ಆನ್‌ಲೈನ್‌ ಮೂಲಕ ಡ್ರೈವಿಂಗ್‌ ಲೈಸೆನ್ಸ್‌ ನವೀಕರಣ ಹೇಗೆ? ಇಲ್ಲಿದೆ ಪೂರ್ಣ ವಿವರ

ಬೆಂಗಳೂರು: ಕೊರೊನಾ 2ನೇ ಅಲೆಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಬಹುತೇಕ ರಾಜ್ಯಗಳಲ್ಲಿ ಸೋಂಕು ಕೈಮೀರಿದ್ದ, ಬೇರೆ ದಾರಿಯಿಲ್ಲದೆ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಜನರು ಮನೆಯಲ್ಲಿಯೇ ಇರುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೆಲವರ ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದಿರಬಹುದು. ಕೆಲವರ ಡ್ರೈವಿಂಗ್ ಲೈಸೆನ್ಸ್ ಮಾನ್ಯತೆ ಕೆಲವೇ ದಿನಗಳಲ್ಲಿ ಮುಗಿಯಲು ಬಂದಿರಬಹುದು. ಲಾಕ್ಡೌನ್‌ನಿಂದ ಹೊರಗೆ ಹೋಗುವಂತಿಲ್ಲ. ಹಲವೆಡೆ ಆರ್‌ಟಿಒ ಕಚೇರಿಗಳೂ ಬಾಗಿಲು ತೆಗೆಯುತ್ತಿಲ್ಲ. ಹೀಗಾಗಿ ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಸಮಸ್ಯೆ ಎದುರಾಗಿದೆ. ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದಿರುವ ಕಾರಣಕ್ಕೆ ಹಲವರಿಗೆ ತುರ್ತು ಪರಿಸ್ಥಿತಿಯಲ್ಲೂ ವಾಹನಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಕೇಂದ್ರ ಸರಕಾರ ಆನ್‌ಲೈನ್‌ ಮೂಲಕವೇ (ಡ್ರೈವಿಂಗ್‌ ಲೈಸೆನ್ಸ್‌) ನವೀಕರಿಸು ಸೌಲಭ್ಯ ಒದಗಿಸಿದೆ. ಇದರಿಂದ ಆರ್‌ಟಿಒ ಕಚೇರಿಗಳಲ್ಲಿ ಜನಸಂದಣಿ ಕಡಿಮೆಯಾಗುವ ಜತೆಗೆ ಜನರು ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಸಾಧ್ಯವಾಗಿದೆ. ಆನ್‌ಲೈನ್‌ನಲ್ಲಿ ಡಿಎಲ್‌ ಹೇಗೆ?
  • ಆನ್‌ಲೈನ್ ಮೂಲಕ ಚಾಲನಾ ಪರವಾನಗಿ ನವೀಕರಿಸಲು, ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು.
  • ವೆಬ್‌ಸೈಟ್‌ಗೆ (https://ift.tt/2o2eLYb) ಭೇಟಿ ನೀಡುವ ಮೂಲಕ ಆನ್‌ಲೈನ್ ಡ್ರೈವಿಂಗ್ ಲೈಸೆನ್ಸ್ ನವೀಕರಣದ ಪ್ರಕ್ರಿಯೆ ಪ್ರಾರಂಭಿಸಬಹುದು.
  • ವೆಬ್‌ಸೈಟ್‌ಗೆ ಭೇಟಿಯಾದ ಕೂಡಲೇ ವೆಬ್‌ ಪುಟದ ಎಡಭಾಗದಲ್ಲಿ 'ಅಪ್ಲೈ' ಬಟನ್‌ ಮೇಲೆ ಕ್ಲಿಕ್ ಮಾಡಬೇಕು.
  • ನಂತರ ಸರ್ವೀಸಸ್ ಆನ್ ಡ್ರೈವಿಂಗ್ ಲೈಸೆನ್ಸ್ ಕ್ಲಿಕ್ ಮಾಡಿ, ನಂತರ ಅಲ್ಲಿ ಸೂಚಿಸುವ ಪ್ರತಿ ಹಂತವನ್ನೂ ಅನುಸರಿಸಬೇಕು.
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಂಬಂಧಪಟ್ಟ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬೇಕು.
  • ಅರ್ಜಿಯನ್ನು ಭರ್ತಿ ಮಾಡಿ, ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿದ ನಂತರ, ಆನ್‌ಲೈನ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
  • ಕೆಲವು ದಿನಗಳ ನಂತರ ಹೊಸ ಡ್ರೈವಿಂಗ್ ಲೈಸೆನ್ಸ್ ಅನ್ನು ನಿಮ್ಮ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ.
ಅಗತ್ಯ ದಾಖಲೆಗಳು:
  • ಮೊದಲು ನಿಗದಿತ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಅದನ್ನು ಭರ್ತಿ ಮಾಡಿ ಸ್ಕ್ಯಾನ್ ಮಾಡಿ ಮತ್ತೆ ಅಪ್‌ಲೋಡ್ ಮಾಡಬೇಕು.
  • 40 ವರ್ಷಕ್ಕಿಂತ ಮೇಲ್ಪಟ್ಟವರು ಅರ್ಜಿ ನಮೂನೆ ಫಾರ್ಮ್ 1 ಎಗೆ ವೈದ್ಯರಿಂದ ಪ್ರಮಾಣ ಪತ್ರ ಪಡೆಯಬೇಕು.
  • ಅವಧಿ ಮೀರಿದ ಡ್ರೈವಿಂಗ್ ಲೈಸೆನ್ಸ್
  • ಪಾಸ್‌ಪೋರ್ಟ್ ಸೈಜ್‌ನ ಫೋಟೋ
  • ಆಧಾರ್ ಕಾರ್ಡ್
ಅವಧಿ ಮುಗಿದು 30 ದಿನಗಳೊಳಗೆ ನವೀಕರಿಸಬೇಕು ಡ್ರೈವಿಂಗ್ ಲೈಸೆನ್ಸ್ ಅವಧಿಯು 20 ವರ್ಷಗಳವರೆಗೆ ಇರುತ್ತದೆ. ಅವಧಿ ಮುಗಿದ ನಂತರ ನವೀಕರಣಕ್ಕೆ 30 ದಿನಗಳ ಸಮಯ ನೀಡಲಾಗುತ್ತದೆ. ಅವಧಿ ಮುಗಿದು 30 ದಿನಗಳ ನಂತರ, ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದರೆ ದಂಡ ವಿಧಿಸಲಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ಆಧಾರದ ಮೇಲೆ ದಂಡ ವಿಧಿಸಲಾಗುತ್ತದೆ. ಸಾರಿಗೆ ರಹಿತ ಡ್ರೈವಿಂಗ್ ಲೈಸೆನ್ಸ್ ಅನ್ನು ನವೀಕರಿಸಿದರೆ, 5 ವರ್ಷಗಳವರೆಗೆ ಮಾನ್ಯತೆ ಹೊಂದಿರುತ್ತದೆ. ಸಾರಿಗೆ ವಾಹನಗಳ ಡ್ರೈವಿಂಗ್ ಲೈಸೆನ್ಸ್ ನವೀಕರಣದ ನಂತರ 3 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.


from India & World News in Kannada | VK Polls https://ift.tt/3oFfJ8L

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...