ಪ್ಲಾಸ್ಟಿಕ್‌ ತ್ಯಾಜ್ಯದಿಂದ ಡೀಸೆಲ್‌ ತಯಾರಿ: ರಾಮನಗರ ಜಿಲ್ಲಾ ಪಂಚಾಯಿತಿಯ ಬೊಂಬಾಟ್‌ ಐಡಿಯಾ!

ಆರ್‌.ಶ್ರೀಧರ್‌ ರಾಮನಗರ: ಚೀಲಗಳು, ಬಾಟಲಿಗಳನ್ನು ಬಳಸಿಕೊಂಡು ಉತ್ಪಾದಿಸುವ ಘಟಕ ಸ್ಥಾಪನೆ ಮೂಲಕ ರಾಮನಗರ ಜಿಲ್ಲಾ ಪಂಚಾಯಿತಿ ಸದ್ದು ಮಾಡಿದೆ. ಕನಕಪುರ ತಾಲೂಕಿನ ದೊಡ್ಡಮರಳವಾಡಿ ಸಮೀಪದ ಭೀಮಸಂದ್ರದೊಡ್ಡಿಯಲ್ಲಿ ಇತ್ತೀಚೆಗೆ ಖಾಸಗಿ ಸಹಭಾಗಿತ್ವದಲ್ಲಿ ಈ ಘಟಕ ಆರಂಭಗೊಂಡಿದೆ. ಉತ್ತರ ಪ್ರದೇಶದ ಕಾನ್ಪುರ ಮತ್ತು ಗೋವಾದಲ್ಲಿಈ ಮಾದರಿಯ ಹಲವು ಘಟಕಗಳು ಅಸ್ತಿತ್ವದಲ್ಲಿವೆ. ಅದೇ ಮಾದರಿಯನ್ನು ಇಟ್ಟುಕೊಂಡು ಹೊಸ ಪ್ರಯತ್ನ ನಡೆಸಲಾಗಿದೆ. ಲ್ಯಾನ್‌ಸನ್‌ ಕಂಪನಿಯು ಜಿಪಂ ಸಹಯೋಗದಲ್ಲಿ ಪ್ಲಾಸ್ಟಿಕ್‌ನಿಂದ ಇಂಧನ ಉತ್ಪಾದಿಸುತ್ತಿದೆ. ಹಾಲಿನ ಪ್ಯಾಕೆಟ್‌, ಕವರ್‌, ಟೆಟ್ರಾ ಪ್ಯಾಕ್‌ ಸೇರಿದಂತೆ ಪ್ಲಾಸ್ಟಿಕ್‌ ಸಂಗ್ರಹಿಸಿ, ಭಟ್ಟಿ ಇಳಿಸುವ (ಪುಡಿ ಮಾಡಿ ಕುದಿಸು-ವುದು) ಮಾದರಿಯಲ್ಲಿಯೇ ಇಂಧನ ಉತ್ಪಾದಿಸುತ್ತಿದೆ. ಒಂದು ಕೆಜಿ ಪ್ಲಾಸ್ಟಿಕ್‌ನಿಂದ 400ರಿಂದ 600 ಎಂಎಲ್‌ ಇಂಧನ ದೊರೆಯುತ್ತಿದ್ದು, ಇದನ್ನು ಪರಿಷ್ಕರಿಸಿ ಡೀಸೆಲ್‌ ತಯಾರಿಸಲಾಗುತ್ತಿದೆ. ಐದು ಕಡೆ ಘಟಕಕ್ಕೆ ಚಿಂತನೆ ಭೀಮಸಂದ್ರ ಮಾದರಿಯಲ್ಲಿ ಜಿಲ್ಲೆಯ ಐದು ಕಸ ವಿಲೇವಾರಿ ಘಟಕದಲ್ಲಿ ಡೀಸೆಲ್‌ ಘಟಕ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಘಟಕ ನಿರ್ವಹಣೆಗೆ ಹೆಚ್ಚಿನ ವೆಚ್ಚ ಆಗುವುದಿಲ್ಲ.


from India & World News in Kannada | VK Polls https://ift.tt/3ef4Pl3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...