಿಂದ ಆಕ್ರೋಶ ವ್ಯಕ್ತವಾಗಿತ್ತು. ಮಾರನೇ ದಿನ ಅವರ ಮನೆಗೆ ತೆರಳಿ ಕುಟುಂಬಿಕರಿಗೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯನ್ನು ಕೆಳಕ್ಕೆ ತಳ್ಳಿ ಬೀಳಿಸಿದ್ದಲ್ಲದೇ, ದಿಲ್ಲಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಮೃತಾ ಧವನ್ ಅವರ ಬಟ್ಟೆಯನ್ನು ಹರಿದು ಗೂಂಡಾ ವರ್ತನೆ ತೋರಿದ್ದರು. ನಂತರ ನಿನ್ನೆ ಹತ್ರಾಸ್‌ಗೆ ತೆರಳಿದ್ದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಅವರ ಜೊತೆಯೂ ಅಮಾನುಷವಾಗಿ ವರ್ತಿಸಿ ಕೆಳಕ್ಕೆ ತಳ್ಳಲಾಗಿತ್ತು.


from India & World News in Kannada | VK Polls https://ift.tt/36rLpHB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...