ವೀಕೆಂಡ್‌ ಕರ್ಫ್ಯೂ: ಜನರು ಉತ್ತಮ ಸಹಕಾರ ಕೊಟ್ಟಿದ್ದಾರೆ ಎಂದ್ರು ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂಗೆ ಜನರು ಉತ್ತಮ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ ಎಂದು ಗೃಹ ಸಚಿವ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆ ವರೆಗೂ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸಮಯ ಇತ್ತು, ನಂತರ ಎಲ್ಲಾ ಬಂದ್ ಆಗಿದೆ. ಕರ್ಫ್ಯೂಗೆ ಜನರು ಉತ್ತಮ ಸಹಕಾರ ಕೊಟ್ಟಿದ್ದಾರೆ ಎಂದರು. ಬೆಂಗಳೂರಿನ ಕೆ.ಆರ್‌ ಮಾರ್ಕೆಟ್‌ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಾದ ಬಳಿಕ ಮಾತನಾಡಿದ ಅವರು, ಕೆ ಆರ್ ಮಾರುಕಟ್ಟೆ ಜಂಕ್ಷನ್ ಅತಿ ಮುಖ್ಯ , ಅತಿ ಹೆಚ್ಚು ಜನ ಸೇರುವ ಜಾಗ , ತುಂಬಾ ಮಾರುಕಟ್ಟೆ ವ್ಯಾಪಾರ ಆಗುವ ಜಾಗ ಪಕ್ಕದಲ್ಲಿ ವಿಕ್ಟೋರಿಯಾ ಆಸ್ಪತ್ರೆಯೂ ಇದೆ. ನಮ್ಮ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ ಹಾಗೂ ಸಾರ್ವಜನಿಕರು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಮಾರುಕಟ್ಟೆಯನ್ನು ಶುಚಿಯಾಗಿಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಒಟ್ಟು 8000 ಜನ ಪೊಲೀಸ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಬೇರೆ ಭಾಗದಲ್ಲಿ ಕೂಡ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಪೊಲೀಸ್ ಸಿಬ್ಬಂದಿಗಳಿಗೆ ಕೆಲವು ಕಡೆ ಪಾಸಿಟಿವ್ ಕೇಸ್ ಬಂದಿದೆ.ಬೆಂಗಳೂರಿನಲ್ಲಿ ಪೋಲಿಸ್ ಅಧಿಕಾರಿ, ಸಿಬ್ಬಂದಿಗಳಿಗೆ ಮೂರು ಕೋವಿಡ್ ಕೇರ್ ಸೆಂಟರ್ ಮಾಡಿದ್ದೇವೆ .ನಮ್ಮ ಅಧಿಕಾರಿಗಳ ಜೊತೆಗೆ ಅವರ ಕುಟುಂಬ ಕೂಡ ಮುಖ್ಯ ಅವರ ಆರೋಗ್ಯ ಕೂಡ ಗಮನಿಸುತ್ತಿದ್ದೇವೆ ಎಂದು ತಿಳಿಸಿದರು. ಮಹಿಳೆಯೊಬ್ಬರಿಗೆ ಮಾಸ್ಕ್ ನೀಡಿದ ಬೊಮ್ಮಾಯಿ ಇನ್ನು ಕೆಆರ್‌ ಮಾರ್ಕೆಟ್‌ ಪರಿಶೀಲನೆ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆಯೊಬ್ಬರು ಮಾಸ್ಕ್‌ ಧರಿಸಿರಲಿಲ್ಲ. ಆ ಸಂದರ್ಭದಲ್ಲಿ ಅವರನ್ನು ಏಕೆ ಮಾಸ್ಕ್ ಧರಿಸಿಲ್ಲ ಎಂದು ಬೊಮ್ಮಾಯಿ ಪ್ರಶ್ನಿಸಿದರು. ಅಲ್ಲದೆ ಮಾಸ್ಕ್‌ ಒಂದನ್ನು ನೀಡಿ ಧರಿಸುವಂತೆ ಸೂಚಿಸಿದರು.


from India & World News in Kannada | VK Polls https://ift.tt/3nfYxps

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...