ರಿಲಾಕ್ಸ್ ಮಾಡಲು ಸಮಯವೇ ಇಲ್ಲ, ಡೇ-ನೈಟ್ ಟೆಸ್ಟ್‌ಗೆ ರೋಹಿತ್ ಶರ್ಮಾ ಸಿದ್ಧ

ರಾಜ್‌ಕೋಟ್: ಭಾರತದ ಚೊಚ್ಚಲ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಸಜ್ಜಾಗಿದೆ. ಬಾಂಗ್ಲಾದೇಶ ವಿರುದ್ಧ ಇತಿಹಾಸ ಪ್ರಸಿದ್ಧ ಈಡನ್ ಗಾರ್ಡನ್ ಮೈದಾನದಲ್ಲಿ ಚೊಚ್ಚಲ ಹೊನಲು-ಬೆಳಕಿನ ಪಂದ್ಯ ನಿಯೋಜನೆಯಾಗಿದೆ. ಏತನ್ಮಧ್ಯೆ ಟೆಸ್ಟ್ ಆರಂಭಿಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿರುವ , ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ 32ರ ಹರೆಯದ ರೋಹಿತ್, ಎಲ್ಲಿಯ ವರೆಗೂ ಆಡುತ್ತಿರುತ್ತೇನೋ ಅಲ್ಲಿಯ ವರೆಗೆ ರಿಲ್ಯಾಕ್ಸ್ ಮಾಡಲು ಸಮಯವೇ ಇಲ್ಲ ಎಂದಿದ್ದಾರೆ. ನಾನು ಹಿಂತಿರುಗಿ ನೋಡಲು ಬಯಸುವುದಿಲ್ಲ. ನನಗೆ ಲಭಿಸಿದ ಪ್ರತಿಯೊಂದು ಅವಕಾಶದಲ್ಲಿ ಉತ್ತಮವಾಗಿ ಆಡಲು ಬಯಸುತ್ತೇನೆ. ಅದರ ಮೇಲೆ ಗಮನವೀಗ ಸಂಪೂರ್ಣವಾಗಿ ಕೇಂದ್ರಿತವಾಗಿದೆ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸರಣಿಯಲ್ಲಿ ರೋಹಿತ್ ಶರ್ಮಾ ದ್ವಿಶತಕ ಸೇರಿದಂತೆ ಮೂರು ಶತಕಗಳನ್ನು ಬಾರಿಸಿದ್ದರು. ಈ ಮೂಲಕ ಟೆಸ್ಟ್ ಆರಂಭಿಕನಾದ ಮೊದಲ ಟೆಸ್ಟ್‌ನಲ್ಲೇ ಅವಳಿ ಶತಕ ಬಾರಿಸಿದ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾದರು. ವೈಟ್ ಬಾಲ್‌ಗೆ ಹೋಲಿಸಿದರೆ ರೆಡ್ ಬಾಲ್ ಕ್ರಿಕೆಟ್ ಹೆಚ್ಚು ಸವಾಲಿನಿಂದ ಕೂಡಿರುತ್ತದೆ ಎಂಬುದನ್ನು ರೋಹಿತ್ ಒಪ್ಪಿಕೊಳ್ಳುತ್ತಾರೆ. ಆದರೆ ಹೆಚ್ಚು ಗಮನ ಕೇಂದ್ರಿಕರಿಸುವ ಮೂಲಕ ತಮ್ಮ ಶಾಟ್ ಆಯ್ಕೆಯಲ್ಲಿ ಶಿಸ್ತಿನ ಆಟವನ್ನು ಪಾಲಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಏಕದಿನದಲ್ಲಿ ಪವರ್ ಪ್ಲೇ ಬಳಿಕ ಫೀಲ್ಡಿಂಗ್ ವಿಸ್ತರಣೆಯಾಗುತ್ತದೆ. ಈ ವೇಳೆಯಲ್ಲಿ ಸಿಂಗಲ್ಸ್ ಹಾಗೂ ಬೌಂಡರಿಗಳನ್ನು ಕದಿಯಬಹುದಾಗಿದೆ. ಆದರೆ ಟೆಸ್ಟ್‌ನಲ್ಲಿ ಅನೇಕ ಕ್ಯಾಚಿಂಗ್ ಸ್ಥಾನಗಳಿರುವುದರಿಂದ ಹೆಚ್ಚು ಶಿಸ್ತುಬದ್ದವಾಗಿರಬೇಕು ಎಂದರು. ಶತಕ ಬಾರಿಸಿದಾಗೆಲ್ಲ ಅದನ್ನು ದೊಡ್ಡ ಶತಕವನ್ನಾಗಿ ಪರಿವರ್ತಿಸಲು ಬಯಸುದಾಗಿ ರೋಹಿತ್ ವಿವರಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32oTWVP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...