ಕಲಬುರಗಿ: ಎರಡುಕಾರಿನಲ್ಲಿ ಸಾಗಿಸುತ್ತಿದ್ದ ತಂಡದ ಮೇಲೆ ರೌಡಿ ನಿಗ್ರಹ ದಳದ ಪೋಲಿಸರು ದಾಳಿ ಮಾಡಿ ಹಿಡಿಯಲು ಯತ್ನಿಸಿದಾಗ ಪಿಎಸ್ ಐ ಮೇಲೆ ಹಲ್ಲೆಗೆ ಮುಂದಾದ ವ್ಯಕ್ತಿಯ ಕಾಲಿಗೆ ಪಿಎಸ್ ಐ ಕೋತ್ವಾಲ್ ಗುಂಡು ಹಾರಿಸಿ ಆತ್ಮರಕ್ಷಣೆ ಮಾಡಿಕೊಂಡಿರುವ ಘಟನೆ ಫೆ.21ರ ತಡರಾತ್ರಿ ನಗರದ ಹೊಲವಲಯದ ಹುಮ್ನಾಬಾದ್ ರಸ್ತೆಯ ಸ್ವಾಮಿ ಸಮರ್ಥ ಬಳಿ ನಡೆದಿದೆ . ಕಾರಿನಲ್ಲಿ ಹುಮ್ನಾಬಾದ್ ದಿಂದ ವಿಜಯಪುರಕ್ಕೆ ಮುನ್ನೂರು ಕೆಜಿಯಷ್ಟು ಗಾಂಜಾವನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯನ್ನಾಧರಿಸಿ ಸ್ವಾಮಿ ಸಮರ್ಥದ ಬಳಿ ರೌಡಿ ನಿಗ್ರಹ ದಳದ ಪಿಎಸ್ ಐ ವಾಹಿದ್ ಕೋತ್ವಾಲ್ ನೇತೃತ್ವದಲ್ಲಿ ದಾಳಿ ಮಾಡಿದ್ದರು. ಈ ದಾಳಿಯ ವೇಳೆಯಲ್ಲಿ ಗಾಂಜಾ ಸಪ್ಲೈ ಮಾಡುತ್ತಿದ್ದ ಕಾರಿನಲ್ಲಿದ್ದ ಭೀಮು ಎನ್ನುವ ವ್ಯಕ್ತಿ ಪರಾರಿಯಾಗಲು ಯತ್ನಿಸಿದ್ದಲ್ಲದೆ ಪಿಎಸ್ ಐ ಕೋತ್ವಾಲ್ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸೈ ತಮ್ಮ ಸರ್ವೀಸ್ ರಿವಾಲ್ವಾರ್ ನಿಂದ ಕಾಲಿಗೆ ಗುಂಡು ಹೊಡೆದಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಭೀಮನನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿ ಇಬ್ಬರು ಮಹಿಳೆಯರು ಹಾಗೂ ಇನ್ನಿಬ್ಬರು ಪುರುಷರು ಇದ್ದರೆಂದು ತಿಳಿದು ಬಂದಿದೆ.
from India & World News in Kannada | VK Polls https://ift.tt/3kcDnqT