ಇದು ಮೂರ್ಖ ಸರ್ಕಾರ, ಇನ್ನೂ ಬುದ್ಧಿ ಬಂದಿಲ್ಲ, ಎಚ್‌ಡಿಕೆ ಕಿಡಿ

ಬೆಂಗಳೂರು: ಇದು ಮೂರ್ಖ ಸರ್ಕಾರ, ಇವರಿಗೆ ಇನ್ನೂ ಬುದ್ಧಿ ಬಂದಿಲ್ಲ! ಹೌದು ಹೀಗಂತ ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದು ಮಾಜಿ ಸಿಎಂ .ಕೋವಿಡ್‌ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರು ರಾಜ್ಯ ಸರ್ಕಾರ ಮೆಟ್ರೋ ಫೇಸ್ 1 ಹಾಗೂ 2 ಗೆ ಅನುದಾನ ಕೊಟ್ಟಿದ್ದಕ್ಕಾಗಿ ಧನ್ಯವಾದ ಕೋರಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋ ರೈಲು ಫೇಸ್‌ 1 ಹಾಗೂ 2 ಗೆ ಅನುದಾನಕ್ಕೆ ಧನ್ಯವಾದ ಕೋರಿದ್ದಾರೆ. ಆದರೆ ಇದು ಕೇಂದ್ರ ಕೊಟ್ಟ ಭಿಕ್ಷೆ ಅಲ್ಲ. ಸಾವಿನ ಮನೆಯಲ್ಲಿ ನಾವು ಇದ್ದೇವೆ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ಹಣ ಖರ್ಚು ಮಾಡುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದ್ದಾರೆ. ಈ ಮೂರ್ಖ ಸರ್ಕಾರ ಇದನ್ನು ಮನವರಿಕೆ ಮಾಡಿಕೊಳ್ಳಬೇಕು. ಸದ್ಯ ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ಇಲ್ಲ, ಆಕ್ಸಿಜನ್ ಕೊರತೆ ಇದೆ, ಔಷಧಿ ಇಲ್ಲ. ಜನ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ಖರ್ಚು ಮಾಡಿ ಜಾಹೀರಾತು ಕೊಡುತ್ತಿದೆ ಎಂದು ಕಿಡಿಕಾರಿದ್ದಾರೆ. ನಾಡಿಗೆ ಏನು ಸಂದೇಶ ಕೊಡುತ್ತೀರಿ? ಜನರ ಜೊತೆ ಚೆಲ್ಲಾಟ ಆಡುತ್ತಿದ್ದೀರಿ ಇದು ನೋವಿನ ಸಂಗತಿ ಎಂದ ಎಚ್‌ಡಿಕೆ ಸರ್ಕಾರ ಜನರ ರಕ್ಷಣೆ ಮಾಡುವತ್ತ ಗಮನ ಹರಿಸಬೇಕು ಇಲ್ಲಾಂದ್ರೆ ಜನರು ರೊಚ್ಚಿಗೇಳುವ ದಿನ ದೂರ ಇಲ್ಲ ಎಂಬುವುದನ್ನು ಸರ್ಕಾರ ಅರಿಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.


from India & World News in Kannada | VK Polls https://ift.tt/3dGbqGh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...