ಬರುತ್ತಿದೆ ನಿಸರ್ಗ: ಅಲಿಬಾಗ್‌ನಲ್ಲಿ ಮಳೆ, ಬಿರುಗಾಳಿಯ ರುದ್ರ ನರ್ತನ!

ಮುಂಬೈ: ಮುಂಬೈ ಸಮೀಪದ ಅಲಿಬಾಗ್‌ ಕರಾವಳಿ ತೀರದಿಂದ ಕೇವ ಲ 130 ಕಿ.ಮೀ. ದೂರದಲ್ಲಿದ್ದು, ಅಲಿಬಾಗ್‌ನಲ್ಲಿ ಬಿರುಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಅಲಿಬಾಗ್‌ನಲ್ಲಿ 110-120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಭಾರೀ ಮಳೆ ಕೂಡ ಆಗುತ್ತಿದೆ. ಚಂಡಮಾರುತ ಕರಾವಳಿಯಿಂದ ಇನ್ನೂ 130 ಕಿ.ಮೀ. ದೂರದಲ್ಲಿರುವಾಗಲೇ ಇಷ್ಟೊಂದು ಪ್ರಭಾವ ಬೀರಿದ್ದು ಕರಾವಳಿಗೆ ಅಪ್ಪಳಿಸಿದ ಮೇಲೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಯಾರೂ ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಲಾಗಿದ್ದು, ಈಗಾಗಲೇ ಪ್ರದೇಶದ ಸುಮಾರು 19,000 ಸಾವಿರ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಸದ್ಯ ನಿಸರ್ಗ ಚಂಡಮಾರುತ ಅಲಿಬಾಗ್‌ನ ದಕ್ಷಿಣ ನೈರುತ್ಯ ದಿಕ್ಕಿನಿಂದ 130 ಕಿ.ಮೀ ದೂರವಿದ್ದು, ಮುಂಬೈನ ದಕ್ಷಿಣ ನೈರುತ್ಯ ದಿಕ್ಕಿನಿಂದ 170 ಕಿ.ಮೀ ಮತ್ತು ಸೂರತ್‌ನ ದಕ್ಷಿಣ ನೈರುತ್ಯ ದಿಕ್ಕಿನಿಂದ 415 ಕಿ.ಮೀ ದೂರದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ್ ಮಹಾಪಾತ್ರಾ ಮಾಹಿತಿ ನೀಡಿದ್ದಾರೆ. ನಿಸರ್ಗ ಚಂಡಮಾರುತ ಭಾರೀ ವೇಗದಲ್ಲಿ ಬಂದು ಕರಾವಳಿಗೆ ಅಪ್ಪಳಿಸಲಿರುವುದರಿಂದ ತೀವ್ರ ಕಟ್ಟೆಚ್ಚರವಹಿಸಲಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. NDRFನ 15 ತುಕಡಿಗಳು ಸರ್ವ ಸನ್ನದ್ಧವಾಗಿದ್ದು, ಜೀವಹಾನಿಯನ್ನು ತಪ್ಪಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.


from India & World News in Kannada | VK Polls https://ift.tt/2zYMj0d

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...