ಹೊಸದಿಲ್ಲಿ: ನವೆಂಬರ್ 17ಕ್ಕೆ ಮುನ್ನ ಯಾವುದೇ ದಿನ ಅಯೋಧ್ಯೆಯ ಭೂ ವಿವಾದದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸುವ ಸಾಧ್ಯತೆ ಇರುವುದರಿಂದ ದೇಶಾದ್ಯಂತ, ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ, ಅಯೋಧ್ಯೆ ಇರುವ ಫೈಜಾಬಾದ್ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಾಕಾರಿ ಸಂದೇಶಗಳನ್ನು ಹರಡುವುದರ ವಿರುದ್ಧ ತೀವ್ರ ನಿಗಾ ಇರಿಸಲಾಗಿದೆ. ಫೈಜಾಬಾದ್ ಜಿಲ್ಲೆಯೊಂದರಲ್ಲೇ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು 16000 ಸ್ವಯಂಸೇವಕರನ್ನು ನೇಮಿಸಲಾಗಿದೆ. ಫೈಜಾಬಾದ್ ಮಾತ್ರವಲ್ಲ, ದೇಶದ ಇತರ ಭಾಗಗಳಲ್ಲೂಸಾಮಾಜಿಕ ಜಾಲ ತಾಣಗಳ ಮೇಲೆ ಕಣ್ಣಿಡುವ ಸಾಧ್ಯತೆಗಳು ದಟ್ಟವಾಗಿವೆ. ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಸೆರೆ: ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಹಿಂಸಾತ್ಮಕ ಘಟನೆಗೆ ಪ್ರಚೋದನೆ ನೀಡುವವರ ವಿರುದಟಛಿ ರಾಷ್ಟ್ರೀಯ ಭದ್ರತಾ ಕಾಯಿದೆಧಿಯಡಿ ಪ್ರಕರಣ ದಾಖಲಿಸಿ ಬಂಧಿಸುವ ಬಗ್ಗೆಯೂ ಚಿಂತನೆ ನಡೆಧಿದಿದೆ ಎಂದು ಡಿಜಿಪಿ ಒ.ಪಿ. ಸಿಂಗ್ ಹೇಳಿದ್ದಾರೆ. 16000 ಪೊಲೀಸರು: ಫೈಜಾಬಾದ್ ಜಿಲ್ಲೆಯ 1600 ಪ್ರದೇಶಗಳಲ್ಲಿ16000 ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ದೊಂಬಿ, ಉಗ್ರ ದಾಳಿ, ಕೋಮುಗಲಭೆ ನಿಯಂತ್ರಣಕ್ಕೆ ಆಡಳಿತ ಸಜ್ಜಾಗಿದೆ. 3 ಹಂತದ ರಕ್ಷಣೆ: ವಿವಾದಿತ ಜಾಗದ ಸುತ್ತ ಕೆಂಪು, ಹಳದಿ, ಹಸಿರು ಮತ್ತು ನೀಲಿ ಎಂಬ ನಾಲ್ಕು ಹಂತದ ರಕ್ಷಣಾ ಕೋಟೆ ನಿರ್ಮಿಸಲಾಗಿದೆ. ಕೆಂಪು ಮತ್ತು ಹಳದಿ ವಲಯವನ್ನು ಸಿಆರ್‌ಪಿಎಫ್ ನೋಡಿಕೊಳ್ಳಲಿದ್ದು, ಜಾಗದಿಂದ 5 ಕಿ.ಮೀ. ಪರಿಧಿಯಲ್ಲಿವ್ಯಾಪಿಸಿದೆ. ಪಟಾಕಿ, ಸ್ಫೋಟಕ, ಲಾಠಿ, ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವಂತಿಲ್ಲ. ಹುಷಾರಾಗಿರಿ:
- * ವಾಟ್ಸಪ್, ಫೇಸ್ಬುಕ್, ಟ್ವಿಟರ್ ಮೇಲೆ ನಿರಂತರ ಕಣ್ಣು ಇಡಲಾಗಿದೆ.
- * ಎಲ್ಲ ಕರೆಗಳೂ ರೆಕಾರ್ಡ್
- * ಪ್ರಚೋದನಕಾರಿ ಪೋಸ್ಟ್ ಹಾಕಿದರೆ, ಹಂಚಿದರೆ ಕ್ರಮ
- *ತಪ್ಪಿತಸ್ಥರನ್ನು ಯಾವುದೇ ವಾರಂಟ್ ಇಲ್ಲದೆಯೇ ಬಂಧಿಸಬಹುದು
- * ಸೈಬರ್ ಕ್ರೈಮ್ ಮತ್ತು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಶಿಕ್ಷೆ.
from India & World News in Kannada | VK Polls https://ift.tt/2pSePf5