ಸೋನಭದ್ರದಲ್ಲಿ ಪತ್ತೆಯಾಗಿರುವುದು 3,350 ಟನ್‌ ಚಿನ್ನವಲ್ಲ, 52,806 ಟನ್‌ ಚಿನ್ನದ ಅದಿರು!

ಬೆಂಗಳೂರು: ಉತ್ತರ ಪ್ರದೇಶದ ಜಿಲ್ಲೆಯ ಸೋನಭದ್ರ ಚಿನ್ನದ ಗಣಿಯಲ್ಲಿ ಬರೋಬ್ಬರಿ 3,350 ಟನ್‌ಗಳಷ್ಟು ಚಿನ್ನ ಇದೆ ಎಂಬ ಸುದ್ದಿಯೇ ಸೋನೆ ಕಿ ಚಿಡಿಯಾ ಎಂಬ ಬಣ್ಣನೆಗೆ ಕಾರಣವಾಗಿದ್ದು. ಸಂಗ್ರಹದಲ್ಲಿದೆ ಎನ್ನಲಾದ ಚಿನ್ನದ ಮೊತ್ತ 16 ಲಕ್ಷ ಕೋಟಿ ರೂ.ಗಳಷ್ಟಾಗುತ್ತದೆ. ಇದು ಪ್ರಸ್ತುತ ನಮ್ಮ ರಾಷ್ಟ್ರದ ಖಜಾನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಚಿನ್ನಕ್ಕಿಂತ 5 ಪಟ್ಟು ಹೆಚ್ಚಿನದ್ದಾಗಿದೆ. ಭಾರತದ ಖಜಾನೆಯಲ್ಲಿ ಸಂಗ್ರಹಿಸಿಡಲಾಗಿರುವ ಚಿನ್ನದ ತೂಕ 626 ಟನ್‌! ಜಗತ್ತಿನಲ್ಲಿ ಅತಿಹೆಚ್ಚು ಚಿನ್ನವನ್ನು ಸಂಗ್ರಹಿಸಿಟ್ಟುಕೊಂಡಿರುವ ರಾಷ್ಟ್ರಗಳ ಪೈಕಿ ಭಾರತ ಟಾಪ್‌ 2 ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಅಮೆರಿಕ ಸಂಗ್ರಹಿಸಿಟ್ಟುಕೊಂಡಿರುವ ಬಂಗಾರದ ತೂಕ 8,133.5 ಟನ್‌ಗಳು. ಪೋಸ್ಟ್‌ಕಾರ್ಡ್‌ ಎಂಬ ಪೋರ್ಟಲ್‌ ಒಂದರ ಮುಖ್ಯಸ್ಥ ಮಹೇಶ್‌ ವಿಕ್ರಮ್‌ ಹೆಗಡೆ ಎಂಬುವವರು, ''3,500 ಟನ್‌ಗಳಷ್ಟು ಚಿನ್ನ ಸೋನಭದ್ರದಲ್ಲಿ ಪತ್ತೆಯಾಗಿದೆ. ಚಿನ್ನದ ಗಣಿಗಾರಿಕೆ ಶೀಘ್ರದಲ್ಲೇ ಆರಂಭವಾಗಲಿದೆ. 2005ರಿಂದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ಶ್ರಮಿಸುತ್ತಿತ್ತು. ಇದರ ಭಾಗವಾಗಿ ಇದೀಗ ದೊಡ್ಡ ಪ್ರಮಾಣದಲ್ಲಿ ಚಿನ್ನ ಲಭ್ಯವಾಗಿದ್ದು, ಭೂ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಭಾರತದಲ್ಲಿ ಸಂಗ್ರಹಿಸಿಡಲಾದ ಚಿನ್ನ 618.2 ಟನ್‌. ಮತ್ತೊಮ್ಮೆ ಭಾರತ ಚಿನ್ನದ ಹಕ್ಕಿ ಎಂದು ಕರೆಯಿಸಿಕೊಳ್ಳುತ್ತಿದೆ. ಭಾರತವೀಗ ಸೋನೆ ಕಿ ಚಿಡಿಯಾ'' ಎಂದು ಟ್ವೀಟ್‌ ಮಾಡಿದ್ದರು. 4.6 ಸಾವಿರ ಮಂದಿ ಇದನ್ನು ರೀಟ್ವೀಟ್‌ ಮಾಡಿಕೊಂಡಿದ್ದಾರೆ. 16.8 ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ. ಡಿಡಿ ಇಂಡಿಯಾ ಕೂಡ ಉತ್ತರ ಪ್ರದೇಶದ ಸೋನಭದ್ರದಲ್ಲಿ 3,000 ಟನ್‌ಗಳಿಗೂ ಹೆಚ್ಚು ಚಿನ್ನ ಸಿಕ್ಕಿದೆ ಎಂದು ಟ್ವೀಟ್‌ ಮಾಡಿತ್ತು. ಫೈನಾನ್ಶಿಯಲ್‌ ಎಕ್ಸ್‌ಪ್ರೆಸ್‌ ಒಂದು ಹೆಜ್ಜೆ ಮುಂದಿಟ್ಟು ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಕ್ರೆಡಿಟ್‌ ಕೊಟ್ಟಿತ್ತು. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೆಪಿ ಮೌರ್ಯ, ''ಭಾರತದ ಆರ್ಥಿಕತೆಯನ್ನು ಶಕ್ತಿಶಾಲಿಯಾಗಿಸಲು ಇದು ಸಹಕಾರಿ'' ಎಂದು ಸಂಭ್ರಮಿಸಿದ್ದರು. ಪತ್ತೆಯಾಗಿದ್ದು 3000 ಟನ್‌ ಅಲ್ಲ, 160 ಕೆ.ಜಿ. ಚಿನ್ನ! ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಗಣಿಗಳಲ್ಲಿ ಸುಮಾರು 3,000 ಟನ್‌ ಚಿನ್ನದ ಸಂಗ್ರಹ ಇದೆ ಎಂಬ ಸುದ್ದಿಯನ್ನು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ನಿರಾಕರಿಸಿದೆ. ಅಲ್ಲಿರುವುದು 160 ಕೆ.ಜಿ. ಚಿನ್ನ ಎಂಬ ಸ್ಪಷ್ಟನೆಯನ್ನು ನೀಡಿದೆ. ಸ್ಪಷ್ಟನೆ ನೀಡಿದ ಜಿಎಸ್‌ಐ ನಿರ್ದೇಶಕ ಎಂ. ಶ್ರೀಧರ್‌, "ಈ ರೀತಿಯಲ್ಲಿ ಯಾವುದೇ ಮಾಹಿತಿಯನ್ನು ಭೂ ಸರ್ವೇಕ್ಷಣಾ ಇಲಾಖೆ ನೀಡಿಲ್ಲ. ಬೃಹತ್‌ ಚಿನ್ನದ ನಿಕ್ಷೇಪ ಇರುವುದು ಇಲಾಖೆಯ ಗಮನಕ್ಕೆ ಬಂದಿಲ್ಲ'' ಎಂದಿದ್ದಾರೆ. ''ಭೂ ಸರ್ವೇಕ್ಷಣಾ ಇಲಾಖೆಯು ಉತ್ತರ ವಲಯ ಸೋನಭದ್ರದಲ್ಲಿ 1998-99 ಮತ್ತು 1999-2000ರಲ್ಲಿ ಸರ್ವೇಕ್ಷಣೆ ನಡೆಸಿತ್ತು. ಈ ಪ್ರದೇಶದಲ್ಲಿ 52,806 ಟನ್‌ಗಳಷ್ಟು ಚಿನ್ನದ ಅದಿರು ಇರುವ ಅಂದಾಜಿದೆ. ಅದನ್ನು ಸಂಸ್ಕರಿಸಿದರೆ ಪ್ರತಿ ಟನ್‌ಗೆ 3.03 ಗ್ರಾಮ್‌ ಚಿನ್ನ ಲಭಿಸಲಿದೆ. ಹೀಗಾಗಿ ಅಂದಾಜು 160 ಕೆ.ಜಿ. ಚಿನ್ನ ಲಭ್ಯವಾಗಬಹುದು'' ಎಂದು ಎಂ. ಶ್ರೀಧರ್‌ ಮಾಹಿತಿ ನೀಡಿದ್ದಾರೆ.


from India & World News in Kannada | VK Polls https://ift.tt/37RKsW5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...