ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸುತ್ತಿರುವ ದೃಶ್ಯಾವಳಿಗಳನ್ನು ಹೊಂದಿರುವ ಸಿ.ಡಿಯಲ್ಲಿ ಇರುವ ವ್ಯಕ್ತಿ ನಾನೇ ಎಂದು ಮಾಜಿ ಸಚಿವ ಒಪ್ಪಿಕೊಂಡಿದ್ದು ಅವರ ಬಂಧನ ಯಾವಾಗ ಎಂದು ಪ್ರಶ್ನೆ ಮಾಡಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ನಾನವನಲ್ಲ' ಎಂದವರು ಈಗ 'ನಾನೇ ಅವನು' ಎನ್ನುತ್ತಿದ್ದಾರೆ! ರಮೇಶ್ ಜಾರಕಿಹೊಳಿ ಅವರೇ ಸಿಡಿ ಅಸಲಿ, ಅದು ತಾವೇ ಎಂದಮೇಲೆ ಮೊದಲು ನಿರಾಕರಿಸಿದ್ದೇಕೆ SIT ರಚನೆ ಮಾಡಿಸಿದ್ದೇಕೆ ಜನರ ಹಣ ಪೋಲು ಮಾಡಿಸಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅಲ್ಲದೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ, ಆರೋಪಿ ಒಪ್ಪಿಕೊಂಡಿದ್ದಾಯ್ತು, ಇನ್ನಾದರೂ ಸಂತ್ರಸ್ತೆಯ ದೂರಿನ ಮೆರೆಗೆ ಬಂಧಿಸಿ ಕಾನೂನು ಪಾಲಿಸುವಿರಾ? ಎಂದು ಪ್ರಶ್ನಿಸಿದೆ. ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ತನಿಖೆಯ ಸಂದರ್ಭದಲ್ಲಿ ಸಿಡಿಯಲ್ಲಿರುವ ವ್ಯಕ್ತಿ ನಾನೇ ಎಂದು ರಮೇಶ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಇದನ್ನು ಅವರು ನಿರಾಕರಿಸಿದ್ದರು. ಬದಲಾಗಿ ಸಿಡಿಯನ್ನೇ ಫೇಕ್ ಅಂದಿದ್ದರು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಟ್ವೀಟ್ ಮೂಲಕ ರಮೇಶ್ ಜಾರಕಿಹೊಳಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಅವರ ಬಂಧನಕ್ಕೂ ಆಗ್ರಹ ಮಾಡಿದೆ.
from India & World News in Kannada | VK Polls https://ift.tt/3wxsN2w