ಜಮ್ಮು-ಕಾಶ್ಮೀರ: ಭಾರತದ ಗಡಿಯಲ್ಲಿ ಡ್ರೋನ್‌ಗಳನ್ನು ಕಳುಹಿಸಿ ಬೇಹುಗಾರಿಕೆ ಮಾಡಲು ಮುಂದಾದ ಪಾಕಿಸ್ತಾನಕ್ಕೆ ಭಾರತ ತಕ್ಕ ಏಟು ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಕೇರನ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯ ಅಥವಾ ಕ್ವಾಡ್ಕಾಪ್ಟರ್ ಅನ್ನು ಹೊಡೆದುರುಳಿಸಿದೆ. ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ಭಾರತೀಯ ಸೇನೆ ಮೂಲಗಳು ತಿಳಿಸಿವೆ. ಇನ್ನು ಆತಂಕಕಾರಿ ಸಂಗತಿಯೆಂದರೆ ಭಾರತೀಯ ಸೇನೆ ಹೊಡೆದರುಳಿಸಿದ ಡ್ರೋನ್, ಚೀನಾ ಕಂಪನಿಗೆ ಸೇರಿದ್ದಾಗಿದ್ದು, ಡಿಜೆಐ ಮಾವಿಕ್- 2 ಪ್ರೊ ಮಾದರಿಯಾ ಡ್ರೋನ್ ಆಗಿದೆ ಎಂದು ತಿಳಿದುಬಂದಿದೆ. ಭಾರತೀಯ ವಲಯವನ್ನು ಪ್ರವೇಶಿಸಿದ ಹಿನ್ನೆಲೆ ಪಾಕಿಸ್ತಾನಕ್ಕೆ ಸೇರಿದ ಕ್ವಾಡ್‌ಕಾಪ್ಟರ್ ಅಥವಾ ಡ್ರೋನನ್ನು ಭಾರತೀಯ ಸೇನೆ ಹೊಡೆದರುಳಿಸಿದೆ. ಏನಿದು ಕ್ವಾಡ್‌ಕಾಪ್ಟರ್ ? ಡ್ರೋನ್ ಅಥವಾ ಕ್ವಾಡ್‌ಕಾಪ್ಟರ್ ನಾಲ್ಕು ರೆಕ್ಕೆಗಳನ್ನು ಹೊಂದಿದ್ದು. ಮಾನವ ರಹಿತ ಹಾರಾಟ ನಡೆಸುತ್ತದೆ. ಕಂಪ್ಯೂಟರ್ ಅಥವಾ ರಿಮೋಟ್ ಮೂಲಕ ಇದರ ಹಾರಾಟವನ್ನು ಕಂಟ್ರೋಲ್ ಮಾಡಬಹುದಾಗಿದೆ. ಈ ಡ್ರೋನ್‌ಗಳನ್ನು ಪಾಕಿಸ್ತಾನ ಗಡಿಯಲ್ಲಿರುವ ಉಗ್ರರಿಗೆ ಶಸ್ತ್ರಾಸ್ತ್ರಗಳ ರವಾನೆ. ಬೇಹುಗಾರಿಕೆ. ಬಾಂಬ್‌ಗಳ ರವಾನಿಸಿ ಬ್ಲಾಸ್ಟ್ ಇನ್ನಿತರ ಕಾರ್ಯಕ್ಕೆ ಬಳಸುತ್ತದೆ. ಇತ್ತೀಚಿನ ದಿನಗಳಲ್ಲಿ ಡ್ರೋನ್‌ಗಳ ಬಳಸಿಯೇ ಹಲವು ಬ್ಲಾಸ್ಟ್‌ಗಳು ನಡೆದಿರುವ ಘಟನೆಯು ಇದೆ.
from India & World News in Kannada | VK Polls https://ift.tt/3dTTTJ7