ಶೀಘ್ರದಲ್ಲೇ ವಿಜಯ್‌ ಮಲ್ಯ ಗಡಿಪಾರು: ಮದ್ಯ ದೊರೆಗೆ ಮೀಮ್ಸ್‌, ಟ್ರೋಲ್‌ಗಳ ಅಬ್ಬರದ ಸ್ವಾಗತ!

ಹೊಸದಿಲ್ಲಿ: ಸುಮಾರು 9 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೆ ಭಾರತ ಬಿಟ್ಟು ಓಡಿ ಹೋಗಿ ಬ್ರಿಟನ್‌ನಲ್ಲಿ ನೆಲೆಸಿರುವ ಮದ್ಯದ ಉದ್ಯಮಿ ವಿಜಯ್‌ ಮಲ್ಯ ಶೀಘ್ರದಲ್ಲೇ ಭಾರತಕ್ಕೆ ಗಡಿಪಾರಾಗುವ ಸಾಧ್ಯೆ ಇದೆ ಎಂದು ವರದಿಯಾಗಿದೆ. ಗಡಿಪಾರು ಕುರಿತ ಕಾನೂನು ಪ್ರಕ್ರಿಯೆಗಳು ಪೂರ್ಣವಾಗಿದ್ದು, ಮುಂಬರುವ ದಿನಗಳಲ್ಲಿ ಯಾವುದೇ ಕ್ಷಣದಲ್ಲಾದರೂ ಮಲ್ಯ ಗಡಿಪಾರಾಗುವ ಸಾಧ್ಯತೆ ಇದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳನ್ನು ಆಧರಿಸಿ ಐಎಎನ್ಎಸ್‌ ವರದಿ ತಿಳಿಸಿದೆ. ಹೀಗಿದ್ದರೂ ಮಲ್ಯ ಗಡಿಪಾರಾಗುವ ದಿನಾಂಕ ಬಹಿರಂಗವಾಗಿಲ್ಲ. ಬ್ರಿಟನ್‌ ಸುಪ್ರೀಂ ಕೋರ್ಟ್‌ನಲ್ಲಿ ಮಲ್ಯರ ಅರ್ಜಿ ತಿರಸ್ಕೃತವಾಗುವುದರೊಂದಿಗೆ ಎಲ್ಲ ಕಾನೂನು ಪ್ರಕ್ರಿಯೆ ಮುಗಿದಿವೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಬೆನ್ನಲ್ಲೇ ಮಲ್ಯ ಗಡಿಪಾರಿಗೆ ಸಂಬಂಧಿಸಿ ಮೀಮ್ಸ್‌, ಟ್ರೋಲ್‌ಗಳು ಸಾಮಾಜಿಕ ತಾಣಗಳಲ್ಲಿ ಭರ್ಜರಿ ಮನರಂಜನೆಯನ್ನು ಒದಗಿಸುತ್ತಿವೆ.ವಿಜಯ್‌ ಮಲ್ಯ ಭಾರತಕ್ಕೆ ಬರುವುದನ್ನೇ ಸಾಲಕೊಟ್ಟ ಬ್ಯಾಂಕ್‌ಗಳು ಹೇಗೆ ಬಾಗಿಲಲ್ಲಿ ನಿಂತು ಕಾಯುತ್ತಿವೆ, ಗಡಿಪಾರಾದಂತೆ ಮಲ್ಯ ಮೇಲೆ ಮುಗಿ ಬೀಳಲು ಹೇಗೆ ಕಾತರಗೊಂಡಿವೆ, ಭಾರತಕ್ಕೆ ಬಂದ ಮೇಲೆ ಮಲ್ಯರ ಪಾಡೇನು ಇತ್ಯಾದಿಗಳನ್ನು ತಮ್ಮ ಕಲ್ಪನೆಗೆ ಅನುಗುಣವಾಗಿ ಮೀಮ್ಸ್‌, ಟ್ರೋಲ್ಸ್‌ ಮೂಲಕ ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುತ್ತಿದ್ದಾರೆ. ಅಂತಹ ಒಂದಷ್ಟು ನಗೆ ಹುಟ್ಟಿಸುವ, ಮನರಂಜನೆ ನೀಡುವ ಮೀಮ್ಸ್‌, ಟ್ರೋಲ್‌ಗಳು ಇಲ್ಲಿವೆ.ವಿಜಯ್‌ ಮಲ್ಯ ಹಸ್ತಾಂತರ ಪ್ರಕ್ರಿಯೆ; ಯಾವ ಕ್ಷಣದಲ್ಲಿ ಬೇಕಾದರೂ ಮುಂಬೈಗೆ ಮದ್ಯದ ದೊರೆ

ಆಗಸ್ಟ್‌ 2018ರಲ್ಲಿ ವಿಜಯ್‌ ಮಲ್ಯ ಅರ್ಜಿಯನ್ನು ಲಂಡನ್‌ ಕೋರ್ಟ್‌ ವಿಚಾರಣೆ ನಡೆಸುತ್ತಿದ್ದಾಗ, ಮಲ್ಯರನ್ನು ಹಸ್ತಾಂತರ ಮಾಡಿದರೆ ಯಾವ ಜೈಲಿನಲ್ಲಿ ಇಡುತ್ತೀರಿ? ಅಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಕೊಡಿ ಎಂದು ಭಾರತಕ್ಕೆ ಕೇಳಿತ್ತು. ಆಗ ಅಧಿಕಾರಿಗಳು ಮುಂಬಯಿನ ಅರ್ಥರ್‌ ರಸ್ತೆಯ ಜೈಲಿನ ವಿಡಿಯೋವನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಇದೀಗ ಮಲ್ಯ ಭಾರತಕ್ಕೆ ಮರಳುತ್ತಿರುವ ಹಿನ್ನೆಲೆ ಸಾಲ ಕೊಟ್ಟಿದ್ದ ಬ್ಯಾಂಕ್‌ಗಳು ಮುಂಬಯಿ ವಿಮಾನ ನಿಲ್ದಾಣದ ಹೊರಗೆ ಹೇಗೆ ಕಾಯುತ್ತಿದ್ದಾರೆ ಎಂದು ಬಿಂಬಿಸಿದ ಮೀಮ್ಸ್‌.

ಲಂಡನ್‌ ಸುಪ್ರೀಂ ಕೋರ್ಟ್‌ ಮೇ 14ರಂದು ವಿಜಯ್‌ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಭಾರತಕ್ಕೆ ಗಡಿಪಾರು ಮಾಡುವ ವಿಚಾರವಾಗಿ ಗ್ರೀನ್‌ ಸಿಗ್ನಲ್‌ ನೀಡಿತ್ತು. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ಮಾಹಿತಿ ನೀಡಿರುವುದರಿಂದ ಮಲ್ಯ ಕೆಲವೇ ದಿನಗಳಲ್ಲಿ ಮುಂಬಯಿಗೆ ಬಂದಿಳಿಯುವುದು ಖಚಿತವಾಗಿದಂ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ಮಲ್ಯ ಸಾಲದ ದುಡ್ಡನ್ನು ಮರುಪಾವತಿ ಮಾಡಲು ತಂದ್ರಾ? ಎಂಬುದನ್ನು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಚಿತ್ರ ಬಳಸಿಕೊಂಡು ಪ್ರಕಟಿಸಿರುವ ಮೀಮ್‌!

ಸುಮಾರು 9 ಸಾವಿರ ಕೋಟಿ ರೂ. ಹೆಚ್ಚು ಸಾಲ ತೆಗೆದುಕೊಂಡು ಒಂದು ಪೈಸೆ ಮರುಪಾವತಿ ಮಾಡದೆ, ಹೇಳದೆ ಕೇಳದೆ ಸೀದಾ ಲಂಡನ್‌ ಹೋಗಿ ಸೆಟ್ಲಾಗಿರುವ ವಿಜಯ್‌ ಮಲ್ಯನನ್ನು ಕಾನೂನು ಪ್ರಕ್ರಿಯೆಯಲ್ಲಿ ಮಣಿಸಿ ಭಾರತಕ್ಕೆ ಗಡಿಪಾರು ಮಾಡಲಾಗುತ್ತಿದೆ ಎಂಬ ವಿಚಾರ ಭಾರತೀಯ ಬ್ಯಾಂಕ್‌ಗಳ ಕಿವಿಗೆ ಬೀಳುತ್ತಿದ್ದಂತೆ ಮಲ್ಯರ ಆಹ್ವಾನಕ್ಕೆ ಹೇಗೆ ತಯಾರಿ ಮಾಡಿಕೊಳ್ಳುತ್ತಿರಬಹುದು ಎಂಬುದು ಮೀಮ್ಸ್‌ ಕ್ರಿಯೇಟರ್‌ನ ದೃಷ್ಟಿಯಲ್ಲಿ ದಾಖಲಾಗಿದ್ದು ಹೀಗೆ.



from India & World News in Kannada | VK Polls https://ift.tt/3dvIBcZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...