ಕಪ್ಪು ವರ್ಣೀಯನ ಹತ್ಯೆ ಖಂಡಿಸಿದ ಟ್ರಂಪ್ ಪುತ್ರಿ: ಪ್ರತಿಭಟನೆಗೆ ಬೆಂಬಲ ಸೂಚಿಸಿ ಅಚ್ಚರಿ!

ವಾಷಿಂಗ್ಟನ್: ಅಮೆರಿಕದಲ್ಲಿ ಕಪ್ಪು ವರ್ಣೀಯನ ಹತ್ಯ ಖಂಡಿಸಿದ ನಡೆಯುತ್ತಿರುವ ಪ್ರತಿಭಟನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸುತ್ತಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿರುವವರು ಲೂಟಿಕೋರರು ಎಂದು ಟ್ರಂಪ್ ಕಿಡಿಕಾರಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಟಿಫಾನಿ ಟ್ರಂಪ್ ಕಪ್ಪು ವರ್ಣೀಯನ ಕೊಲೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಮೆರಿಕ ಜನಾಂಗೀಯ ದ್ವೇಷವನ್ನು ಎಂದಿಗೂ ಸಹಿಸದು ಎಂದಿರುವ ಟಿಫಾನಿ ಟ್ರಂಪ್, ಒಗ್ಗಟ್ಟಿನಿಂದ ಈ ಪ್ರತಿಭಟನೆ ಯಶಸ್ಸು ಕಾಣಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಪ್ರತಿಭಟನೆ ಕಾವು ಜೋರಾಗಿದ್ದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗಿಸುತ್ತಿದ್ದಾರೆ. ಈ ವೇಳೆ ವೈಟ್‌ಹೌಸ್‌ಗೆ ಸಮೀಪದಲ್ಲಿರುವ ಚರ್ಚ್‌ವೊಂದಕ್ಕೆ ಹಾನಿಯಾಗಿದ್ದು, ಟ್ರಂಪ್ ಈ ಚರ್ಚೆ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳಲು ಅನುಕೂಲವಾಗಲಿ ಎಂದು ಪೊಲೀಸರು ಪ್ರತಿಭಟನಾಕಾರರ ಮೇಲೆರಗಿ ಸ್ಥಳವನ್ನು ಖಾಲಿ ಮಾಡಿಸಿದ್ದರು. ಟ್ರಂಪ್ ಅವರ ಈ ನಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಘಟನೆ ನಡೆದ ಕೇವಲ ಒಂದು ಗಂಟೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿರುವುದು ಕುತೂಹಲ ಕೆರಳಿಸಿದೆ. ಇದೇ ವೇಳೆ ಪ್ರತಿಭಟನಕಾರರ ವಿರುದ್ಧ ಮಿಲಿಟರಿ ಬಳಸುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿ ಹೇಳುವಂತೆ ಹಲವರು ಟಿಫಾನಿ ಟ್ರಂಪ್ ಅವರಲ್ಲಿ ಮನವಿ ಮಾಡಿದ್ದಾರೆ. ಯಾರು ಟಿಫಾನಿ ಟ್ರಂಪ್?: ಟಿಫಾನಿ ಟ್ರಂಪ್ ಡೊನಾಲ್ಡ್ ಟ್ರಂಪ್ ಅವರ ಕೊನೆಯ ಪುತ್ರಿಯಾಗಿದ್ದು, ಟ್ರಂಪ್ ಅವರ ಎರಡನೇ ಪತ್ನಿ ಮಾರ್ಲಾ ಮ್ಯಾಪ್ಲೆಸ್ ಅವರ ಮಗಳು. ಕಾನೂನು ಪದವಿಧರೆಯಾಗಿರುವ ಟಿಫಾನಿ ಇದೀಗ ಕಪ್ಪು ವರ್ಣೀಯರ ಪ್ರತಿಭಟನೆಯನ್ನು ಬೆಂಬಲಿಸಿ ಗಮನ ಸೆಳೆದಿದ್ದಾರೆ.


from India & World News in Kannada | VK Polls https://ift.tt/301t9BE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...