ಬಾಹುಬಲಿ ಅವತಾರದಲ್ಲಿ ಟ್ರಂಪ್‌: ಅಮೆರಿಕ ಅಧ್ಯಕ್ಷರನ್ನು ಭಾರತಕ್ಕೆ ಸ್ವಾಗತಿಸಿರುವುದು ಹೀಗೆ!

ವಾಷಿಂಗ್ಟನ್‌ ಡಿಸಿ: ಅಮೆರಿಕ ಅಧ್ಯಕ್ಷ ಫೆಬ್ರವರಿ 24 ಹಾಗೂ 25ರಂದು ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆ ಭಾರತಕ್ಕೆ ಟ್ರಂಪ್‌ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್‌ಗೆ ಸ್ವಾಗತ ಕೋರಲು ಬಾಲಿವುಡ್‌ ಚಿತ್ರದ ವಿಡಿಯೋ ಬಳಸಿಕೊಂಡಿದ್ದಾರೆ. ಬಾಹುಬಲಿ ಚಿತ್ರದ ದೃಶ್ಯಕ್ಕೆ ಟ್ರಂಪ್‌ ಹಾಗೂ ಮೆಲಾನಿಯಾ ಟ್ರಂಪ್‌ರ ಮುಖವನ್ನು ಎಡಿಟ್‌ ಮಾಡಿ ಹಾಕಲಾಗಿದ್ದು, ಈ ವಿಡಿಯೋವನ್ನು ಟ್ರೋಲ್‌ ಪೇಜ್‌ಗೆ ಹಾಕಿದ್ದಾರೆ. ಸೋಲ್‌ ಮೀಮ್ಸ್‌ ಎನ್ನುವ ಟ್ವಿಟ್ಟರ್ ಬಳಕೆದಾರರು ಬಾಲಿವುಡ್‌ ಚಿತ್ರದ ದೃಶ್ಯಾವಳಿಯನ್ನು ಹಾಕಿದ್ದು, ಅದಕ್ಕೆ ಟ್ರಂಪ್‌ ಹಾಗೂ ಮೆಲಾನಿಯಾ ಟ್ರಂಪ್‌ ಮುಖವನ್ನು ಎಡಿಟ್‌ ಮಾಡಿದ್ದಾರೆ. ಅಲ್ಲದೆ, ಟ್ರಂಪ್‌ ಭಾರತಕ್ಕೆ ಭೇಟಿ ನೀಡುತ್ತಿರುವುದರಿಂದ ಅದನ್ನು ಸಂಭ್ರಮಿಸಲು ಈ ವಿಡಿಯೋ ಹಾಕಿರುವುದಾಗಿಯೂ ಸೋಲ್‌ ಮೀಮ್ಸ್‌ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಸ್ವತ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರೀ ಟ್ವೀಟ್‌ ಮಾಡಿಕೊಂಡಿದ್ದು, ಭಾರತ ಭೇಟಿಗೆ ಎದುರು ನೋಡುತ್ತಿದ್ದೇನೆ. ಭಾರತದಲ್ಲಿರುವ ನನ್ನ ಆತ್ಮೀಯ ಸ್ನೇಹಿತರನ್ನು ಭೇಟಿ ಮಾಡಲು ಎದುರು ನೋಡುತ್ತಿರುವುದಾಗಿಯೂ ಟ್ರಂಪ್‌ ಅಮೆರಿಕ ಕಾಲಮಾನದಲ್ಲಿ ಶನಿವಾರ ಬಾಲಿವುಡ್‌ ಚಿತ್ರದ ಈ ವಿಡಿಯೋವನ್ನು ಹಾಕಿಕೊಂಡು ಟ್ವೀಟ್‌ ಮಾಡಿಕೊಂಡಿದ್ದಾರೆ. ಇನ್ನು, ಟ್ರಂಪ್‌ ಟ್ವೀಟ್‌ ಅನ್ನು ಈವರೆಗೆ 1.6 ಮಿಲಿಯನ್‌ನಷ್ಟು ವೀಕ್ಷಣೆಯಾಗಿದ್ದು, 21 ಸಾವಿರಕ್ಕೂ ಅಧಿಕ ನೆಟ್ಟಿಗರು ರೀಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಸುಮಾರು 77 ಸಾವಿರ ಟ್ವಿಟ್ಟರ್ ಬಳಕೆದಾರರು ಲೈಕ್‌ ಮಾಡಿದ್ದಾರೆ.


from India & World News in Kannada | VK Polls https://ift.tt/2SPZqHD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...