ಆರ್‌ಸಿಇಪಿಗೆ 'ನೋ' ಎಂದ ಭಾರತ: ವಿಕ ಅಭಿಯಾನಕ್ಕೆ ಮಹಾಜಯ

ಸಮಗ್ರ ಮಾಧ್ಯಮ ಕ್ಷೇತ್ರವನ್ನೇ ತೆಗೆದುಕೊಂಡರೂ ವಿರುದ್ಧ ಮೊದಲ ಧ್ವನಿ ಎತ್ತಿದ್ದು ವಿಜಯ ಕರ್ನಾಟಕ. ಕೃಷಿಕರು, ಹೈನುಗಾರರು, ಸಣ್ಣ ಉದ್ಯಮಗಳ ಮೇಲೆ ಆರ್‌ಸಿಇಪಿ ಉಂಟುಮಾಡಲಿರುವ ಮಾರಕ ಪರಿಣಾಮಗಳನ್ನು ಗ್ರಹಿಸಿದ ವಿಕ ಸುಮಾರು 2 ವಾರಗಳ ಕಾಲ ಕಾಳಜಿಪೂರ್ವಕ ಸರಣಿ ವರದಿಗಳನ್ನು ಪ್ರಕಟಿಸಿದೆ. ವಿಕ ವರದಿ ಪ್ರಕಟಗೊಂಡ ಬಳಿಕವೇ ರಾಜ್ಯ ಮತ್ತು ದೇಶದ ಇತರ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳು ಜಾಗೃತವಾಗಿ ಜನಪರ ನಿಲುವು ತಳೆದವು. ರಾಜ್ಯದ ಹೈನುಗಾರರು, ಕೃಷಿಕರು ಬೀದಿಗಿಳಿದು ಪ್ರತಿಭಟನೆ ನಡೆಸುವಲ್ಲಿಯೂ ವಿಕ ಪ್ರೇರಣೆಯಾಯಿತು. ಒಪ್ಪಂದದ ಎಲ್ಲ ಮಗ್ಗುಲುಗಳನ್ನು ಆಳವಾಗಿ ವಿಮರ್ಶಿಸಿದ ವಿಕ ಪರ ಮತ್ತು ವಿರೋಧದ ಧ್ವನಿಗಳೆರಡಕ್ಕೂ ಅವಕಾಶ ನೀಡಿದೆ. ಆರ್‌ಸಿಇಪಿ ಒಪ್ಪಂದಕ್ಕೆ ನೋ ಎಂದ ನಂತರ ಭಾರತವನ್ನು ಬಿಟ್ಟು 15 ರಾಷ್ಟ್ರಗಳು ಸೋಮವಾರ ಸಹಿ ಹಾಕಿವೆ. ಒಪ್ಪಂದ ಜಾರಿಯಾಗುವ 2022ರ ಮೊದಲು ಭಾರತಕ್ಕೆ ಸೇರಿಕೊಳ್ಳಲು ಅವಕಾಶವಿದೆ ಎಂದು ತಿಳಿಸಲಾಗಿದೆ. ಒಟ್ಟಾರೆ ಆರ್‌ಸಿಇಪಿ ಒಪ್ಪಂದದ ಬಗ್ಗೆ ವಿಸ್ತೃತ ಚರ್ಚೆಗೆ ಇನ್ನು 1 ವರ್ಷ ಕಾಲಾವಕಾಶವಿದೆ. ಆರ್‌ಸಿಇಪಿ ಪರಿಣಾಮಗಳ ಬಗ್ಗೆ ಆಳವಾದ ಅಧ್ಯಯನ, ಚರ್ಚೆ, ಜನಾಭಿಪ್ರಾಯಗಳನ್ನು ಕಲೆ ಹಾಕಿ ಒಂದು ಉತ್ತಮ ನಿರ್ಧಾರಕ್ಕೆ ಬರಬೇಕಿದೆ. ವಿಕ ಅಭಿಯಾನಕ್ಕೆ ಶ್ಲಾಘನೆಗಳ ಮಹಾಪೂರ ಆರ್‌ಸಿಇಪಿ ಆತಂಕ ಸಧ್ಯಕ್ಕೆ ನಿವಾರಣೆಯಾಗಿದ್ದರೂ ಸಹಿ ಹಾಕಿದರೆ ಹೈನೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಅತ್ಯಂತ ಕಡಿಮೆ ದರದಲ್ಲಿ ಹಾಲು, ಹಾಲು ಉತ್ಪನ್ನಗಳು ಆಮದಾಗಿ. ದುಷ್ಪರಿಣಾಮ ಬೀರಲಿದೆ. ಈ ಬಗ್ಗೆ ಸರಣಿ ವರದಿ ಪ್ರಕಟಿಸಿದ ವಿಜಯ ಕರ್ನಾಟಕದ ಕಾರ್ಯ ಶ್ಲಾಘನೀಯ. - ಕೆ. ರವಿರಾಜ ಹೆಗ್ಡೆ, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ರಾಷ್ಟ್ರದಾದ್ಯಂತ ಈ ಒಪ್ಪಂದದ ವಿರುದ್ಧ ರೈತರು ಒಗ್ಗಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. ಒಪ್ಪಂದದ ದುಷ್ಪರಿಣಾಮದ ಬಗ್ಗೆ ವಿಜಯ ಕರ್ನಾಟಕವು ದೊಡ್ಡ ಮಟ್ಟದಲ್ಲಿ ವರದಿ ಪ್ರಕಟಿಸಿ ದೇಶದ ಬೆನ್ನೆಲುಬು ರೈತರ ಪರವಾಗಿ ನಿಂತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. - ಎಂ. ಸಿ ನಾಣಯ್ಯ, ಮಾಜಿ ಸಚಿವ ನಾವು ಪ್ರಕಟಿಸಿದ ಆರ್‌ಸಿಇಪಿ ಒಪ್ಪಂದಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳು ಇಲ್ಲಿವೆ 1. 2. 3. 4. 5. 6. 7. 8. 9. 10.


from India & World News in Kannada | VK Polls https://ift.tt/2PLXkYk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...