ಸ್ಕೌಟ್ಸ್‌, ಗೈಡ್ಸ್‌ನಿಂದ 1 ಕೋಟಿ ಮಾಸ್ಕ್‌: 7ಲಕ್ಷ ವಿದ್ಯಾರ್ಥಿಗಳ ಸೇವೆ

- ನಾಗರಾಜು ಎ. ದೊಡ್ಡಬಳ್ಳಾಪುರ ಕೊರೊನಾ ಸಂಕಷ್ಟದಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ 1 ಕೋಟಿ ತಯಾರಿಸುವ ಬೃಹತ್‌ ಗುರಿಯನ್ನು ಹೊಂದಿದ್ದಾರೆ. ಈಗಾಗಲೇ 20 ಲಕ್ಷ ಮಾಸ್ಕ್‌ಗಳನ್ನು ತಯಾರಿಸಲಾಗಿದ್ದು, 10 ಲಕ್ಷ ಮಾಸ್ಕ್‌ಗಳನ್ನು ರಾಜ್ಯದ ನಾನಾ ಕಡೆ ವಿತರಿಸಲಾಗಿದೆ. ದಾನಿಗಳಿಂದ ಬಟ್ಟೆ: ರಾಜ್ಯದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ತರಬೇತಿ ಕೇಂದ್ರಗಳನ್ನು ಕೊರೊನಾ ಕ್ವಾರಂಟೈನ್‌ ಕೇಂದ್ರಗಳಿಗೆಂದು ನೀಡಲಾಗಿದೆ. ವಿದ್ಯಾರ್ಥಿಗಳೆಲ್ಲಾ ಮನೆಗಳಲ್ಲಿದ್ದು, ಮನೆಗಳಲ್ಲಿ ದಾನಿಗಳಿಂದ ಪಡೆದ ಬಟ್ಟೆಯಲ್ಲಿ ಸ್ವತಃ ವಿದ್ಯಾರ್ಥಿಗಳು ಮಾಸ್ಕ್‌ ಮಾಡುತ್ತಿದ್ದು, 35 ಶೈಕ್ಷಣಿಕ ಜಿಲ್ಲೆಗಳ 200 ತಾಲೂಕು ಅಸೋಸಿಯೇಶನ್‌ಗಳ ಮೂಲಕ ಈ ಮಾಸ್ಕ್‌ಗಳನ್ನು ಸಂಗ್ರಹಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೆರವು: ರಾಜ್ಯದಲ್ಲಿ ಜೂ. 25ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈಗಾಗಲೇ 8ಸಾವಿರ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳನ್ನು ಪಟ್ಟಿ ಮಾಡಲಾಗಿದೆ. 300 ವಿದ್ಯಾರ್ಥಿಗಳಿರುವ ಪರೀಕ್ಷಾ ಕೇಂದ್ರಕ್ಕೆ 2,300ಕ್ಕೂ ಹೆಚ್ಚಿರುವೆಡೆ 3 ರೋವರ್ಸ್, ರೇಂಜರ್ಸ್, ಟೀಚರ್‌ರನ್ನು ಸಹಾಯಕರನ್ನಾಗಿ ನೇಮಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಾಯ, ಕೊರೊನಾ ಕ್ವಾರಂಟೈನ್‌ ಕೇಂದ್ರಗಳಿಗೆ ಸಹಾಯದೊಂದಿಗೆ ಮಾಸ್ಕ್‌ ವ್ಯವಸ್ಥೆ ಮಾಡಿಕೊಡುವಂತೆ ರಾಜ್ಯ ಸರಕಾರದಿಂದ 3 ಗುರಿ ನೀಡಲಾಗಿತ್ತು. ಸಿಎಂ ಪರಿಹಾನ ನಿಧಿಗೆ ಈಗಾಗಲೇ 60ಲಕ್ಷ ರೂ. ಹಣ ನೀಡಲಾಗಿದ್ದು, 1ಕೋಟಿ ಪರಿಹಾರನಿಧಿ ತಲುಪಿಸುವ ಗುರಿಯನ್ನು ಸ್ಕೌಟ್ಸ್‌ ಗೈಡ್ಸ್‌ ಹೊಂದಿದೆ ಎಂದು ರಾಜ್ಯ ಆಯುಕ್ತ ಪಿಜಿಆರ್‌ ಸಿಂಧ್ಯ ತಿಳಿಸಿದ್ದಾರೆ.


from India & World News in Kannada | VK Polls https://ift.tt/36YTe5A

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...