RCB vs KKR Live Score: ಟಾಸ್‌ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ!

ಚೆನ್ನೈ: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಹೊಸ ಹುರುಪು ಕಂಡುಕೊಳ್ಳುವ ಮೂಲಕ ಬ್ಯಾಕ್‌ ಟು ಬ್ಯಾಕ್ ಜಯ ದಾಖಲಿಸಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೀಗ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದವೂ ಗೆದ್ದು, ಹ್ಯಾಟ್ರಿಕ್ ಸಾಧನೆಯನ್ನು ಎದುರು ನೋಡುತ್ತಿದ್ದು, ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದೆ. ಆರ್‌ಸಿಬಿಗೆ ಆರಂಭಿಕ ಆಘಾತದೊಡ್ಡ ಮೊತ್ತ ಪೇರಿಸೋ ಲೆಕ್ಕಾಚಾರದಲ್ಲಿ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ ಆರಂಭಿಕ ಆಘಾತ ಕಂಡಿತು. ಕೆಕೆಆರ್‌ನ ಮಾಂತ್ರಿಕ ಸ್ಪಿನ್ನರ್‌ ವರುಣ್ ಚಕ್ರವರ್ತಿ ಪವರ್‌ ಪ್ಲೇ ಓವರ್‌ನಲ್ಲೇ ದಾಳಿಗಿಳಿದು ಓಪನರ್‌ ವಿರಾಟ್ ಕೊಹ್ಲಿ (5) ಮತ್ತು ರಜತ್‌ ಪಾಟಿದಾರ್‌ (1) ವಿಕೆಟ್‌ ಪಡೆದು ಚಾಂಲೆಂಜರ್ಸ್‌ಗೆ ಮರ್ಮಾಘಾತ ನೀಡಿದರು. ಈ ನಡುವೆ ಕೇವಲ ಮೂರು ವಿದೇಶಿ ಆಟಗಾರರನ್ನು ಆಡಿಸುವ ತಂತ್ರ ಆರ್‌ಸಿಬಿ ವೈಫಲ್ಯಕ್ಕೆ ಪ್ರಮುಖ ಕಾರಣವಾಗಲಿದೆ ಎಂದು ಕ್ರಿಕೆಟ್‌ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಆರ್‌ಸಿಬಿ - ಕೆಕೆಆರ್‌ ಪಂದ್ಯದ ಲೈವ್‌ ಕೇವಲ 3 ವಿದೇಶಿಗರನ್ನು ಆಡಿಸಿದ ಆರ್‌ಸಿಬಿತನ್ನ ಸ್ವದೇಶಿ ಆಟಗಾರರಲ್ಲಿ ಭಾರಿ ವಿಶ್ವ ಇಟ್ಟಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಕೇವಲ ಮೂವರು ವಿದೇಶಿ ಆಟಗಾರರನ್ನು ಮಾತ್ರವೇ ಆಡಿಸುವ ತಂತ್ರದ ಮೊರೆ ಹೋಗಿದೆ. ಎಬಿ ಡಿ'ವಿಲಿಯರ್ಸ್‌, ಕೈಲ್‌ ಜೇಮಿಸನ್ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ತಂಡದಲ್ಲಿ ಸ್ಥಾನ ಪಡೆದ ವಿದೇಶಿಗರಾಗಿದ್ದಾರೆ. ಡ್ಯಾನ್‌ ಕ್ರಿಸ್ಟಿಯನ್‌ ಅವರನ್ನು ಕೈ ಬಿಟ್ಟು ರಜತ್‌ ಪಾಟಿದಾರ್‌ ಅವರನ್ನು ಆಯ್ಕೆ ಮಾಡಿಕೊಂಡಿದೆ. ಆರ್‌ಸಿಬಿ ಪ್ಲೇಯಿಂಗ್ XIವಿರಾಟ್ ಕೊಹ್ಲಿ (ನಾಯಕ), ದೇವದುತ್ ಪಡಿಕ್ಕಲ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ'ವಿಲಿಯರ್ಸ್ (ವಿಕೆಟ್‌ಕೀಪರ್‌), ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್. ಕೆಕೆಆರ್‌ ಪ್ಲೇಯಿಂಗ್ XIನಿತೀಶ್ ರಾಣಾ, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಐಯಾನ್ ಮಾರ್ಗನ್ (ನಾಯಕ), ಶಕಿಬ್ ಅಲ್ ಹಸನ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌), ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ಪ್ರಸಿಧ್ ಕೃಷ್ಣ, ವರುಣ್ ಚಕ್ರವರ್ತಿ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3x44k5X

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...