ಬಿಎಸ್‌ವೈ ನಾಯಕತ್ವ ಬದಲಾವಣೆ ಚರ್ಚೆ: ಬಿ.ಸಿ ಪಾಟೀಲ್ ಏನಂದ್ರು?

ಕೊಪ್ಪಳ: ರಾಜ್ಯದಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು ಇದೆಲ್ಲಾ ‘ಠುಸ್‌’ ಆಗುತ್ತದೆ ಅಂದಿದ್ದಾರೆ. ಕೊಪ್ಪಳದಲ್ಲಿ ಬುಧವಾರ ಮಾತನಾಡಿದ ಅವರು,ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಿನಿಂದ ಬದಲಾವಣೆಗೆ ಪುಷ್ಠಿ ಬರುತ್ತಿದೆ ಆದರೆ ಮತ್ತೆ ಠುಸ್ ಆಗುತ್ತಿದೆ ಎಂದು ಹೇಳಿದರು. ಯಡಿಯೂರಪ್ಪ ಸಿಎಂ ಆದಾಗಿಂದ ಈ ಚರ್ಚೆ ನಡೀತಾನೆ ಇದೆ. ಚರ್ಚೆ ನಡೆದಾಗೆಲ್ಲ ಠುಸ್ ಆಗುತ್ತಾ ಬಂದಿದೆ. ಶಾಸಕಾಂಗ ಪಕ್ಷದ‌ ಸಭೆ ಕರೆದ ಕೂಡಲೇ ಸಿಎಂ ಬದಲಾವಣೆ ಮಾಡ್ತಾರೆ ಅಂತಾನಾ? ನಿಮಗೆ ಯಾರು ಹೇಳಿದ್ದು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿದೆ. ಹೈಕಮಾಂಡ್‌ ಈ ಕುರಿತಾಗಿ ಒಲವು ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತತೆ ಇಲ್ಲ. ಬಿಎಸ್‌ ಯಡಿಯೂರಪ್ಪ ಆಪ್ತರು ಇದನ್ನು ನಿರಾಕರಿಸಿದ್ದಾರೆ. ರಮೇಶ್ ಜಾರಕಿಹೊಳಿ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ- ಬಿ.ಸಿ ಪಾಟೀಲ್ ಸಿಡಿ‌ಯಲ್ಲಿರೋದು ನಾನೇ ಎಂದು ರಮೇಶ ಜಾರಕಿಹೊಳಿ ಒಪ್ಪುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಇನ್ನು ಕೊಪ್ಪಳ ಜಿಲ್ಲೆ ಕಂಪ್ಲೀಟ್ ಲಾಕ್ ಡೌನ್ ಮಾಡಿದ್ದು ಅನುಕೂಲವಾಗಿದೆ. ಲಾಕ್ ಡೌನ್ ನಂತರ ಸೋಂಕು ನಿಯಂತ್ರಣಕ್ಕೆ ಬಂದಿದೆ. ಲಾಕ್ ಗೂ ಮೊದಲು ದಿನಕ್ಕೆ 600 ಸೋಂಕಿತರು ಪತ್ತೆ ಆಗುತ್ತಿದ್ದರು. ಈಗ ದಿನಕ್ಕೆ 200 ರಿಂದ 300 ಕೇಸ್ ಮಾತ್ರ ಪತ್ತೆ ಆಗುತ್ತಿದೆ. ಸೋಂಕು ಹೆಚ್ಚಲು ಮದುವೆ ಕಾರಣ ಆಗಿದ್ದವು. ಸರಕಾರ ಷರತ್ತುಬದ್ಧ ಪರವಾನಗಿ‌ ನೀಡಿದ್ರೂ ಮದುವೆಯಲ್ಲಿ ಹೆಚ್ಚು ಜನ ಸೇರುತ್ತಿದ್ದರು.ಮದುವೆ ನಡೆಸಲು ಪರವಾನಗಿ ನೀಡುವುದನ್ನು ರದ್ದು ಮಾಡಿದ್ದರಿಂದ ಸೋಂಕು ಪತ್ತೆ ಕಡಿಮೆ ಆಗಿದೆ. ಕೊಪ್ಪಳ ಜಿಲ್ಲೆಯಲ್ಲೇ ಮೊದಲು ಮದವೆಗೆ ಪರವಾನಗಿ ನೀಡುವ ಕೆಲಸ‌ ಆಗಿದ್ದು ಎಂದು ಮಾಹಿತಿ ನೀಡಿದರು. ನಮ್ಮ ಜಿಲ್ಲೆಯಂತೆ ಇತರೇ ಜಿಲ್ಲೆಯಲ್ಲೂ ಅನುಕರಣೆ ಮಾಡಲಾಗುತ್ತಿದೆ. ಹೋಂ ಐಸೋಲೇಷನ್ ಗೆ ಪರವಾನಗಿ ನೀಡಿದ್ದು ನಾವು ಮಾಡಿದ್ದ ತಪ್ಪು.ಈಗ ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗ್ತಿದೆ. ಈಗ ಸೋಂಕು ಪತ್ತೆ ಸಂಖ್ಯೆ ಶೇ.33ಕ್ಕೆ ಇಳಿಕೆ ಆಗಿದೆ. ಈ ಮೊದಲು ಅದು ಶೇ.49 ರಷ್ಟು ಇತ್ತು ಎಂದರು.


from India & World News in Kannada | VK Polls https://ift.tt/3vrcy75

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...