ರಣಜಿ ಟ್ರೋಫಿ: ಸೆಮಿಫೈನಲ್‌ ಸನಿಹ ಕರ್ನಾಟಕ ತಂಡ!

ಜಮ್ಮು: ಬಲಗೈ ವೇಗಿ (42ಕ್ಕೆ 4) ಅವರ ಮಾರಕ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಇನಿಂಗ್ಸ್ ಮುನ್ನಡೆ ಪಡೆದಿದೆ. ಇಲ್ಲಿನ ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 4ನೇ ದಿನವಾದ ಭಾನುವಾರ 2 ವಿಕೆಟ್‌ಗೆ 88 ರನ್‌ಗಳಿಂದ ದಿನದಾಟ ಮುಂದುವರಿಸಿದ ಆತಿಥೇಯ ತಂಡ ಒಂದು ಹಂತದಲ್ಲಿ 8 ಬಾರಿಯ ಚಾಂಪಿಯನ್ ಕರ್ನಾಟಕ ವಿರುದ್ಧ ಮೇಲುಗೈ ಸಾಧಿಸಿತ್ತು. ಆದರೆ ಪ್ರಸಿದ್ಧ್ ಕೃಷ್ಣ, ಜೆ ಸುಚಿತ್ ಮತ್ತು ರೋನಿತ್ ಮೋರೆ ಅವರ ಸಾಂಘಿಕ ಬೌಲಿಂಗ್‌ ದಾಳಿಗೆ ನಲುಗಿ 62.4 ಓವರ್‌ಗಳಲ್ಲಿ 192 ರನ್‌ಗಳಿಗೆ ಸರ್ವಪತನಗೊಂಡಿತು. ನಂತರ 14 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ, ದಿನದಾಟದ ಮುಕ್ತಾಯಕ್ಕೆ 67 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿದ್ದು, ಒಟ್ಟಾರೆ 259 ರನ್‌ಗಳ ಮುನ್ನಡೆಯಲ್ಲಿದೆ. ಸೋಮವಾರ ಪಂದ್ಯದ 5ನೇ ಹಾಗೂ ಅಂತಿಮ ದಿನವಾಗಿರುವ ಕಾರಣ ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಉತ್ತಮ ಮೊತ್ತಕ್ಕೆ ಡಿಕ್ಲೇರ್‌ ಮಾಡಿ ಬಳಿಕ ಆತಿಥೇಯರ ಮೇಲೆ ಒತ್ತಡ ಹೇರಿದರೆ ಸೋಲು-ಗೆಲುವಿನ ಫಲಿತಾಂಶ ಹೊರಬೀಳುವ ಸಾಧ್ಯತೆಯೂ ಇದೆ. ಇನ್ನು ಡಿಕ್ಲೇರ್‌ ಮಾಡದೆ ಕರುಣ್ ಬಳಗ ಇನಿಂಗ್ಸ್ ಮುಂದುವರಿಸಿದರೆ, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇರೆಗೆ ಸೆಮಿಫೈನಲ್ಸ್ ಪ್ರವೇಶಿಸಲಿದೆ. ಸದ್ಯ ಕ್ರೀಸ್‌ನಲ್ಲಿರುವ ಕೆವಿ ಸಿದ್ಧಾರ್ಥ್ (ಅಜೇಯ 75 ರನ್, 126 ಎಸೆತ, 6 ಫೋರ್‌, 2 ಸಿಕ್ಸರ್) ಮತ್ತು ಶರತ್ ಶ್ರೀನಿವಾಸ್ (ಅಜೇಯ 9) ಐದನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮುನ್ನ ಬ್ಯಾಟಿಂಗ್ ಇಳಿದ ರವಿಕುಮಾರ್ ಸಮರ್ಥ್ (74), ದೇವದತ್ ಪಡಿಕ್ಕಲ್(34) ಮತ್ತು ಮನೀಶ್ ಪಾಂಡೆ (35) ಉತ್ತಮ ಕೊಡುಗೆ ಸಲ್ಲಿಸಿದ್ದರು. ಪ್ರಸಿದ್ಧ್ ಮಾರಕ ದಾಳಿ2ನೇ ದಿನದಂತ್ಯಕ್ಕೆ 88 ರನ್ ಗಳಿಸಿದ್ದ ಆತಿಥೇಯರು ನಾಲ್ಕನೇ ದಿನ ಪ್ರವಾಸಿ ಬೌಲರ್‌ಗಳನ್ನು ಕಾಡಿತು. ಒಂದು ಹಂತದಲ್ಲಿ 6ಕ್ಕೆ 164 ರನ್ ಗಳಿಸಿ ಇನಿಂಗ್ಸ್ ಮುನ್ನಡೆಯ ಹೊಸ್ತಿಲಲ್ಲಿದ್ದ , ಪ್ರವಾಸಿ ಬೌಲರ್‌ಗಳ ಕರಾರುವಾಕ್ ಬೌಲಿಂಗ್ ದಾಳಿಗೆ ತತ್ತರಿಸಿತು. ಅದರಲ್ಲೂ 63ನೇ ಓವರ್‌ನಲ್ಲಿ ಪ್ರಸಿದ್ಧ್‌ಗೆ ಎರಡು ವಿಕೆಟ್ ಒಪ್ಪಿಸಿ ಇನ್ನಿಂಗ್ಸ್ ಹಿನ್ನಡೆಗೆ ಒಳಗಾಯಿತು. ಸುಚಿತ್ ಕೂಡ 2 ವಿಕೆಟ್ ಕಬಳಿಸಿ ತಮ್ಮ ಕಾಣಿಕೆ ನೀಡಿದರು. ಸಂಕ್ಷಿಪ್ತ ಸ್ಕೋರ್ ಕರ್ನಾಟಕ: 206 ಮತ್ತು ದ್ವಿತೀಯ ಇನಿಂಗ್ಸ್ 67 ಓವರ್‌ಗಳಲ್ಲಿ 245/4 (ಆರ್. ಸಮರ್ಥ್ 74, ಕೆವಿ ಸಿದ್ಧಾರ್ಥ್ 75*, ದೇವದತ್ ಪಡಿಕ್ಕಲ್ 34, ಮನೀಶ್ ಪಾಂಡೆ 35; ಪರ್ವೇಝ್ ರೂಸಲ್ 53ಕ್ಕೆ 2). ಜಮ್ಮು ಮತ್ತು ಕಾಶ್ಮೀರ: ಮೊದಲ ಇನಿಂಗ್ಸ್ 67.4 ಓವರ್‌ಗಳಲ್ಲಿ 192/10 (ಶುಭಂ ಖಜುರಿಯಾ 62, ಅಬ್ದುಲ್ ಸಮದ್ 43, ಶುಭಂ ಪಂಡಿರ್ 25; ಪ್ರಸಿದ್ಧ್ ಕೃಷ್ಣ 42ಕ್ಕೆ 4, ರೋನಿತ್ ಮೋರೆ 40ಕ್ಕೆ 2, ಜೆ. ಸುಚಿತ್ 46ಕ್ಕೆ 2).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39YFfNs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...