ಜನರಿಕ್‌ ಔಷಧ ಮಾರಾಟದಲ್ಲಿ ಹೊಸ ದಾಖಲೆ: 2 ತಿಂಗಳಲ್ಲಿ ನೂರು ಕೋಟಿ ರೂ. ವಹಿವಾಟು!

ಕೊರೊನಾ ಸಂಕಷ್ಟದ ಸಂದರ್ಭ ಅನೇಕ ಕಡೆಗಳಲ್ಲಿ ಔಷಧ ಕೊರತೆ ಉಂಟಾಗಿ ವ್ಯವಹಾರ ಕುಸಿದಿದ್ದರೂ ಜನೌಷಧ ಮಳಿಗೆಗಳಲ್ಲಿ ಭರ್ಜರಿ ಮಾರಾಟ ದಾಖಲಿಸಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ಎರಡು ತಿಂಗಳಲ್ಲಿ ನೂರು ಕೋಟಿ ರೂ. ಮೊತ್ತದ ಔಷಧ ಮಾರಾಟವಾಗುವ ಮೂಲಕ ಇದುವರೆಗಿನ ಗರಿಷ್ಠ ಮಾರಾಟವನ್ನು ದಾಖಲಿಸಿದೆ.ಕಳೆದ ಹಣಕಾಸು ವರ್ಷದ ಏಪ್ರಿಲ್‌-ಮೇ ಎರಡು ತಿಂಗಳ ಅವಧಿಯಲ್ಲಿ ಕೇವಲ 44 ಕೋಟಿ ರೂ. ನಷ್ಟು ಮಾತ್ರ ಜನರಿಕ್‌ ಔಷಧ ಮಾರಾಟವಾಗಿತ್ತು. ಈಗ ಜನಸಾಮಾನ್ಯರಲ್ಲಿ ಜನರಿಕ್‌ ಔಷಧ ಬಗ್ಗೆ ಹೆಚ್ಚು ತಿಳಿವಳಿಕೆ ಮತ್ತು ನಂಬಿಕೆ ಮೂಡಿದ್ದರಿಂದ ಮತ್ತು ಜನೌಷಧ ಕೇಂದ್ರಗಳೂ ಹೆಚ್ಚಿದ್ದರಿಂದ ಈ ವಿತ್ತೀಯ ವರ್ಷದ ಮೊದಲೆರಡು ತಿಂಗಳಲ್ಲಿ ಭರ್ಜರಿ ಮಾರಾಟ ದಾಖಲಿಸಿಕೊಂಡಿದೆ.ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು 2008ರಲ್ಲೇ ಆರಂಭವಾಗಿದ್ದರೂ ಅದಕ್ಕೊಂದು ಸ್ಪಷ್ಟ ಅಡಿಪಾಯ ಸಿಕ್ಕಿದ್ದು 2015-16ರ ಬಳಿಕವೇ. ಪ್ರಧಾನಿ ಮೋದಿ ಸೂಚನೆಯಂತೆ ಅಂದಿನ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ದಿ. ಅನಂತ್‌ ಕುಮಾರ್‌ ಅವರ ಹಲವು ಉಪಕ್ರಮಗಳಿಂದಾಗಿ ದೇಶಾದ್ಯಂತ ಜನರಿಕ್‌ ಔಷಧಗಳು ಜನಪ್ರಿಯವಾದವು. ವಾರ್ಷಿಕವಾಗಿ 30ರಿಂದ 40 ಕೋಟಿ ರೂ.ನಷ್ಟೇ ಮಾರಾಟವಾಗುತ್ತಿದ್ದ ಜನರಿಕ್‌ ಔಷಧ ಈಗ ತಿಂಗಳಿಗೆ 50 ಕೋಟಿ ರೂ.ಗೂ ಅಧಿಕ ಮಾರಾಟ ದಾಖಲೆ ಮಾಡುತ್ತಿದೆ.ವರದಿ: ಆರ್‌.ಸಿ. ಭಟ್‌, ಮಂಗಳೂರುಬಜೆಟ್‌ 2020: ಪ್ರತಿ ಜಿಲ್ಲೆಯಲ್ಲೂ ಜನೌಷಧಿ ಕೇಂದ್ರ ಸ್ಥಾಪನೆ

ಜನರಿಕ್‌ ಔಷಧಗಳು ಇತರ ಔಷಧ ಮಾರುಕಟ್ಟೆ ದರಕ್ಕಿಂತ ಶೇ.80ರಿಂದ ಶೇ.90ರಷ್ಡು ಅಗ್ಗದಲ್ಲಿ ದೊರೆಯುತ್ತಿವೆ. ಆದರೆ ಜನರಿಕ್‌ ಔಷಧ ಬಗ್ಗೆ ಸಾಕಷ್ಟು ಪ್ರಚಾರವಾದರೆ ಮತ್ತು ವೈದ್ಯರು ಸರಕಾರದ ಜತೆ ಕೈ ಜೋಡಿಸಿ ಜನರಿಕ್‌ ಔಷಧವನ್ನು ಪ್ರೋತ್ಸಾಹಿಸಿದರೆ ಮಾತ್ರ ಹೆಚ್ಚಿನವರಿಗೆ ಇದರ ಪ್ರಯೋಜನ ಲಭಿಸಲು ಸಾಧ್ಯ ಎನ್ನುತ್ತಾರೆ ಮಂಗಳೂರಿನ ಜನರಿಕ್‌ ಔಷಧ ಮಳಿಗೆಯ ಸಂತೋಷ್‌.

ಈ ಹಿಂದೆ ಜಿಲ್ಲಾಕೇಂದ್ರಗಳಲ್ಲಿ ಒಂದೆರಡು ಇದ್ದ ಜನೌಷಧ ಕೇಂದ್ರಗಳು ಇಂದು ತಾಲೂಕು, ಹೋಬಳಿ ಮಟ್ಟಕ್ಕೂ ವಿಸ್ತಾರಗೊಂಡಿದೆ. ಪ್ರಸ್ತುತ ದೇಶದಾದ್ಯಂತ 6 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳು ಕಾರ‍್ಯನಿರ್ವಹಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ. ಇಂದು ಪ್ರತಿ ತಿಂಗಳೂ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಈ ಕೇಂದ್ರಗಳ ಮೂಲಕ ಕೈಗೆಟಕುವ ದರದಲ್ಲಿ ಔಷಧ ಖರೀದಿಸುತ್ತಿದ್ದಾರೆ.

ಈ ಮೊದಲು ಅನೇಕ ವೈದ್ಯರು ಜನರಿಕ್‌ ಔಷಧ ಬರೆದು ಕೊಡಲು ನಿರಾಕರಿಸುತ್ತಿದ್ದರು. ಈ ಬಗ್ಗೆ ಪ್ರಧಾನಮಂತ್ರಿ ಇತ್ತೀಚೆಗೆ ನಡೆಸಿದ ಸಂವಾದದಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಆದೇಶವೊಂದನ್ನು ಹೊರಡಿಸಿ ಇನ್ನು ಮುಂದೆ ವೈದ್ಯರು ರೋಗಿಗಳಿಗೆ ಜನರಿಕ್‌ ಔಷಧವನ್ನೇ ರೋಗಿಗಳಿಗೆ ಬರೆದುಕೊಡಬೇಕೆಂದು ತಿಳಿಸಿತ್ತು. ಇದಕ್ಕೆ ಹಲವು ವೈದ್ಯರು ಪೂರಕವಾಗಿ ಸ್ಪಂದಿಸಿದ್ದು ಕೂಡ ಜನೌಷಧ ಜನಪ್ರಿಯವಾಗಲು ಕಾರಣವಾಗಿದೆ.

ಜನರಿಕ್‌ ಔಷಧ ಬಗ್ಗೆ ಜನರಿಗೆ ಹೆಚ್ಚು ತಿಳಿವಳಿಕೆ ಮತ್ತು ನಂಬಿಕೆ ಬಂದಿದ್ದರಿಂದ ಜನ ಜನರಿಕ್‌ ಔಷಧವನ್ನೇ ಕೊಂಡುಕೊಳ್ಳುತ್ತಿದ್ದಾರೆ. ಸರಕಾರವೂ ಜನರಿಗೆ ತಮ್ಮ ಸಮೀಪದಲ್ಲೇ ಔಷಧ ದೊರೆಯುವ ವ್ಯವಸ್ಥೆ ಮಾಡುತ್ತಿದೆ. ಇದರಿಂದ ಜನೌಷಧ ಹೆಚ್ಚು ಜನಪ್ರಿಯವಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ಜನೌಷಧ ಮಾರಾಟ ನೂರು ಕೋಟಿ ರೂ. ದಾಟಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.



from India & World News in Kannada | VK Polls https://ift.tt/302E3Hj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...