‘ನನ್ನ ಕೆಲಸವನ್ನು ಅತ್ಯಂತ ಶ್ರೇಷ್ಠ ರೀತಿಯಲ್ಲಿ ನಿರ್ವಹಿಸಿದ ತೃಪ್ತಿ ನನಗಿದೆ’; ಸಿಜೆಐ ಬೊಬ್ಡೆ ಭಾವುಕ ನಿರ್ಗಮನ

ಹೊಸದಿಲ್ಲಿ: ‘ಸಂತೋಷ, ಸುಮಧುರ ನೆನಪು ಮತ್ತು ಸದ್ಭಾವನೆಯೊಂದಿಗೆ ಸುಪ್ರೀಂ ಕೋರ್ಟ್‌ನಿಂದ ನಿರ್ಗಮಿಸುತ್ತಿದ್ದೇನೆ. ನನ್ನ ಕೆಲಸವನ್ನು ಅತ್ಯಂತ ಶ್ರೇಷ್ಠ ರೀತಿಯಲ್ಲಿ ನಿರ್ವಹಿಸಿದ ತೃಪ್ತಿ ನನಗಿದೆ’. ಇದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೊಬ್ಡೆ ಅವರು ಶುಕ್ರವಾರ ತಮ್ಮ ಸೇವಾವಧಿಯ ಕೊನೆಯ ದಿನ ಆಡಿದ ನುಡಿಗಳು. ಐತಿಹಾಸಿಕ ಅಯೋಧ್ಯೆ ತೀರ್ಪು ಸೇರಿದಂತೆ ಪ್ರಮುಖ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದ ನ್ಯಾ. ಬೊಬ್ಡೆ ಅವರು ಶುಕ್ರವಾರ (ಏ.23) ನಿವೃತ್ತರಾದರು. ಇದರೊಂದಿಗೆ 21 ವರ್ಷಗಳ ನ್ಯಾಯಾಧೀಶ ಹುದ್ದೆಗೆ ಅವರು ಭಾವುಕ ವಿದಾಯ ಹೇಳಿದರು. 2019ರ ನವೆಂಬರ್‌ನಲ್ಲಿ ಅವರು ಭಾರತದ 47ನೇ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಕೋವಿಡ್‌-19 ಸಾಂಕ್ರಾಮಿಕ ರೋಗದ ಸವಾಲಿನ ಪರಿಸ್ಥಿತಿಯಲ್ಲಿ ಸಿಜೆಐ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದ ಅವರು, ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಆದ್ಯತೆ ನೀಡಿದ್ದರು. ಈ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 50,000 ಪ್ರಕರಣಗಳು ಇತ್ಯರ್ಥಗೊಂಡಿವೆ. ‘ನ್ಯಾಯಾಧೀಶರಾಗಿ 21 ವರ್ಷಗಳ ಸೇವಾ ಅವಧಿಯಲ್ಲಿ, ಸುಪ್ರೀಂ ಕೋರ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿನ ಅನುಭವ ಶ್ರೀಮಂತವಾಗಿದೆ. ಸಹೋದ್ಯೋಗಿ ನ್ಯಾಯಾಧೀಶರೊಂದಿಗಿನ ನಿಕಟ ಸ್ನೇಹ ಅದ್ಭುತವಾಗಿತ್ತು’ ಎಂದು ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯ ಜವಾಬ್ದಾರಿಯನ್ನು ನ್ಯಾ. ಎನ್‌ ಬಿ ರಮಣ ಅವರಿಗೆ ವರ್ಗಾಯಿಸುತ್ತಿದ್ದು, (48ನೇ ಸಿಜೆಐ) ಅವರು ಈ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂದು ಬೊಬ್ಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/3tN2rbZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...