ಕಲ್ಕತ್ತಾ: ದೀದಿ ನಾಡು ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೇಸರಿ ಕಹಳೆಯೂದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿದ್ಧವಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್‌ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಪ್ರಚಾರಕ್ಕೆ ಬೃಹತ್ ಸಮಾವೇಶದ ಮೂಲಕ ಇಂದು ಕಲ್ಕತ್ತಾದಲ್ಲಿ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಕಲ್ಕತ್ತಾದ ಶಾಹೀದ್ ಮಿನಾರ್ ಮೈದಾನದಲ್ಲಿ ಮಧ್ಯಾಹ್ನ 2.30ಕ್ಕೆ ಅಮಿತ್ ಶಾ ರ‍್ಯಾಲಿ ನಡೆಯಲಿದೆ. ಈ ವೇಳೆ ಚಾಣಕ್ಯ ತೃಣಮೂಲ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಚಾರ ಗೀತೆಯನ್ನು ಬಿಡುಗಡೆಗೊಳಿಸಲಿದ್ದಾರೆ. ನೋ ಮೋರ್ ಇನ್‌ಜಸ್ಟಿಸ್ ಎಂಬ ಶೀರ್ಷಿಕೆ ಹೊಂದಿರುವ ಗೀತೆಯಲ್ಲಿ ದೀದಿ ವಿರುದ್ಧ ಅನೇಕ ಸಂಗತಿಗಳನ್ನು ಹೇಳಲಾಗಿದೆ ಎನ್ನಲಾಗಿದೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಸೋಲುಣಿಸಲು ಕೇಸರಿ ಪಡೆ ತಯಾರಾಗಿದೆ. ಇದರ ಜೊತೆ 2021 ಅಂದರೆ ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯೂ ನಡೆಯುವುದರಿಂದ ಈಗಿನಿಂದಲೇ ಚುನಾವಣಾ ಕಣವನ್ನು ಕಮಲ ಪಾಳೆಯ ಹುರಿಗೊಳಿಸುತ್ತಿದೆ. ಇನ್ನು, ದೆಹಲಿಯಲ್ಲಿ ನಡೆದ ಸಿಎಎ ಗಲಭೆಯ ಕುರಿತು ಅಮಿತ್ ಶಾ ಏನು ಮಾತನಾಡುತ್ತಾರೆ ಎಂಬುದು ಪ್ರಮುಖವಾಗಿದೆ. ಇಲ್ಲಿಯವರೆಗೂ ಸಿಎಎ ಗಲಭೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಗಲಿ ಗೃಹಸಚಿವ ಅಮಿತ್ ಶಾ ಆಗಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿಲ್ಲ. ದೆಹಲಿ ಹಿಂಸಾಚಾರದ ನಂತರ ಮೋದಿ ಮತ್ತು ಅಮಿತ್ ಶಾ ಕ್ರಮವಾಗಿ ಪ್ರಯಾಗ್‌ರಾಜ್ ಮತ್ತು ಭುವನೇಶ್ವರದಲ್ಲಿ ಬೃಹತ್ ರ‍್ಯಾಲಿಯಲ್ಲಿ ಮಾತನಾಡಿದ್ದರು. ಪ್ರತಿಭಟನೆಯ ಬಿಸಿಅಮಿತ್ ಶಾ ವಿರುದ್ಧ ಕಲ್ಕತ್ತಾದಲ್ಲಿ ಕಾಂಗ್ರೆಸ್ ಹಾಗೂ ಎಡಪಂಥೀಯ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣದ ಬಳಿ ಹಾಗೂ ದಕ್ಷಿಣ ಕಲ್ಕತ್ತಾದ ಮಾಲ್ ಹೊರಗಡೆ ಎಸ್‌ಎಫ್‌ಐ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು, ಕಾಂಗ್ರೆಸ್‌ನ ಚಟ್ರಾ ಪ್ರಸಾದ್ ಕಾಲೇಜ್ ಸ್ಟ್ರೀಟ್ ಬಳಿಯಿರುವ ಸ್ವಾಮಿ ವಿವೇಕಾನಂದ ಪ್ರತಿಮೆ ಬಳಿ ಧರಣಿ ಕುಳಿತಿದ್ದಾರೆ. ರ‍್ಯಾಲಿಗೆ ಅನುಮತಿ ನೀಡಿದ್ದಕ್ಕೆ ಖಂಡನೆ ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಸಮಾವೇಶಕ್ಕೆ ಅನುಮತಿ ನೀಡಿದ್ದಕ್ಕೆ ಸಿಪಿಎಂ ಸೇರಿ ಅನೇಕ ವಿಪಕ್ಷಗಳು ಸರಕಾರದ ನಡೆಯನ್ನು ಟೀಕಿಸಿವೆ. ರಾಜ್ಯದಲ್ಲಿ ಸದ್ಯ ವಿದ್ಯಾರ್ಥಿಗಳಿ ಬೋರ್ಡ್ ಪರೀಕ್ಷೆಗಳು ನಡೆಯುತ್ತಿರುವಾಗ ಇಂತಹ ರಾಜಕೀಯ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಟ್ಟಿರುವುದು ಸರಿಯಲ್ಲ ಎಂದಿದ್ದಾರೆ. ದೀದಿ ವಿರುದ್ಧ ವಿಪಕ್ಷಗಳ ಕೆಂಡ ಇನ್ನು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಿಪಕ್ಷಗಳು ಮತ್ತೊಂದು ವಿಚಾರವಾಗಿ ಕೆಂಡ ಕಾರಿದ್ದಾವೆ. ಭುವನೇಶ್ವರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಪೂರ್ವ ವಲಯದ ಸಮಿತಿ ಸಭೆಯಲ್ಲಿ ದೆಹಲಿ ಹಿಂಸಾಚಾರವನ್ನು ಮಮತಾ ಬ್ಯಾನರ್ಜಿ ಖಂಡಿಸಿಲ್ಲ ಎಂದು ವಿಪಕ್ಷಗಳು ಗರಂ ಆಗಿವೆ.
from India & World News in Kannada | VK Polls https://ift.tt/2PzeUOw