ತಿರುವನಂತಪುರ: ಗಜ ಗಾತ್ರದ ಆನೆಯನ್ನು ನೋಡಿದರೆ ಯಾರಿಗಾದರೂ ಒಮ್ಮೆ ಎದೆಯಲ್ಲಿ ನಡುಕ ಸೃಷ್ಟಿಯಾಗುತ್ತದೆ. ಹಾಗಿರುವಾಗ ಪುಟ್ಟ ಬಾಲೆ ಹಾಗೂ ಆನೆಯ ನಡುವಣ ಫ್ರೆಂಡ್ಸ್‌ಶಿಪ್ ವೈರಲ್ ಆಗುತ್ತಿದೆ. ಕೇರಳದ ರಾಜಧಾನಿ ತಿರುವನಂತಪುರದಿಂದ ಇಂತಹದೊಂದು ವರದಿ ಬಂದಿದೆ. ಎರಡು ವರ್ಷದ ಪುಟ್ಟ ಬಾಲಕಿ ಭಾಮಾ ಎಂಬಾಕೆ ಉಮಾ ದೇವಿ ಎನ್ನುವ ಆನೆಯೊಂದಿಗೆ ಗೆಳೆತನ ಮಾಡಿಕೊಂಡಿದ್ದಾರೆ. ಮಗು ಆರು ತಿಂಗಳ ಹರೆಯಕ್ಕೆ ತಲುಪಿದಾಗಲೇ ಗಜರಾಜನೊಂದಿಗೆ ಒಡನಾಟವನ್ನು ಆರಂಭಿಸಿರುವುದಾಗಿ ಹೆತ್ತವರು ವಿವರಿಸುತ್ತಾರೆ. ಭಾಮಾ ನಡೆದಾಡುವಾಗ ಹಿಂದುಗಡೆ ಮಾವುತ ಹೇಳಿದಂತೆ ಬಹಳ ಸಭ್ಯವಾಗಿ ಉಮಾ ದೇವಿ ನಡೆದಾಡುತ್ತಾಳೆ. ಅವರಿಬ್ಬರು ಸ್ನೇಹಿತರಾಗಿದ್ದಾರೆ ಎಂದು ಹೆತ್ತವರು ತಿಳಿಸುತ್ತಾರೆ. ಈಗಾಗಲೇ ಮಗು ಹಾಗೂ ಆನೆಯ ನಡುವಣ ಟಿಕ್ ಟಾಕ್ ವಿಡಿಯೋ ವೈರಲ್ ಆಗಿದೆ. 31 ವರ್ಷದ ಆನೆಯನ್ನು ಮನೆಯ ಸದಸ್ಯರಂತೆ ನೋಡಿಕೊಳ್ಳಲಾಗುತ್ತಿದೆ. ಕಳೆದ ಏಳು ವರ್ಷಗಳಿಂದ ಕುಟುಂಬದ ಜೊತೆಗಿದೆ. ಅಲ್ಲದೆ ಮಗು ಹೇಳಿದಂತೆ ಆನೆ ಎಲ್ಲವನ್ನು ಅಚ್ಚುಕಟ್ಟಾಗಿ ಅನುಸರಿಸುತ್ತದೆ. ಆನೆ ಹಾಗೂ ಮಗುವಿನ ಅನ್ಯೋನ್ಯ ಸ್ನೇಹ ವರ್ತನೆಯು ಸಮೀಪ ನಿವಾಸಿಗಳಲ್ಲಿ ಅಚ್ಚರಿಯನ್ನಂಟು ಮಾಡಿರುವುದಂತೂ ನಿಜ. ಅಂದ ಹಾಗೆ ಜೂನ್ 8ರಂದು ಬಾಲಕಿಗೆ ಎರಡು ವರ್ಷ ತುಂಬಲಿದೆ.
from India & World News in Kannada | VK Polls https://ift.tt/2XZEgZ0