ಗಲ್ವಾನ್‌ ಕಣಿವೆಯಲ್ಲಿ ಚೀನಿ ಸೈನಿಕರ ಜೊತೆ ಕಾದಾಡಿ ವೀರ ಮರಣವನಪ್ಪಿದ 20 ಯೋಧರಿಗೆ ಸ್ಮಾರಕದ ಮೂಲಕ ನಮನ!

ಹೊಸದಿಲ್ಲಿ: ಗಲ್ವಾನ್‌ ಕಣಿವೆಯಲ್ಲಿ ಚೀನಿ ಸೈನಿಕರ ಜೊತೆ ಮುಖಾಮುಖಿಯಾಗಿ ಕಾದಾಡಿ ವೀರ ಮರಣವನಪ್ಪಿದ 19 ಭಾರತೀಯ ಯೋಧರಿಗೆ ಭಾರತ ಸರಕಾರ ನಿರ್ಮಾಣದ ಮೂಲಕ ಕೋಟಿ ಕೋಟಿ ನಮನ ಸಲ್ಲಿಸಿದೆ. ಲಡಾಖ್‌ನ ಆಯಕಟ್ಟಿನ ರಸ್ತೆಯಾಗಿರುವ ಡರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿ ಬಳಿ ಇರುವ ಕೆಎಂ -120 ಪೋಸ್ಟ್ ಬಳಿ ಯೋಧರ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಸ್ಮಾರಕದಲ್ಲಿ 20 ಸೈನಿಕರ ಹೆಸರುಗಳು ಮತ್ತು ಅವರು ಜೂನ್ 15ರಂದು ನಡೆಸಿದ ಕಾರ್ಯಾಚರಣೆಯ ಮಾಹಿತಿ ಇದೆ. ಅತ್ಯಂತ ಸುಂದರವಾದ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಲಡಾಕ್‌ನಲ್ಲಿರುವ ಗಲ್ವಾನ್‌ ಕಣಿವೆಯಲ್ಲಿ ಚೀನಾ ಭಾರತದ ಸೇನೆಯೊಂದಿಗೆ ಜೂನ್ 15ರಂದು ಘರ್ಷಣೆಗೆ ನಿಂತಿತ್ತು. ತಮ್ಮ ನೆಲವನ್ನು ಕಾಪಾಡುವ ನಿಟ್ಟಿನಲ್ಲಿ ಈ ವೇಳೆ ಆಯಕಟ್ಟಿನ ಪ್ರದೇಶದಲ್ಲಿ ನಿಯೋಜನೆಯಾಗಿದ್ದ ಪ್ರಾಣ ಕೊಟ್ಟು ನೆಲವನ್ನು ಉಳಿಸಿದ್ದಾರೆ. ಕೇವಲ 20 ಮಂದಿ ವೀರ ಯೋಧರು ಸುಮಾರು 90ಕ್ಕೂ ಚೀನಿ ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಭಾರತದ ಯೋಧರ ಏಟಿಗೆ 40 ಕ್ಕೂ ಹೆಚ್ಚು ಚೀನಿ ಸೈನಿಕರು ಮೃತರಾಗಿದ್ದರು. ಈ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಸದ್ಯ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮುಂದುವರಿದಿದೆ. ಇತ್ತೀಚೆಗೆ ಗುಂಡು ಸದ್ದು ಕೂಡ ಕೇಳಿಬಂದಿತ್ತು. ಇನ್ನು ಈ ಕಾರ್ಯಾಚರಣೆಯನ್ನು ಆಪರೇಶನ್‌ ಸ್ನೋ ಲಿಯೋಪಾರ್ಡ್‌ ಎಂದು ಕರೆಯಲಾಗುತ್ತದೆ.


from India & World News in Kannada | VK Polls https://ift.tt/2EWbWkZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...