ಬೆಂಗಳೂರು: ಕೊರೊನೋತ್ತರ ಕರ್ನಾಟಕದ ಪುನಶ್ಚೇತನದ ಉದ್ದೇಶದಿಂದ ವಿಜಯ ರೂಪಿಸಿರುವ 'ಕರುನಾಡ ಕಟ್ಟೋಣ ಬನ್ನಿ' ಅಭಿಯಾನಕ್ಕೆ ಇಂದು (ಜೂ.6 ಬುಧವಾರ) ಚಾಲನೆ ದೊರೆಯಲಿದೆ. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ರಾಜ್ಯ ಪ್ರವಾಸೋದ್ಯಮ ಉತ್ತೇಜನದ ಕುರಿತು ಸಂವಾದ, ಚಿಂತನ-ಮಂಥನವೂ ನಡೆಯಲಿದೆ. ಕರ್ನಾಟಕ ರಾಜ್ಯ ಪ್ರವಾಧಿಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಆಪರೇಟರ್ಸ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ಖಾಸಗಿ ಬಸ್ ಮಾಲೀಕರ ಸಂಘ ಅಧ್ಯಕ್ಷದ ನಟರಾಜ್ ಶರ್ಮಾ ಮತ್ತು ರಾಜ್ಯದ ನಾನಾ ಭಾಗಗಳ ಪ್ರವಾಸೋಧಿದ್ಯಮ ವಲಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಕೈಗಾರಿಕೆ, ಕೃಷಿ, ಆರೋಗ್ಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳ ಪುನಶ್ಚೇತನದ ಕುರಿತೂ ಸಂವಾದ ನಡೆಯಲಿದೆ. ಕೊರೊನಾವನ್ನು ನಾವು ಸಂಘಟಿತವಾಗಿ, ಸಮರ್ಥವಾಗಿ ಎದುರಿಸಿದ್ದನ್ನು ಎಲ್ಲರೂ ಮನಗಾಣಬೇಕಿರುವ ಸತ್ಯ. ಈ ವಿಚಾರದಲ್ಲಿ ದೇಶ ಮತ್ತು ರಾಜ್ಯದ ಯಶಸ್ವಿ ನಾಯಕತ್ವಕ್ಕೆ, ಕೇಂದ್ರ-ರಾಜ್ಯಗಳ ನಾಯಕತ್ವ ಬೆಂಬಲಿಸಿ ಕೊರೊನಾ ವ್ಯೂಹ ಭೇದಿಸಲು ಸಹಕರಿಸಿದ ಕೋಟಿ ಕೋಟಿ ದೇಶವಾಸಿಗಳಿಗೆ ಶಹಬ್ಬಾಸ್ ಎನ್ನಲೇಬೇಕಿದೆ. ಇದು ಕೊರೊನಾ ಕಾಲದ ಸ್ಥಿತಿಗತಿ. ಕೊರೊನಾ ನಂತರ ಜನಜೀವವನ್ನು ನಾವು ಹೇಗೆ ಮರಳಿ ಹಳಿಗೆ ತರುತ್ತೇವೆ ಎಂಬುದು ಅದಕ್ಕಿಂತಲೂ ಮುಖ್ಯ ಪ್ರಶ್ನೆ.
from India & World News in Kannada | VK Polls https://ift.tt/3eWmIUP