ಇರಾನ್‌ಗೆ ಥ್ಯಾಂಕ್ಸ್ ಹೇಳಿದ ಟ್ರಂಪ್: 'ಡೀಲ್ ಈಸ್ ಪಾಸಿಬಲ್' ಎಂದ ಅಮೆರಿಕದ ಅಧ್ಯಕ್ಷ!

ವಾಷಿಂಗ್ಟನ್: ಈಗಿನ ಕಾಲದಲ್ಲಿ ಯಾರು ಯಾವಾಗ ಯಾರಿಗೆ ಶತ್ರುಗಳಾಗುತ್ತಾರೋ ತಿಳಿಯದಾಗದೆ. ಅದೇ ರೀತಿ ಶತ್ರುಗಳಾದವರು ಯಾವಾಗ ಮಿತ್ರರಾಗುತ್ತಾರೋ ಅದೂ ತಿಳಿಯದಾಗಿದೆ. ಪರಸ್ಪರ ಹಾವು-ಮುಂಗುಸಿಯಂತೆ ಕಿತ್ತಾಡುತ್ತಿರುವ ಅಮೆರಿಕ-ಇರಾನ್ ಪರಸ್ಪರ ಶತ್ರುತ್ವ ಸಾಧಿಸುತ್ತಲೇ ಬರುತ್ತಿವೆ. ಇರಾನ್‌ನ ಅಣುಸ್ಥಾವರದಿಂದ ಶುರುವಾದ ಈ ಹಗೆತನ ಇರಾನ್‌ನ ಉನ್ನತ ಸೇನಾ ಕಮಾಂಡರ್‌ನ ಸಾವಿನವರೆಗೆ ಬಂದು ನಿಂತಿದೆ. ಈ ಮಧ್ಯೆ ಎರಡೂ ದೇಶಗಳ ನಡುವಿನ ಹಗೆತನ ಕಡಿಮೆ ಮಾಡಬಲ್ಲ ಸಂಗತಿಗಳೂ ಜರುಗಿದ್ದು, ಪರಸ್ಪರ ಶಾಂತಿ ಮಾತುಕತೆ ಸಾಧ್ಯ ಎಂಬ ಆಶಾಭಾವನೆಯನ್ನು ಮೂಡಿಸಿದೆ. ಇರಾನ್‌ನಲ್ಲಿ ಬಂಧನಕ್ಕೀಡಾಗಿದ್ದ ಅಮೆರಿಕದ ನೌಕಾಸೇನೆ ಅಧಿಕಾರಿ ಮೈಕೆಲ್ ವೈಟ್‌ನನ್ನು ಮರಳಿ ತಾಯ್ನಾಡಿಗೆ ಕಳುಹಿಸಲಾಗಿದ್ದು, ಇದಕ್ಕಾಗಿ ಅಧ್ಯಕ್ಷ ಇರಾನ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ತನ್ನ ಸುಪರ್ದಿಯಲ್ಲಿದ್ದ ಅಮೆರಿಕದ ನೌಕಾಸೇನೆ ಹಿರಿಯ ಅಧಿಕಾರಿ ಮೈಕೆಲ್ ವೈಟ್‌ನನ್ನು ಬಿಡುಗಡೆ ಮಾಡಿದೆ. ಕೈದಿಗಳ ಪರಸ್ಪರ ವಿನಿಮಯ ಒಪ್ಪಂದದ ಭಾಗವಾಗಿ ಮೈಕೆಲ್ ವೈಟ್‌ನನ್ನು ಇರಾನ್ ಬಿಡುಗಡೆ ಮಾಡಿದೆ. ಈ ಕುರಿತು ಮಾತನಾಡಿರುವ ಇರಾನ್ ಇರಾನ್ ವಿದೇಶಾಂಗ ಸಚಿವ ಜಾವೇದ್ ಜರೀಫ್, ಅಮೆರಿಕ ಕೂಡ ತನ್ನ ಸುಪರ್ದಿಯಲ್ಲಿರುವ ಇರಾನ್ ನಾಗರಿಕರನ್ನು ಬೇಷರತ್ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಅಮೆರಿಕ ಈಗಾಗಲೇ ಡಾ. ಮಾಜೀದ್ ತಹ್ರೀ ಅವರನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಇದೀಗ ಮೈಕೆಲ್ ವೈಟ್‌ನನ್ನು ಬಿಡುಗಡೆ ಮಾಡಿದೆ. ತಮ್ಮ ಪ್ರಜೆಯನ್ನು ಬಿಡುಗಡೆ ಮಾಡಿರುವ ಇರಾನ್ ನಡೆಯನ್ನು ಸ್ವಾಗತಿಸಿರುವ ಅಮೆರೆಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಮ್ಮ ನಡುವೆ ಒಪ್ಪಂದವಾಗುವ ಸಾಧ್ಯತೆ ಇದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ. ಮುಂದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ತಾವೇ ಗೆಲ್ಲಲಿದ್ದು, ಇರಾನ್ ಸೂಕ್ತ ಒಪ್ಪಂದಕ್ಕೆ ಮುಂದಾದರೆ ಸ್ವಾಗತ ಎಂದು ಟ್ರಂಪ್ ಹೇಳಿದ್ದಾರೆ.


from India & World News in Kannada | VK Polls https://ift.tt/3dzYDTr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...